For Quick Alerts
ALLOW NOTIFICATIONS  
For Daily Alerts

ಕನ್ನಡ ಸಿನಿಮಾಗಳಲ್ಲಿ ಕನ್ನಡತನವಿಲ್ಲ: ಸಿಂಗ್

|

"ಕನ್ನಡ ಸಿನಿಮಾಗಳಲ್ಲಿ ಕನ್ನಡತನ ಮರೆಯಾಗುತ್ತಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆತಂಕ ತಂದೊಡ್ಡಿದೆ" ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ವಿಷಾದಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಯುಕ್ತ ವಾರ್ತಾಭವನದಲ್ಲಿ ನಡೆದ "ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ" ವಿಚಾರ ಸಂಕೀರಣದಲ್ಲಿ ಮಾತನಾಡುತ್ತಿದ್ದರು.

"ಈಗ ಭಾಷೆಯ ಬಳಕೆಯಲ್ಲಿ ಪ್ರೌಢಿಮೆಯಿರುವ ಡಾ. ರಾಜ್ ಕುಮಾರ್ ರಂತಹ ನಟರಿಲ್ಲ. ಪುಟ್ಟಣ್ಣ ಕಣಗಾಲ್ ರಂತಹ ನಿರ್ದೇಶಕರೂ ಇಲ್ಲ. ಐತಿಹಾಸಿಕ ಹಿನ್ನಲೆಯ, ಕಾದಂಬರಿ ಆಧಾರಿತ ಸಿನಿಮಾಗಳು ಬರುತ್ತಿಲ್ಲ. ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ ನೋಡಲು ನಿರಾಶೆಯಾಗುತ್ತಿದೆ" ಎಂದು ಸಿಂಗ್ ವಿಷಾದ ವ್ಯಕ್ತಪಡಿಸಿದರು.

"ಒಂದೆಡೆ ಕನ್ನಡ ಸೊರಗುತ್ತಿದೆ. ಇನ್ನೊಂದೆಡೆ ಹಿಂಸೆ, ಕ್ರೌರ್ಯ, ಸೆಕ್ಸ್ ವಿಜೃಂಭಿಸುತ್ತಿವೆ. ಇಂತಹ ಸಿನಿಮಾ ನೋಡುವ ಅಗತ್ಯವೇನಿದೆ. ಕರ್ನಾಟಕದಲ್ಲಿರುವ ಶೇಕಡ 60ರಷ್ಟು ಕನ್ನಡ ಮಾತನಾಡುವ ಜನರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತಯಾರಾಗಬೇಕು" ಎಂದರು.

ಚಿತ್ರನಗರಿಗೆ 300 ಎಕರೆ: ಹೆಸರುಘಟ್ಟದ ಬಳಿ ಚಿತ್ರನಗರಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, 300 ಎಕರೆ ಜಾಗ ನೀಡಲಾಗುತ್ತದೆ. ಇದು ಕನ್ನಡ ಸಿನಿಮಾ ಬೆಳವಣಿಗೆಗೆ ನೆರವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಹೇಳಿದ್ದಾರೆ.

ವಿಚಾರ ಸಂಕೀರಣದಲ್ಲಿ ಚಲಚಚಿತ್ರ ಅಕಾಡೆಮಿ ಅಧ್ಯಕ್ಷ ಟಿ. ಎಸ್. ನಾಗಾಭರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಪತ್ರಕರ್ತ ವಿ. ಎನ್. ಸುಬ್ಬರಾವ್ ಪಾಲ್ಗೊಂಡಿದ್ದರು.

English summary
Kannada movie experts express deep regret over missing Kannadaness in Kannada movies. The seminar ( BIFFes 2011) was organized jointly by Kannada cinema academy and department of Kannada and culture government of Karnataka. Its disappointing to watch kannada movies in the global movie context, experts felt.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more