»   » 'ಆಪರೇಷನ್ ಅಲಮೇಲಮ್ಮ'ನಿಗೆ ಜೈಕಾರ ಹಾಕಿದ ಗಣೇಶ್, ರಕ್ಷಿತ್

'ಆಪರೇಷನ್ ಅಲಮೇಲಮ್ಮ'ನಿಗೆ ಜೈಕಾರ ಹಾಕಿದ ಗಣೇಶ್, ರಕ್ಷಿತ್

Posted By:
Subscribe to Filmibeat Kannada

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಭಿನ್ನ ಸಿನಿಮಾ 'ಆಪರೇಷನ್ ಅಲಮೇಲಮ್ಮ'. ಟೈಟಲ್, ಪಾತ್ರಗಳು, ಕಥೆ ಹೀಗೆ ಎಲ್ಲದರಲ್ಲೂ ಸುನಿ ಸ್ಟೈಲ್ ಎದ್ದು ಕಾಣುತ್ತಿದೆ. ಮೊದಲ ಪೋಸ್ಟರ್ ನಿಂದಲೇ ಕುತೂಹಲ ಹುಟ್ಟುಹಾಕಿದ್ದ ಈ ಸಿನಿಮಾ ಟೀಸರ್, ಹಾಡುಗಳ ಮೂಲಕ ಭರವಸೆ ಮೂಡಿಸಿತ್ತು. ಈಗ ಟ್ರೈಲರ್ ಬಿಡುಗಡೆ ಮಾಡಿದ್ದು, ಕನ್ನಡ ಚಿತ್ರತಾರೆಯರು ಶಬ್ಬಾಶ್ ಎನ್ನುತ್ತಿದ್ದಾರೆ.

ಹೌದು, 'ಆಪರೇಷನ್ ಅಲಮೇಲಮ್ಮ'ನಿಗೆ ಕನ್ನಡ ಸೆಲೆಬ್ರಿಟಿಗಳು ಬೋಲ್ಡ್ ಆಗಿದ್ದಾರೆ. ಟ್ರೈಲರ್ ನಲ್ಲೇ ಮನರಂಜನೆಯ ಕಿಕ್ ಕೊಟ್ಟಿರುವ ಸುನಿಗೆ ಜೈಕಾರ ಹಾಕ್ತಿದ್ದಾರೆ. ಪರ್ಮಿ ಮತ್ತು ಅನನ್ಯ ಟೀಚರ್ ನ ಹಾಡಿ ಹೊಗಳುತ್ತಿದ್ದಾರೆ.

ಹಾಗಾದ್ರೆ, ಸ್ಯಾಂಡಲ್ ವುಡ್ ನ ಯಾವೆಲ್ಲಾ ಸ್ಟಾರ್ ಗಳು 'ಆಪರೇಷನ್ ಅಲಮೇಲಮ್ಮ'ನಿಗೆ ಜೈಕಾರ ಹಾಕಿದ್ದಾರೆ ಎಂಬುದನ್ನ ಮುಂದೆ ನೋಡಿ....

ರಕ್ಷಿತ್ ಶೆಟ್ಟಿ ಫಿದಾ

'ಆಪರೇಷನ್ ಅಲಮೇಲಮ್ಮ' ಚಿತ್ರದ ಟ್ರೈಲರ್ ಅದ್ಭುತವಾಗಿದೆ. ಅತ್ಯುತ್ತಮ ಚಿತ್ರದ ಮೂಲಕ ಸುನಿ ಕಮ್ ಬ್ಯಾಕ್ ಆಗ್ತಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಗೋಲ್ಡನ್ ಸ್ಟಾರ್ ಗೋಲ್ಡನ್ ಟಾಕ್

ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಆಪರೇಷನ್ ಅಲಮೇಲಮ್ಮ' ಚಿತ್ರದ ಟ್ರೈಲರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಸುನಿಯ ಕಿಡ್ನ್ಯಾಪ್ ಕಹಾನಿಗೆ ಗೋಲ್ಡನ್ ಸ್ಟಾರ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಅನೂಪ್ ಭಂಡಾರಿ ಜೈಕಾರ

'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ 'ಆಪರೇಷನ್ ಅಲಮೇಲಮ್ಮ'ನ ಟ್ರೈಲರ್ ಗೆ ಕಂಡು ಖುಷಿಯಾಗಿದ್ದು, ಸುನಿಯ ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿರೂಪ್ ಭಂಡಾರಿ

'ರಂಗಿತರಂಗ' ಚಿತ್ರದ ನಟ ನಿರೂಪ್ ಭಂಡಾರಿ ಕೂಡ 'ಆಪರೇಷನ್ ಅಲಮೇಲಮ್ಮ'ನಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ರಿಷಬ್ ಶೆಟ್ಟಿ

ಸಿಂಪಲ್ ಸುನಿ ತಮ್ಮ ಚಿತ್ರದ ಟ್ರೈಲರ್ ನಿಂದಲೇ ಪ್ರೇಕ್ಷಕರ ಕುತೂಹಲವನ್ನ ಹೆಚ್ಚಿಸುತ್ತಾರೆ. ಅದು ಮತ್ತೆ 'ಆಪರೇಷನ್ ಅಲಮೇಲಮ್ಮ' ಸಾಬೀತು ಮಾಡಿದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಪರ್ಶಾ ರೇಖಾ

'ಸೂಪರ್ ಇನ್ ದಿ ಮಾರ್ಕೆಟ್ ಇನ್ ದಿ ಮೆಜೆಸ್ಟಿಕ್' ನಟಿ ಸ್ಪರ್ಶ ರೇಖಾ 'ಆಪರೇಷನ್ ಅಲಮೇಲಮ್ಮ'ನಿಗೆ ಕೊಟ್ಟ ಕಾಮೆಂಟ್ ಇದು. ಇಷ್ಟು ಸಾಕು ಅವರ ಅಭಿಪ್ರಾಯವೇನು ಎಂಬುದು ತಿಳಿದುಕೊಳ್ಳುವುದಕ್ಕೆ.

ಡ್ಯಾನಿಶ್ ಸೇಠ್

'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಚಿತ್ರದ ನಟ ಡ್ಯಾನಿಶ್ ಸೇಠ್ ಕೂಡ ಸುನಿಯ 'ಆಪರೇಷನ್ ಅಲಮೇಲಮ್ಮ' ಚಿತ್ರದ ಟ್ರೈಲರ್ ನೋಡಿ ಜೈಕಾರ ಹಾಕಿದ್ದಾರೆ.

English summary
Kannada Celebrities Are Appreciate to Kannada Movie ''Oparation Alumelamma''. The Movie Directed by Simple Suni and features Shraddha srinath and Rishi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada