»   » 4 ದಿನದ ಅಂತರದಲ್ಲಿ 5 ಸ್ಯಾಂಡಲ್ ವುಡ್ ತಾರೆಯರು ಮದುವೆ ಆಗೋಯ್ತು

4 ದಿನದ ಅಂತರದಲ್ಲಿ 5 ಸ್ಯಾಂಡಲ್ ವುಡ್ ತಾರೆಯರು ಮದುವೆ ಆಗೋಯ್ತು

Posted By:
Subscribe to Filmibeat Kannada
4 ದಿನದ ಅಂತರದಲ್ಲಿ 5 ಸ್ಯಾಂಡಲ್ ವುಡ್ ತಾರೆಯರು ಮದುವೆ | FIlmibeat Kannada

ಫೆಬ್ರವರಿ ತಿಂಗಳು ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬ ವಿಶೇಷವಾಗಿತ್ತು. ಕನ್ನಡ ಕಲಾವಿದರ ಭವನ ಇದೇ ತಿಂಗಳಲ್ಲಿ ಉದ್ಘಾಟನೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಇದೇ ತಿಂಗಳಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ.

ಹೀಗೆ, ಸತತ ವಿಶೇಷ ಕಾರ್ಯಕ್ರಮಗಳ ಮೂಲಕ ಸುದ್ದಿಯಾಗಿದ್ದ ಫೆಬ್ರವರಿ ಹಲವು ಸ್ಯಾಂಡಲ್ ವುಡ್ ತಾರೆಯರ ದಾಂಪತ್ಯಕ್ಕೆ ಸಾಕ್ಷಿಯಾಯಿತು. ಒಬ್ಬರಲ್ಲ, ಇಬ್ಬರಲ್ಲ ಐದು ಜನ ಕನ್ನಡ ಸಿನಿಮಾ ಕಲಾವಿದರು ಈ ತಿಂಗಳಲ್ಲಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ.

ಕೇವಲ ನಾಲ್ಕು ದಿನಗಳ ಅಂತರದಲ್ಲಿ ಈ ಎಲ್ಲರ ವಿವಾಹವಾಗಿರುವುದು ಮತ್ತಷ್ಟು ವಿಶೇಷವಾಗಿದೆ. ಹಾಗಿದ್ರೆ, ಯಾವ ಯಾವ ಸಿನಿತಾರೆಯರು ದಾಂಪತ್ಯಕ್ಕೆ ಅಡಿಯಿಟ್ಟರು ಎಂದು ನೋಡೋಣ ಬನ್ನಿ. ಮುಂದೆ ಓದಿ....

ಫೆಬ್ರವರಿ 18ಕ್ಕೆ ಗೊಂಬೆ ಮದುವೆ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ 'ಗೊಂಬೆ' ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನೇಹಾ ಗೌಡ ಫೆಬ್ರವರಿ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗೊಂಬೆ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದುವೆ ಆಗಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದ್ದು ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಧಾರಾವಾಹಿಯ ಕಲಾವಿದರು ಕೂಡ ಮದುವೆಯಲ್ಲಿ ಭಾಗಿ ಆಗಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ

ಅದೇ ದಿನ ದಾಂಪತ್ಯಕ್ಕೆ ಕಾಲಿಟ್ಟ ದೀಪಾ ಗೌಡ

ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ದೀಪಾ ಗೌಡ ಕೂಡ ಅದೇ ದಿನ ಅಂದ್ರೆ ಫೆಬ್ರವರಿ 18ರಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಅರುಣ್ ಅವರ ಕೈ ಹಿಡಿದಿರುವ ದೀಪಾ ಹಾಸನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ಸಪ್ತಪದಿ ತುಳಿದ ಚಂದನವನದ ಅಂದದ ನಟಿ

ಹೊಸ ಬಾಳಿಗೆ ಕಾಲಿಟ್ಟ ಸಾರಾ ಗೋವಿಂದು ಪುತ್ರ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಕನ್ನಡ ಖ್ಯಾತ ನಿರ್ಮಾಪಕ ಸಾ.ರಾ. ಗೋವಿಂದು ಅವರ ಪುತ್ರ ಅನೂಪ್ ಸಾ.ರಾ. ಗೋವಿಂದು ಅವರ ವಿವಾಹ ಫೆಬ್ರವರಿ 19 ರಂದು ನರೆರವೇರಿದೆ. ಯಲಹಂಕದ ಇಬಿಸು ಕನ್ವೆಷನಲ್ ಹಾಲ್‌ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಮೇಘನಾ ಜೊತೆಗೆ ಅನೂಪ್ ಸಾ.ರಾ. ಗೋವಿಂದು ಹಸೆಮಣೆ ಏರಿದ್ದಾರೆ.

ಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದು

ರಾಜಕುಮಾರ ನಿರ್ದೇಶಕ

'ರಾಮಾಚಾರಿ' ಹಾಗೂ 'ರಾಜಕುಮಾರ' ಸಿನಿಮಾಗಳ ಸಂತೋಷ್ ಆನಂದ್ ರಾಮ್ ಇಂದು(ಫೆ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಯನಗರದಲ್ಲಿ ನಡೆದ ವಿವಾಹ ಮಹೋತ್ಸವ ಸಮಾರಂಭದಲ್ಲಿ ಸುರಭಿ ಅವರನ್ನ ಹಿಂದೂ ಸಂಪ್ರದಾಯದಂತೆ ವರಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

ನೂತನ ಬಾಳಿಗೆ ಅಡಿಯಿಟ್ಟ ಅಕಿರಾ ನಟಿ

'ಅಕಿರಾ', 'ಡವ್' ಚಿತ್ರಗಳಲ್ಲಿ ನಟಿಸಿದ್ದ ನಟಿ ಅಧಿತಿ ಕೂಡ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಆದ್ರೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

English summary
Kannada director santhosh ananddram, kannada serial actress neha gowda, akhira movie actress aditi rao, anup sa ra govindu and actress deepa gowda have been married in February.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada