For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಜನುಮದಿನಕ್ಕೆ ವಿಶೇಷವಾಗಿ ಶುಭಕೋರಿದ ಸಿನಿತಾರೆಯರು

  By Bharath Kumar
  |
  ಈ ಸ್ಟಾರ್ ನಟರು ಅಣ್ಣಾವ್ರ ಅಭಿಮಾನಿಗಳು | Filmibeat Kannada

  ಡಾ ರಾಜ್ ಕುಮಾರ್ ಅವರು ಎಲ್ಲರಿಗೂ ದೇವರು. ಆದ್ರೆ, ರಾಜ್ ಕುಮಾರ್ ಅವರಿಗೆ ಮಾತ್ರ ಅಭಿಮಾನಿಗಳೇ ದೇವರು. ಅಭಿಮಾನಿಗಳನ್ನ ದೇವರೆಂದು ಕರೆದು ಕೋಟ್ಯಾಂತರ ಜನರ ಹೃದಯ ಸಿಂಹಾಸನದಲ್ಲಿ ರಾಜನಾಗಿ ರಾಜಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

  ಅಭಿಮಾನಿಗಳು ವಿಶೇಷವಾಗಿ, ವಿಭಿನ್ನವಾಗಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಅಭಿಮಾನಿಗಳು ಅಂದ್ರೆ, ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸಿನಿಮಾ ಕಲಾವಿದರು ಕೂಡ ರಾಜ್ ಅವರ ಅಪ್ಪಟ ಅಭಿಮಾನಿಗಳು.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹಲವು ನಟ-ನಟಿಯರು ವಿಶ್ ಮಾಡಿದ್ದಾರೆ. ಜಗ್ಗೇಶ್, ಉಪೇಂದ್ರ, ರವಿಶಂಕರ್ ಗೌಡ, ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ವರನಟನಿಗೆ ನಮನ ಸಲ್ಲಿಸಿದ್ದಾರೆ. ಹಾಗಿದ್ರೆ, ಯಾವ ಕಲಾವಿದ, ಹೇಗೆ ಶುಭಕೋರಿದ್ದಾರೆ ಎಂದು ಮುಂದೆ ನೋಡಿ....

  ಹಾಡು ಹೇಳಿ ಶುಭಕೋರಿದ ರವಿಶಂಕರ್

  ಕನ್ನಡದ ಪ್ರತಿಭಾನ್ವಿತ ನಟ ರವಿಶಂಕರ್ ಗೌಡ ಕನ್ನಡದ ರಾಜಕುಮಾರನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. 'ಹುಲಿ ಹಾಲಿನ ಮೇವು' ಚಿತ್ರದ ಬೆಳದಿಂಗಳಾಗಿ ಬಾ....ಹಾಡು ಹೇಳುವ ಮೂಲಕ ತಮ್ಮ ಅಭಿಮಾನದ ಶುಭಾಶಯ ತಿಳಿಸಿದ್ದಾರೆ.

  ದಾಖಲೆಗಳ ಸರದಾರನಿಗೆ 'ಶರಣು'

  ಅಣ್ಣಾವ್ರು ತಮ್ಮ ಅಗಾಧ ಪ್ರತಿಭೆ ಮೂಲಕ ನಿರ್ಮಿಸಿದ ದಾಖಲೆಗಳನ್ನೆಲ್ಲ ನೆನಪಿಸಿಕೊಟ್ಟ ನಟ ಶರಣ್ ವಿಶೇಷವಾಗಿ ಅಪ್ಪಾಜಿಯ ಜನುಮದಿನಕ್ಕೆ ಶುಭ ಕೋರಿದ್ದಾರೆ.

  ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳುನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು

  ಉಪ್ಪಿಯ ನಮಸ್ಕಾರ

  ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಬಹಳ ವಿಶೇಷ ಹಾಗೂ ವಿನಯದಿಂದ ಡಾ ರಾಜ್ ಕುಮಾರ್ ಅವರಿಗೆ ವಿಶ್ ಮಾಡಿದ್ದಾರೆ. ರಾಜಣ್ಣ ಅವರ ಜೊತೆಗಿನ ಉಪ್ಪಿ ಇರುವ ಫೋಟೋಗಳನ್ನ ಪೋಸ್ಟ್ ಮಾಡಿ ಅಭಿಮಾನ ಮರೆದಿದ್ದಾರೆ.

  ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?

  ರಾಜ್ ಜಯಂತಿಗೆ ಚಿರು ವಿಶ್

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ರಾಜ್ ಕುಮಾರ್ ಹುಟ್ಟುಹಬ್ಬವನ್ನ ರಾಜ್ ಜಯಂತಿ ಎಂದು ವಿಶೇಷ ಮನ್ನಣೆ ನೀಡುವ ಮೂಲಕ ಈ ಜನುಮದಿನಕ್ಕೆ ರಂಗು ನೀಡಿದ್ದಾರೆ.

  ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?

  ಅಭಿನಯ ಕಲಾ ಕೇಸರಿ

  ಯುವ ನಿರ್ದೇಶಕರಿಗೆ ಮಾದರಿ ಆಗಿರುವ ಅಪ್ಪಾಜಿ ಅವರಿಗೆ ನಿರ್ದೇಶಕ ಪವನ್ ಒಡೆಯರ್ ಶುಭ ಕೋರಿದ್ದಾರೆ. ಸದ್ಯ, ಪುನೀತ್ ರಾಜ್ ಕುಮಾರ್ ಗೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ನಟಸಾರ್ವಭೌಮ ಎಂದು ಶೀರ್ಷಿಕೆ ಇಟ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ.

  ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..

  ನಿರಂತರವಾಗಿ ನಮ್ಮಲ್ಲಿದ್ದೀರಾ

  ಮಾಸ್ಟರ್ ಪೀಸ್, ತಾರಕ್ ಚಿತ್ರಗಳಲ್ಲಿ ನಟಿಸಿರುವ ಶಾನ್ವಿ ಶ್ರೀವಾಸ್ತವ ವರನಟನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ''ಪ್ರತಿ ವರ್ಷವೂ ನಮ್ಮ ಹೃದಯಲ್ಲಿ ಮತ್ತೆ ಮತ್ತೆ ಹುಟ್ಟಿ ಬರ್ತೀರಾ'' ಎಂದಿದ್ದಾರೆ.

  ರಾಜಣ್ಣ ಎಂದೆಂದಿಗೂ ಅಮರ

  ಇಂದು ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಜೊತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬರ್ತಡೇ ಕೂಡ ಹೌದು. ಹೀಗಾಗಿ, ಭಾರತದ ಇಬ್ಬರು ದಿಗ್ಗಜರಿಗೂ ನಿರ್ದೇಶಕ ಸಿಂಪಲ್ ಸುನಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

  ರಾಜ್ ಅಭಿನಯದ 30 ಚಿತ್ರಗಳು, ಹುಟ್ಟುಹಬ್ಬ ವಿಶೇಷರಾಜ್ ಅಭಿನಯದ 30 ಚಿತ್ರಗಳು, ಹುಟ್ಟುಹಬ್ಬ ವಿಶೇಷ

  ಗುರುಗಳಿಗೆ ನಮನ

  ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಜಗ್ಗೇಶ್ ಅವರಿಗೆ ಇಂದು ಬಹಳ ವಿಶೇಷ. ಯಶವಂತಪುರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ, ಆರಾಧ್ಯ ದೈವ ಜನುಮದಿನದಂದೂ ನಾಮಪತ್ರ ಸಲ್ಲಿಸುತ್ತಿರುವುದಕ್ಕೆ ತೀವ್ರ ಸಂತಸಗೊಂಡಿದ್ದಾರೆ.

  ಡಾಲಿಯ ಶುಭಾಶಯ

  ಡಾಲಿ ಖ್ಯಾತಿಯ ನಟ ಧನಂಜಯ್ ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

  English summary
  Kannada Actor upendra, sharan, dhananjay, actress shanvi srivastava are taken their twitter account to wish dr rajkumar's 90th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X