For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ 9 ಸ್ಟಾರ್ ಹೀರೋಯಿನ್ಸ್

  |
  Darshan Birthday: ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ 9 ಸ್ಟಾರ್ ಹೀರೋಯಿನ್ಸ್ | FILMIBEAT KANNADA

  ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ, ಡಿ ಬಾಸ್ ದರ್ಶನ್ ಅವರು ನಿನ್ನೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂಬಿ ನಿಧನ, ಶಿವಕುಮಾರ ಸ್ವಾಮೀಜಿ ನಿಧನದಿಂದ ಸರಳ ಹುಟ್ಟುಹಬ್ಬಕ್ಕೆ ಕರೆ ನೀಡಿದ್ದ ದಾಸ, ಯಾವುದೇ ಕೇಕ್, ಕಟೌಟ್, ಹಾರ ತರದೇ ಅನಾಥ ಮಕ್ಕಳ ವಿದ್ಯಾಬ್ಯಾಸ ಹಾಗೂ ಅನಾಥಾಶ್ರಮಗಳಿಗೆ ನೆರವಾಗುವಂತೆ ವಿನಂತಿಸಿಕೊಂಡಿದ್ದಾರೆ.

  ಅದರಂತೆ ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಡಿ ಬಾಸ್ ಮನೆಯ ಬಳಿ ಬಂದು ದವಸ ಧಾನ್ಯಗಳನ್ನ ನೀಡಿ ಶುಭಕೋರಿದ್ದರು. ಅಭಿಮಾನಿಗಳ ಜೊತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ದಾಸನ ಬರ್ತಡೇಗೆ ವಿಶ್ ಮಾಡಿದ್ರು.

  'ಯಜಮಾನ'ನ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ, ಯಾರ್ಯಾರ ವಿಶ್ ಹೇಗಿತ್ತು?

  ಪುನೀತ್ ರಾಜ್ ಕುಮಾರ್, ಪ್ರೇಮ್, ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ವಸಿಷ್ಠ ಸಿಂಹ, ಜಗ್ಗೇಶ್ ಸೇರಿದಂತೆ ಹಲವು ವಿಶ್ ಮಾಡಿದ್ರು. ಇವರ ಜೊತೆ ಡಿ ಬಾಸ್ ಗೆ ಹೀರೋಯಿನ್ಸ್ ಕೂಡ ಬರ್ತಡೇ ವಿಶ್ ಮಾಡಿದ್ದು, ಪ್ರಮುಖವಾಗಿ 9 ನಾಯಕಿಯರ ಪಟ್ಟಿ ಮಾಡಲಾಗಿದೆ. ಯಾರದು 9 ನಟಿಯರು? ಮುಂದೆ ಓದಿ.....

  ರಚಿತಾ ರಾಮ್

  ''ಈ ಸಂತೋಷದ ದಿನ ಮರಳಿ ಮರಳಿ ಬರಲಿ..,,ಹುಟ್ಟುಹಬ್ಬದ ಶುಭಾಶಯಗಳು @dasadarshan ಸರ್,,,'' ಎಂದು ಬುಲ್ ಬುಲ್ ರಚಿತಾ ರಾಮ್ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ಬುಲ್ ಬುಲ್, ಅಂಬರೀಶ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿದ್ದ ರಚಿತಾ, ಜಗ್ಗುದಾದ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು.

  ದರ್ಶನ್ 55ನೇ ಚಿತ್ರಕ್ಕೆ ಫೈಟ್: ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಜಾಹೀರಾತು

  ರಕ್ಷಿತಾ ಪ್ರೇಮ್

  ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ ಮತ್ತು ಅಯ್ಯ ಚಿತ್ರಗಳ ಮೂಲಕ ದರ್ಶನ್ ಗೆ ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದ ರಕ್ಷಿತಾ ಪ್ರೇಮ್ ದಾಸನಿಗೆ ಶುಭಕೋರಿದ್ದಾರೆ. ''ಹ್ಯಾಪಿ ಬರ್ತಡೇ ದರ್ಶನ್. ಖುಷಿಯಾಗಿರಿ, ಚೆನ್ನಾಗಿರಿ, ಆ ದೇವರು ಒಳ್ಳೆಯದು ಮಾಡಲಿ'' ಎಂದು ಟ್ವೀಟ್ ಮಾಡಿದ್ದಾರೆ.

  ಶಾನ್ವಿ ಶ್ರೀವಾಸ್ತವ್

  ನಾನು ನಿಮ್ಮ ಜೊತೆ ಮುಂದಿನ ಚಿತ್ರದಲ್ಲಿ ಒಂದು ಫೋಟೋ ತೆಗೆದುಕೊಳ್ಳಬೇಕು. ಅದನ್ನ ನಿಮ್ಮ ಮುಂದಿನ ಹುಟ್ಟುಹಬ್ಬಕ್ಕೆ ಅದನ್ನ ಪೋಸ್ಟ್ ಮಾಡ್ಬೇಕು. ಹ್ಯಾಪಿ ಬರ್ತಡೇ ದರ್ಶನ್ ಸರ್'' ಎಂದು ಶಾನ್ವಿ ಶ್ರೀವಾಸ್ತವ್ ಶುಭ ಕೋರಿದ್ದಾರೆ. ತಾರಕ್ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದರು.

  ಚೈತ್ರಾ ಚಂದ್ರನಾಥ್

  ''ನಿಮ್ಮ ಜೀವನದಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಹಾಗೂ ಎಲ್ಲಾ ಕಾರ್ಯಗಳಲ್ಲೂ ಜಯವಿರಲಿ'' ಎಂದು ದರ್ಶನ್ ಅಭಿನಯದ ವಿರಾಟ್ ಚಿತ್ರದಲ್ಲಿ ನಾಯಕಿಯಾಗಿದ್ದ ಚೈತ್ರಾ ಚಂದ್ರನಾಥ್ ದಾಸನಿಗೆ ವಿಶ್ ಮಾಡಿದ್ದಾರೆ.

  ವಿಡಿಯೋ : ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಣೆ

  ರಶ್ಮಿಕಾ ಮಂದಣ್ಣ

  ಅತ್ಯಂತ ವಿನಮ್ರ ವ್ಯಕ್ತಿ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಯಜಮಾನ ಚಿತ್ರದಲ್ಲಿ ದಾಸನ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ.

  ಮೇಘನಾ ರಾಜ್

  ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪತ್ನಿ ಭಾನುಮತಿ ಪಾತ್ರದಲ್ಲಿ ನಟಿಸಿರುವ ಮೇಘನಾ ರಾಜ್ ದರ್ಶನ್ ಗೆ ವಿಶ್ ಮಾಡಿದ್ದಾರೆ.

  ರಾಗಿಣಿ ದ್ವೀವೇದಿ

  ದರ್ಶನ್ ಜೊತೆ ಸಿನಿಮಾ ಮಾಡಿಲ್ಲ ಅಂದ್ರೂ, ಡಿ ಬಾಸ್ ಜೊತೆ ಉತ್ತಮ ಸ್ನೇಹ ಹೊಂದಿರುವ ನಟಿ ರಾಗಿಣಿ ದ್ವಿವೇದಿ ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ್ದಾರೆ.

  ಮಾಲಾಶ್ರೀ

  ಕಲಾಸಿಪಾಳ್ಯ ಚಿತ್ರದ ದೃಶ್ಯವೊಂದನ್ನ ಹಂಚಿಕೊಂಡಿರುವ ಮಾಲಾಶ್ರೀ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ, ರಾಮು, ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಇದ್ದಾರೆ.

  ಅಮೂಲ್ಯ

  ''ನೀವು ಮಾಡುವ ಎಲ್ಲಾ ಕೆಲಸಗಳಿಗೂ ಯಶಸ್ಸು ಸಿಗಲಿ. ಆ ದೇವರ ನಿಮಗೆ ಒಳ್ಳೆಯದು ಮಾಡಲಿ'' ಎಂದು ಅಮೂಲ್ಯ ವಿಶ್ ಮಾಡಿದ್ದಾರೆ. ದರ್ಶನ್ ಗೆ ಅಮೂಲ್ಯ ಅಂದ್ರೆ ವಿಶೇಷ ಮತ್ತು ಅಭಿಮಾನ ಜಾಸ್ತಿ. ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರು ದಾಸನ ಮನೆಗೆ ಹೋಗಿ ವಿಶ್ ಮಾಡಿದ್ದಾರೆ.

  English summary
  Rachita ram, Ragini Dwivedi, rachita ram, amulya, malashree are taken their twitter account to wish darshan's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X