»   » ಎಲ್ಲಾ ಸ್ಟಾರ್ ನಟಿಯರು ಫಿದಾ ಆಗಿರುವುದು ಒಂದೇ ಡ್ರಸ್ ಗೆ

ಎಲ್ಲಾ ಸ್ಟಾರ್ ನಟಿಯರು ಫಿದಾ ಆಗಿರುವುದು ಒಂದೇ ಡ್ರಸ್ ಗೆ

Posted By:
Subscribe to Filmibeat Kannada

ಸಿನಿಮಾದಲ್ಲಿ ದಿನದಿಂದ ದಿನಕ್ಕೆ ಟ್ರೆಂಡ್ ಬದಲಾಗುತ್ತಿರುತ್ತದೆ. ಆದರೆ ಕೆಲವು ಸಕ್ಸಸ್ ಫಾರ್ಮುಲಾ ಗೆದ್ದರೆ ಒಂದಿಷ್ಟು ಸಿನಿಮಾ ಮಂದಿ ಅದರ ಹಿಂದೆಯೇ ಬೀಳುತ್ತಾರೆ. ಒಂದು ರೀತಿಯ ಸಿನಿಮಾ ಗೆದ್ದರೆ ಅದೇ ರೀತಿಯ ಕಥೆಯನ್ನ ಹೊಂದಿರುವಂತಹ ಚಿತ್ರಗಳನ್ನ ನಿರ್ದೇಶನ ಮಾಡಲು ಮುಂದಾಗುವುದು ಸರ್ವೇ ಸಾಮಾನ್ಯ. ಆದರೆ ಸ್ಯಾಂಡಲ್ ವುಡ್ ನಲ್ಲಿ ನಟಿಯರೆಲ್ಲರೂ ಒಂದೇ ಡ್ರಸ್ ಹಿಂದೆ ಬಿದ್ದಿದ್ದಾರೆ.

ಓಲ್ಡ್ ಈಸ್ ಗೋಲ್ಡ್ ಎನ್ನುವ ರೀತಿಯಲ್ಲಿ ಹಳೆ ಕಾಲದ ನಾಯಕಿಯರು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದ ಡ್ರಸ್ ಹಿಂದೆ ಈಗಿನ ಟಾಪ್ ಹೀರೋಯಿನ್ ಗಳು ಬಿದ್ದಿದ್ದಾದೆ. ಸಾಲು ಸಾಲಾಗಿ ಬರುತ್ತಿರುವ ಚಿತ್ರಗಳಲ್ಲಿ ನಾಯಕಿಯರು ಇದೇ ಡ್ರಸ್ ಹಾಕಿಕೊಂಡು ಹೀರೋಗಳನ್ನ ಇಂಪ್ರೆಸ್ ಮಾಡುವುದರ ಜೊತೆಯಲ್ಲಿ ತೆರೆ ಮೇಲೆ ಅಂದವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುದೀಪ್ ಜೊತೆಗೆ ತೆರೆ ಹಂಚಿಕೊಂಡ 'ಬ್ರಹ್ಮಗಂಟು' ಗುಂಡಮ್ಮ

ಹಾಗಾದರೆ ಅದ್ಯಾವ ಡ್ರಸ್, ಎಲ್ಲಾ ನಾಯಕಿಯರನ್ನ ಫಿದಾ ಮಾಡಿರುವಂತದ್ದು? ಎಲ್ಲಾ ನಾಯಕಿಯರು ಇದೇ ಡ್ರಸ್ ಬೇಕು ಅಂತ ಪಟ್ಟು ಹಿಡಿದಿರುವುದು ಯಾಕೆ? ಯಾವ ಯಾವ ಹೀರೋಯಿನ್ಸ್ ಈ ಡ್ರಸ್ ಹಿಂದೆ ಬಿದ್ದಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ . ಮುಂದೆ ಓದಿ

ಲಂಗ ದಾವಣಿಗೆ ನಾಯಕಿಯರು ಫಿದಾ

ಸ್ಯಾಂಡಲ್ ವುಡ್ ನ ನಾಯಕಿಯರು ಲಂಗ ದಾವಣಿಗೆ ಫಿದಾ ಆಗಿದ್ದಾರೆ. ಹಿಂದಿನ ಕಾಲದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಈ ಉಡುಪನ್ನು ಎಲ್ಲಾ ನಾಯಕಿಯರು ತಮ್ಮ ಸಿನಿಮಾಗಳಲ್ಲಿ ಬಳಸುತ್ತಿದ್ದಾರೆ.

ಶೃತಿ ಫಿದಾ ಆಗಿದ್ದು ಲಂಗ-ದಾವಣಿಗೆ

ನಟಿ ಶೃತಿ ಹರಿಹರನ್ ಲಂಗ-ದಾವಣಿಗೆ ಫಿದಾ ಆಗಿದ್ದಾರೆ. ತಾವು ಅಭಿನಯಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಲಂಗ-ದಾವಣಿ ಧರಿಸಿ ವೀಕ್ಷರನ್ನ ಮೋಡಿ ಮಾಡಲಿದ್ದಾರೆ.

ಆಮಿಗೂ ಇಷ್ಟವಾಯ್ತು ಲಂಗ-ದಾವಣಿ

ಪ್ರತಿ ಸಿನಿಮಾಗಳಲ್ಲಿಯೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ನಟಿ ಆಮಿ ಜಾಕ್ಸನ್ ಕೂಡ ನಮ್ಮ ಸಂಪ್ರದಾಯದ ಲಂಗ-ದಾವಣಿಗೆ ಫಿದಾ ಆಗಿದ್ದಾರೆ. ದಿ ವಿಲನ್ ಚಿತ್ರದಲ್ಲಿ ಲಂಗ-ದಾವಣಿ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಸೀತಾ ರಾಮ ಕಲ್ಯಾಣಕ್ಕೂ ಲಂಗ-ದಾವಣಿ

ನಟಿ ರಚಿತಾ ರಾಮ್ ಅಭಿನಯ ಮಾಡುತ್ತಿರುವ ಸೀತಾ ರಾಮ ಕಲ್ಯಾಣ ಚಿತ್ರದಲ್ಲಿ ಲಂಗ-ದಾವಣಿ ಧರಿಸಿದ್ದಾರೆ. ಡಿಂಪಲ್ ಕ್ವೀನ್ ಅಭಿನಯದ ಎಲ್ಲಾ ಚಿತ್ರಗಳಲ್ಲಿಯೂ ಸಖತ್ ಮಾಡ್ರನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಸೀತಾ ರಾಮ ಕಲ್ಯಾಣದಲ್ಲಿ ಲಂಗ-ದಾವಣಿ ಹಾಕಿಕೊಂಡು ಹಳ್ಳಿ ಹುಡುಗಿ ಆಗಿದ್ದಾರೆ.

ಮುಂಬೈ ಬೆಡಗಿಗೂ ಇಷ್ಟವಾಯ್ತು ಈ ಡ್ರಸ್

ಮುಂಬೈ ಬೆಡಗಿ ಪ್ಯಾರ್ ಗೆ ಆಗ್ಬಿಟೈತೆ ಹುಡುಗಿ ಪಾರೂಲ್ ಯಾದವ್ ಕೂಡ ತಮ್ಮ ಮುಂದಿನ ಸಿನಿಮಾಗಾಗಿ ಲಂಗ-ದಾವಣಿ ಹಾಕಿಕೊಂಡು ಕ್ಯಾಮೆರಾ ಮುಂದೆ ಅಭಿನಯ ಮಾಡಿದ್ದಾರೆ.

ಸದ್ದಿಲ್ಲದ್ದೆ ಚಿತ್ರೀಕರಣ ಮುಗಿಸಿದ ಕನ್ನಡದ ಎರಡು ನಿರೀಕ್ಷಿತ ಸಿನಿಮಾಗಳು

English summary
Half-saree is back in trend. Kannada Actresses Sruthi Hariharan, Rachita Ram, Amy Jackson and Parul Yadav are wearing Half-sarees in movies.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X