»   » SIIMA 2013: ಕನ್ನಡ ಸಿನಿ ತಾರೆಗಳ ರಂಗಿನಾಟ

SIIMA 2013: ಕನ್ನಡ ಸಿನಿ ತಾರೆಗಳ ರಂಗಿನಾಟ

Posted By:
Subscribe to Filmibeat Kannada

ಸೌಂತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2013ಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಾರ್ಜಾದಲ್ಲಿನ ಎಕ್ಸ್ ಪೋ ಸೆಂಟರ್ ನಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಈ ಬಾರಿಯ ಪ್ರಶಸ್ತಿಗೆ ಹಲವಾರು ಕನ್ನಡ ಚಿತ್ರಗಳು, ತಾರೆಗಳು, ತಂತ್ರಜ್ಞರು ನಾಮಿನೇಟ್ ಆಗಿದ್ದಾರೆ.

ಈ ಬಾರಿಯ ಪ್ರಶಸ್ತಿ ಸಂಭ್ರಮದಲ್ಲಿ ಹಲವಾರು ತಾರೆಗಳು ಕಾಣಿಸಿಕೊಂಡರು. ಅವರಲ್ಲಿ ಗಮನಸೆಳೆದದ್ದು ಎಂದರೆ ನಿಧಿ ಸುಬ್ಬಯ್ಯ, ಶ್ರೇಯಾ ಸರನ್, ಪೂಜಾಗಾಂಧಿ, ನಿತ್ಯಾ ಮೆನನ್, ಪರುಲ್ ಯಾದವ್, ಚಾರ್ಮಿ ಕೌರ್, ಶರ್ಮಿಳಾ ಮಾಂಡ್ರೆ, ಪ್ರಿಯಾಮಣಿ, ರಾಗಿಣಿ ಮುಂತಾದವರು.

ಈ ಬಾರಿಯ ಅತ್ಯುತ್ತಮ ನಟಿಯಾಗಿ ನಾಮಿನೇಟ್ ಆಗಿರುವವರು ಪ್ರಣೀತಾ (ಭೀಮಾ ತೀರದಲ್ಲಿ), ರಮ್ಯಾ (ಸಿದ್ಲಿಂಗು), ರಾಗಿಣಿ ದ್ವಿವೇದಿ (ಶಿವ), ರಾಧಿಕಾ ಪಂಡಿತ್ (ಅದ್ದೂರಿ), ಪ್ರಿಯಾಮಣಿ (ಚಾರುಲತಾ).

ಇನ್ನು ಅತ್ಯುತ್ತಮ ಚಿತ್ರಕ್ಕೆ ನಾಮಿನೇಟ್ ಆಗಿರುವ ಚಿತ್ರಗಳು ಹೀಗಿವೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಠಾರಿವೀರ ಸುರಸುಂದರಾಂಗಿ, ಅಣ್ಣಾಬಾಂಡ್, ಅದ್ದೂರಿ, ಡ್ರಾಮಾ ಚಿತ್ರಗಳಿವೆ.

ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿರುವವರು, ದುನಿಯಾ ವಿಜಯ್ (ಭೀಮಾ ತೀರದಲ್ಲಿ), ಶಿವರಾಜ್ ಕುಮಾರ್ (ಶಿವ), ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ), ಪುನೀತ್ ರಾಜ್ ಕುಮಾರ್ (ಅಣ್ಣಾಬಾಂಡ್), ದರ್ಶನ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ).

ಶ್ರೀಯಾ ಸರನ್ ಕಾಣಿಸಿಕೊಂಡ ಬಗೆ

ಚಂದ್ರ ಚಿತ್ರ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ತಾರೆ ಶ್ರೀಯಾ ಸರನ್. ಪ್ರಶಸ್ತಿ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಲವ್ಲಿಯಾಗಿ ಕಾಣಿಸಿಕೊಂಡ ಸಂಜನಾ

ದುಬೈನಲ್ಲಿ ಸಂಜನಾ ಗಲ್ ರಾಣಿ ಲವ್ಲಿಯಾಗಿ ಕಾಣಿಸಿಕೊಂಡ ಬಗೆ.

ಪ್ಯಾರ್ ಗೆ ಆಗ್ಬಿಟ್ಟ ಬೆಡಗಿ ಪಾರುಲ್ ಯಾದವ್

ಗೋವಿಂದಾಯ ನಮಃ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಪಾರುಲ್ ಯಾದವ್ ಪ್ಯಾರ್ ಗೆ ಆಗ್ಬಿಟ್ಟೈತೆ ಎಂದು ಎಲ್ಲರ ಮನಗೆದ್ದರು. ಸದ್ಯಕ್ಕೆ 'ಶಿವಾಜಿನಗರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಾರ್ಮಿ ಕೌರ್ ಕಾಣಿಸಿಕೊಂಡದ್ದು ಹೀಗೆ

ದೇವ್, ಸನ್ ಆಫ್ ಮುದ್ದೆ ಗೌಡ ಚಿತ್ರದಲ್ಲಿ ತಮ್ಮ ಸೊಂಟ ಬಳುಕಿಸಿದ್ದರು ಚಾರ್ಮಿ ಕೌರ್. ಯಾರೇ ಕೂಗಾಡಲಿ ಚಿತ್ರದಲ್ಲೂ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗವರು SIIMA ಅವಾರ್ಡ್ಸ್ ನಲ್ಲಿ ಕಾಣಿಸಿಕೊಂಡದ್ದು ಹೀಗೆ.

ಸಾಗರಕನ್ಯೆ ಅವತಾರದಲ್ಲಿ ನಿಧಿ ಸುಬ್ಬಯ್ಯ

ನಟಿ ನಿಧಿ ಸುಬ್ಬಯ್ಯ ಅವರು ಸಾಗರಕನ್ಯೆಯಂತೆ ಡ್ರೆಸ್ ಮಾಡಿಕೊಂಡು ಎಲ್ಲರ ಗಮನಸೆಳೆದದ್ದು ಹೀಗೆ. ಅವರು ಮೀನಿನಂತೆ ಅಲಂಕಾರ ಮಾಡಿಕೊಂಡು ಎಲ್ಲರ ಕಣ್ಣು ಕುಕ್ಕಿದರು.

ಕಣ್ಣಲ್ಲೇ ಕೊಲ್ಲುವ ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ ಅವರು ಎಲ್ಲರಿಗಿಂತಲೂ ಒಂದು ಕೈ ಮೇಲೆ ಎಂಬಂತೆ ಮೇಕಪ್ ಮಾಡಿಕೊಂಡಿದ್ದರು. ಕಣ್ಣ ನೋಟದಲ್ಲೇ ಕೊಲ್ಲುತ್ತಿರುವ ಶರ್ಮಿಳಾ.

ಎಲ್ಲರ ಕಣ್ಮನ ಸೆಳೆದ ಪ್ರಿಯಾಮಣಿ

ಪ್ರಿಯಾಮಣಿ ಸಹ ಅಷ್ಟೇ ವಿಭಿನ್ನವಾಗಿ ಅಲಂಕರಿಸಿಕೊಂಡು ಎಲ್ಲರ ಕಣ್ಮನ ಸೆಳೆದರು. ಈ ಬಾರಿ ಅವರು 'ಚಾರುಲತಾ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಸೀರೆಯಲ್ಲಿ ಗಮನಸೆಳೆದ ಪೂಜಾಗಾಂಧಿ

ಪೂಜಾಗಾಂಧಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದು ಹೀಗೆ. ಸದ್ಯಕ್ಕೆ ಅವರು ತಿಪ್ಪಜ್ಜಿ ಸರ್ಕಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸಿಂಪಲ್ ಅಂಡ್ ಬ್ಯೂಟಿಫುಲ್ ರಾಗಿಣಿ

ಎತ್ತರದ ನಿಲುವಿನ ರಾಗಿಣಿ ದ್ವಿವೇದಿ ಸಹ ಅಷ್ಟೇ ಸಿಂಪಲ್ ಆಗಿ ಕಾಣಿಸಿಕೊಂಡರು. ಶಿವ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಪ್ರಣೀತಾ ರೆಡ್ ಕಾರ್ಪೆಟ್ ಮೇಲೆ ಮಿಂಚಿಂಗ್

ರೆಡ್ ಕಾರ್ಪೆಟ್ ಮೇಲೆ ಪ್ರಣೀತಾ ಮಿಂಚಿದ್ದು ಹೀಗೆ. ಈ ಬಾರಿ ಅವರು ಭೀಮಾ ತೀರದಲ್ಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಸಿಂಪಲ್ ಆಗಿ ಕಾಣಿಸಿಕೊಂಡ ಮೈನಾ ಬೆಡಗಿ

ಮೈನಾ ಚಿತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ನಟಿ ನಿತ್ಯಾ ಮೆನನ್. ಅವರು ವೇದಿಕೆ ಮೇಲೆ ಸಿಂಪಲ್ ಆಗಿ ಕಾಣಿಸಿಕೊಂಡದ್ದು ಹೀಗೆ.

ದಿಢೀರ್ ಸಿಕ್ಕಿದ ಬರ್ಫಿ ಬಾಯ್ ದಿಗಂತ್

ನಮ್ಮ ಕನ್ನಡ ನಟರು ಯಾರೂ ಇನ್ನೂ ಕ್ಯಾಮೆರಾ ಕಣ್ಣಿಗೆ ಬೀಳದಿದ್ದರೂ ಬರ್ಫಿ ಬಾಯ್ ದಿಗಂತ್ ಮಾತ್ರ ದಿಢೀರ್ ಎಂದು ಸಿಕ್ಕಿದರು.

English summary
SIIMA, an acronym for South Indian International Movie Awards, is a one-of-its-kind endeavour to present South Indian Cinema on a global platform. SIIMA promises to be an event that film lovers across the world would sit up and watch with bated breath.
Please Wait while comments are loading...