»   » ತಾರೆಗಳ ಮದುವೆ ಸೂಪರ್, ಗ್ಯಾಲರಿ ಡೂಪರ್ ಹಿಟ್

ತಾರೆಗಳ ಮದುವೆ ಸೂಪರ್, ಗ್ಯಾಲರಿ ಡೂಪರ್ ಹಿಟ್

Posted By:
Subscribe to Filmibeat Kannada

ಈ ವರ್ಷ (2012) ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಹತ್ತು ತಾರಾ ಜೋಡಿಗಳ ಸಚಿತ್ರ ವರದಿ ಇಲ್ಲಿದೆ. ಸಿನೆಮಾ ತಾರೆಗಳ ಮದುವೆ ಸುದ್ದಿ, ಗ್ಯಾಲರಿಗಳೆಂದರೆ ನಮ್ಮ ಒನ್ಇಂಡಿಯಾ ಕನ್ನಡ ಓದುಗರಿಗೆ ಅದ್ಯಾಕೋ ಏನೋ ಬೆಟ್ಟದಷ್ಟು ಪ್ರೀತಿ. ಅವರ ಪ್ರೀತಿ, ವಿಶ್ವಾಸ ಹೀಗೇ ಮುಂದುವರಿಯಲಿ.

ನಮ್ಮ ಓದುಗರು ಸಿಕ್ಕಾಪಟ್ಟೆ ಇಷ್ಟಪಟ್ಟ ಮದುವೆ ಸುದ್ದಿಚಿತ್ರಗಳನ್ನು ಮತ್ತೊಮ್ಮೆ ನಿಮ್ಮ ಮುಂದಿಡುತ್ತಿದ್ದೇವೆ. ಇಲ್ಲಿರುವ ಹತ್ತು ಸಿನೆಮಾ ತಾರೆಗಳು 2012ರಲ್ಲಿ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವರೇ. ಅವರಲ್ಲಿ ಇನ್ನೂ ಕೆಲವರು ಹನಿಮೂನ್ ಮೂಡ್ ನಲ್ಲೇ ಇದ್ದಾರೆ.

ರಿತೇಶ್ ಕೈಹಿಡಿದ ಬಬ್ಲಿ ತಾರೆ ಜೆನಿಲಿಯಾ ಡಿಸೋಜಾ

ಬಬ್ಲಿ ತಾರೆ ಜೆನಿಲಿಯಾ ಡಿಸೋಜಾ ಶುಕ್ರವಾರ (ಫೆ.3) ಗೃಹಸ್ಥಾಶ್ರಮ ಪ್ರವೇಶಿಸಿದರು. ಮರಾಠಿ ಸಂಪ್ರದಾಯದಂತೆ ಅವರ ಮದುವೆ ನೆರವೇರಿತು. ಜೆನಿಲಿಯಾ ಬಾಳ ಸಂಗಾತಿಯಾಗಿ ರಿತೇಶ್ ದೇಶ್ ಮುಖ್ ಗೆ ಹೊಸ ಸಂಭ್ರಮ. ಇವರಿಬ್ಬರ ನಡುವಿನ ಎಂಟು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಬಿದ್ದ ಅಮೃತ ಘಳಿಗೆ.

ಸದ್ದಿಲ್ಲದಂತೆ ಹಸೆಮಣೆ ಏರಿದ ನಟ ಧರ್ಮ

ಸರಿಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಳನ್ನು ಪೋಷಿಸಿರುವ ನಟ ಧರ್ಮ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಖಳನಟನಾಗಿ, ಪೊಲೀಸ್ ಪಾತ್ರಗಳಿಗೆ ಜೀವತುಂಬುತ್ತಿದ್ದ ಧರ್ಮ ಅವರ ಮದುವೆ ಐಶ್ವರ್ಯಾ ಅವರೊಂದಿಗೆ ನಡೆಯಿತು. ಧರ್ಮ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಂಬಂಧಿಯೂ ಹೌದು.

ತಾರೆ ಸ್ನೇಹಾ ಮತ್ತು ಪ್ರಸನ್ನ ಸಪ್ತಪದಿ

ಮೇ11ರಂದು ಸ್ನೇಹಾ ಮದುವೆ ಚೆನ್ನೈನ ಶ್ರೀವಾರು ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು. ಬಹಳ ಅದ್ದೂರಿಯಾಗಿ ಸಡಗರ, ಸಂಭ್ರಮದಿಂದ ನಡೆದ ಮದುವೆ ಇದಾಗಿತ್ತು. ಇವರಿಬ್ಬರ ಮದುವೆ ಗ್ಯಾಲರಿ ಫೋಟೋಗಳು ಸೂಪರ್ ಹಿಟ್.

ತುಂಟಾಟದ ಹುಡುಗಿ ಛಾಯಾಸಿಂಗ್ ಮದುವೆ

ತಮಿಳು ಕಿರುತೆರೆ ನಟ ಕೃಷ್ಣನ ಜೊತೆ ಲವ್ ಮ್ಯಾರೇಜ್ ಮಾಡಿಕೊಂಡರು ಛಾಯಾ ಸಿಂಗ್. ಉತ್ತರ ಭಾರತ ಮೂಲದ ಬೆಂಗಳೂರು ಹುಡುಗಿ ಛಾಯಾ ಸಿಂಗ್ ಬಹಳಷ್ಟು ಕಾಲದಿಂದ ಟಿವಿ ನಟನ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದರು. ಕಡೆಗೆ ಗಟ್ಟಿಮೇಳದಲ್ಲಿ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡರು.

ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಸಾಯಿ ಮಗಳು

ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಏಕೈಕ ಪುತ್ರಿ ಜ್ಯೋತಿರ್ಮಯಿ ನೂತನ ದಾಂಪತ್ಯಕ್ಕೆ ಅಡಿಯಿಟ್ಟ ವರ್ಷ. ಎಂಬಿಬಿಎಸ್ ಓದಿರುವ ಜ್ಯೋತಿರ್ಮಯಿ ಅವರು ಬಿ.ಟೆಕ್ ಪದವೀಧರ ಕೃಷ್ಣ ಫಲ್ಗುಣ ಅವರನ್ನು ಬಾಳ ಸಂಗಾತಿಯಾಗಿ ಬರಮಾಡಿಕೊಂಡರು.

ಜೆಸ್ಸಿಗೆ ಗಿಫ್ಟ್ ಆಗಿ ಸಿಕ್ಕಿದ ಅತುಲ್ಯಾ

"ಏನೋ ಒಂಥರಾ ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರ...ಮಂದಾಕಿನಿಯೇ... (ಹುಡುಗಾಟ).., ನಡೆದಾಡುವ ಕಾಮನಬಿಲ್ಲು (ಪರಿಚಯ),.. ಸಂಜು ಮತ್ತು ಗೀತಾದಂತಹ ಹಿಟ್ ಗೀತೆಗಳನ್ನು ಕೊಟ್ಟಂತಹ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ದಾಂಪತ್ಯ ಜೀವನ ಅಡಿಯಿಟ್ಟರು. ಅವರು ಅತುಲ್ಯಾ ಅವರನ್ನು ವರಿಸುವ ಮೂಲಕ ಗೃಹಸ್ಥಾಶ್ರಮ ಪ್ರವೇಶಿಸಿದರು.

ಶಂಕರ್ ಜತೆ ಹಸೆಮಣೆ ಏರಿದ ತಾರೆ ಆಶಿತಾ

ಕಿರುತೆರೆ ಹಾಗೂ ಬೆಳ್ಳಿತೆರೆ ಬೆಡಗಿ ಅಶಿತಾ ಮದುವೆ ಉದ್ಯಮಿ ಶಂಕರ್ ಜೊತೆ ಅಕ್ಟೋಬರ್ 21ರಂದು ನೆರವೇರಿತು. ರೋಡ್ ರೋಮಿಯೋ' ಮೂಲಕ ಕನ್ನಡ ಸಿನಿಮಾ ಪ್ರಯಾಣ ಆರಂಭಿಸಿದ ನಟಿ ಆಶಿತಾ, ನಂತರ 'ಹಾರ್ಟ್ ಬೀಟ್ಸ್' ಹಾಗೂ 'ಗ್ರೀನ್ ಸಿಗ್ನಲ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮದುವೆ

ಹಾಸನ ಮೂಲದ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನೂಪ್ ಸೀಳಿನ್ ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟರು. ತಮಿಳು ಚಿತ್ರಗಳ ತಾರೆ ಹಾಗೂ ಭರತನಾಟ್ಯ ಕಲಾವಿದೆ ಕೃತಿ ಈಗವರ ಅವರ ಹೃದಯದ ಅರಸಿ. ಅಕ್ಟೋಬರ್ 22ರಂದು ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ನೆರವೇರಿತು.

ಗಣೇಶ್ ತಮ್ಮ ಮಹೇಶ್ ಪ್ರೇಮ ವಿವಾಹ

ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ (ಅ.31ರ ಬುಧವಾರ)ನೂತನ ದಾಂಪತ್ಯಕ್ಕೆ ಅಡಿಯಿಟ್ಟರು. ತಾನು ಪ್ರೀತಿಸುತ್ತಿದ್ದ ನೇಪಾಳಿ ಮೂಲದ ಹುಡುಗಿ ಪ್ರೇಮಾರನ್ನು ಕೈಹಿಡಿದಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಪ್ರೇಮಾ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೈಸೂರು ಟೆಕ್ಕಿ ಕೈಹಿಡಿದ ಅಣ್ಣಾವ್ರ ಮೊಮ್ಮಗಳು

ಕನ್ನಡ ವರನಟ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಮೊಮ್ಮಗಳು ಜಿ. ಪಾರ್ವತಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಪದವಿ ಮುಗಿಸಿರುವ ಅವರು ಮೈಸೂರಿನ ಸಾಫ್ಟ್ ವೇರ್ ಇಂಜಿನಿಯರ್ ವಿನಯ್ ವಸಂತ್ ಅವರ ಕೈಹಿಡಿದರು.


ಮದುವೆ ಆಲ್ಬಂಗಳನ್ನು ಆಗಾಗ ತಿರುವಿ ಹಾಕುವುದೆಂದರೆ ಎಲ್ಲರಿಗೂ ಇಷ್ಟ. ಕಾಲ ಹಿಂದಕ್ಕೆ ಸರಿದಂತೆ ಭಾಸವಾಗುತ್ತದೆ. ಮದುವೆ ಸಂಭ್ರಮ ಸಡಗರ, ಉತ್ಸಾಹ, ವಿವಾಹಭೋಜನ...ಮತ್ತೆ ಮತ್ತೆ ನೆನಪಾಗಿ ಹಾಗೆಯೇ ಮನಸ್ಸು ಕಾಣೆಯಾಗುತ್ತದೆ.

ಮದುವೆ ಎಂಬುದು ಜನ್ಮ ಜನ್ಮದಾ ಅನುಬಂಧ, ಹೃದಯ ಹೃದಯಗಳ ಪ್ರೇಮಾನುಬಂಧ. ಶೃಂಗಾರ ಕಾವ್ಯದ ರಸಲಹರಿಯಂತೆ. ತುಂಗ ಭದ್ರ ಸಂಗಮದಂತೆ. ಏಳೇಳು ಜನುಮದಲೂ ತೀರದ ಸಂಬಂಧ. ಮನಸನ್ನು ಅರಿತು ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆಯಂತೆ.

English summary
Kannada celebrities top 10 marriages in photo feature. Celebrity marriages come and go, always changing just like a revolving door. So, in honor of those who have stood the test of time and true love, let's take a look at a few.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada