For Quick Alerts
  ALLOW NOTIFICATIONS  
  For Daily Alerts

  ಪುಲ್ವಾಮಾ ದಾಳಿ ಯೋಧರು ಹುತಾತ್ಮ: ನಿಜವಾದ ಹೀರೋಗಳಿಗೆ ಸಲಾಂ ಎಂದ ಸ್ಟಾರ್ಸ್

  |
  Pulwama : ಜಮ್ಮು ಕಾಶ್ಮೀರದಲ್ಲಿ ಸೈನಿಕರ ಸಾವಿಗೆ ಕಂಬನಿ ಮಿಡಿದ ಭಾರತೀಯ ಚಿತ್ರರಂಗ

  ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ CRPF ಯೋಧರ ವಾಹನದ ಮೇಲೆ, ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44ಕ್ಕೂ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

  ಈ ಘಟನೆ ಇಡೀ ದೇಶಕ್ಕೆ ನೋವು ತಂದಿದೆ. ಧರ್ಮ, ಜಾತಿ, ಪಕ್ಷ, ರಾಜಕೀಯ ಎಲ್ಲವನ್ನ ಬಿಟ್ಟು ದೇಶಕ್ಕಾಗಿ ಹೋರಾಡುವಂತಹ ಯೋಧರ ಈ ಸಾವು ದೇಶದ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡಿದೆ. ಈ ಘಟನೆಯನ್ನ ಕನ್ನಡ ಸಿನಿಮಾ ತಾರೆಯರು ಕೂಡ ಖಂಡಿಸಿದ್ದಾರೆ.

  ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

  ಕೆಲವರು ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮತ್ತೆ ಕೆಲವರು ಭಾರತದ ತಾಕತ್ ಏನು ಎಂಬುದನ್ನ ಪಾಕಿಸ್ತಾನಕ್ಕೆ ತೋರಿಸಿ ಎಂದು ಮನವಿ ಮಾಡ್ತಿದ್ದಾರೆ. ಈ ಬಗ್ಗೆ ನಟ ಪುನೀತ್ ರಾಜ್ ಕುಮಾರ್, ಜಗ್ಗೇಶ್, ದರ್ಶನ್, ರಶ್ಮಿಕಾ ಮಂದಣ್ಣ, ಶ್ರೀಮುರಳಿ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದಾರೆ. ಯಾರು ಏನಂದ್ರು? ಮುಂದೆ ಓದಿ...

  ಗಾಯಾಳು ಯೋಧರು ಚೇತರಿಕೆಯಾಗಲಿ

  ''ಭಾರತೀಯ ಯೋಧರ ಮೇಲೆ ಆದ ದಾಳಿಯ ಸುದ್ದಿ ನಿಜಕ್ಕೂ ಬೇಸರ ತಂದಿದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗಳಿಂದ ಆಸ್ಪತ್ರೆಯಲ್ಲಿರುವ ಯೋಧರು ಆದಷ್ಟೂ ಬೇಗ ಚೇತರಿಸಿಕೊಳ್ಳಲಿ'' ಎಂದು ನಟಿ ರಶ್ಮಿಕಾ ಮಂದಣ್ಣ ಸಂತಾಪ ಸೂಚಿಸಿದ್ದಾರೆ.

  ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ

  ಪುನೀತ್ ಸಂತಾಪ

  ''ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿರುವುದು ಬೇಸರ ತಂದಿದೆ. ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಈ ನೋವನ್ನ ಭರಿಸುವ ಧೈರ್ಯ ಸಿಗಲಿ ಎಂದು ವಿನಂತಿಸುತ್ತೇನೆ'' ಎಂದು ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ದಾಳಿಗೂ ಎರಡು ದಿನ ಮೊದಲೇ ಎಚ್ಚರಿಕೆ ನೀಡಿತ್ತು ಆ ವಿಡಿಯೋ!

  ಭಾರತೀಯರೇ ಎಚ್ಚರ..!

  ''ಭಾರತೀಯರೆ ನಾವು 2019 ಎಚ್ಚರತಪ್ಪಿ ಸ್ವಾರ್ಥಿಗಳ ನಾಟಕನಂಬಿ ದೇಶ ನತದೃಷ್ಟರಿಗೆ ಅರ್ಪಿಸಿದರೆ ಇಂಥ ಅನಾಹುತ ದೇಶವ್ಯಾಪಿ ಮುಂದುವರಿಯುತ್ತದೆ ಎಚ್ಚರ!. ಭಾರತದ ಶಕ್ತಿ ಏನೆಂದು ತೋರಿಸಿ ಮೋದಿ'' ಎಂದು ಜಗ್ಗೇಶ್ ಕೇಳಿಕೊಂಡಿದ್ದಾರೆ.

  ಪುಲ್ವಾಮದ ಆ ಭೀಕರ ಸ್ಫೋಟದ ಸದ್ದು 10 ಕಿ.ಮೀ.ವರೆಗೂ ಕೇಳಿತ್ತು!

  ಭಾರತಕ್ಕೆ ನೋವಾಗಿದೆ

  ''ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯಿಂದ ಇಡೀ ಭಾರತಕ್ಕೆ ನೋವಾಗಿದೆ. ಯೋಧರ ಕುಟುಂಬಗಳಿಗೆ ನಮ್ಮ ಸಾಂತ್ವನ'' ಎಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದಾರೆ.

  19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ

  ನಮ್ಮ ಸೈನ್ಯದೊಂದಿಗೆ ನಾವು ನಿಲ್ಲೋಣ

  ''ರಣ ಹೇಡಿ ಭಯೋತ್ಪಾದಕರು ನಮ್ಮ ವೀರ ಯೋಧರನ್ನು ಕೊಂದಿದ್ದಾರೆ. ನಮ್ಮ ಸುರಕ್ಷತೆಗಾಗಿ ಜೀವ ತೆರುವ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಸೈನ್ಯದೊಂದಿಗೆ ನಾವು ನಿಲ್ಲೋಣ ಅವರ ನೋವು ನಮ್ಮ ನೋವು'' ಎಂದು ನಿರ್ದೇಶಕ ಪವನ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಭಾರತೀಯ ಸೇನೆಗೆ ಸಲ್ಯೂಟ್

  ಭಾರತೀಯ ಸೇನೆಗೆ ಸಲ್ಯೂಟ್

  ''ನಮ್ಮ ಭಾರತೀಯ ಸೈನಿಕರಿಗೆ ಸಲ್ಯೂಟ್. ನಮಗಾಗಿ ಅವರ ಪ್ರಾಣ ತ್ಯಾಗ ಮಾಡುವ ಧೈರ್ಯಕ್ಕೆ ನಾವು ಏನು ಹೇಳಲು ಸಾಧ್ಯ? ಅವರ ಕುಟುಂಬಕ್ಕೆ ಈ ನೋವನ್ನ ಭರಿಸುವ ಧೈರ್ಯ ಸಿಗಲಿ. ನಿನ್ನೆಯ ದಾಳಿಯಲ್ಲಿ ಹುತಾತ್ಮರಾದ ಎಲ್ಲ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

  ಬುಡ ಸಹಿತ ಕಿತ್ತು ಹಾಕಬೇಕು

  ''ಪುಲ್ವಾಮಾ ದಾಳಿ ಬಗ್ಗೆ ಕೇಳಿ ತುಂಬ ದುಃಖವಾಗಿದೆ. ಧೈರ್ಯವಂತ ಯೋಧರಿಗೆ ಮತ್ತು ಅವರ ಕುಟುಂಬದವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಭಯೋತ್ಪಾದನೆ ಯಾವತ್ತು ಮಾನವ ಕುಲಕ್ಕೆ ಅಪಾಯಕಾರಿ, ಅದನ್ನು ಸಮಾಜದಿಂದ ಬುಡ ಸಹಿತ ಕಿತ್ತು ಹಾಕಬೇಕು.'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

  English summary
  Kannada actor darshan, srimurali, jaggesh, actress rashmika mandanna, sumalatha ambareesh are condemn the Pulwama attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X