For Quick Alerts
  ALLOW NOTIFICATIONS  
  For Daily Alerts

  ಹೊಸ ಹೇರ್ ಸ್ಟೈಲ್ ನಲ್ಲಿ ಚಿಕ್ಕಣ್ಣ : ಯಾವ ಸಿನಿಮಾಗಾಗಿ ಈ ಅವತಾರ?

  By Naveen
  |
  ಹೊಸ ಅವತಾರದಲ್ಲಿ ಚಿಕ್ಕಣ್ಣ..! | Chikkanna in all new avataar..! | Filmibeat Kannada

  ಚಿಕ್ಕಣ್ಣ ಈಗ ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ. ವಾರಕ್ಕೆ ಮಿನಿಮಮ್ 6 ಸಿನಿಮಾಗಳು ರಿಲೀಸ್ ಆದ್ರೆ, ಆ ಪೈಕಿ ಮೂರು ಚಿತ್ರಗಳಲ್ಲಿಯಾದರೂ ಚಿಕ್ಕಣ್ಣ ಇರ್ತಾರೆ. ಅಷ್ಟರ ಮಟ್ಟಿಗೆ ಚಿಕ್ಕಣ್ಣ ತಮ್ಮ ಕಾಮಿಡಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

  ಇಷ್ಟು ದಿನ ಸಿಂಪಲ್ ಆಗಿದ್ದ ಇದೀಗ ಚಿಕ್ಕಣ್ಣ ಹೊಸ ಹೇರ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕಣ್ಣ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ರೀತಿ ಚಿಕ್ಕಣ್ಣ ಬದಲಾಗಿರುವುದನ್ನು ಅವರ ಅಭಿಮಾನಿಗಳು ನೋಡಿ ಇಷ್ಟ ಪಟ್ಟಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೆ ನಟಿಸಿರುವ ಚಿಕ್ಕಣ್ಣ ತಾವೇ ಹೀರೋ ಆಗುತ್ತಿದ್ದಾರ ಎಂಬ ಪ್ರಶ್ನೆ ಈ ಫೋಟೋ ನೋಡಿದ ಬಳಿಕ ಕೆಲವರಿಗೆ ಮೂಡಿದೆ.

   ಮತದಾನದ ಹಕ್ಕಿನಿಂದ ವಂಚಿತರಾದ ನಟ 'ಚಿಕ್ಕಣ್ಣ' ಮತದಾನದ ಹಕ್ಕಿನಿಂದ ವಂಚಿತರಾದ ನಟ 'ಚಿಕ್ಕಣ್ಣ'

  ಹಾಗದ್ರೆ, ಚಿಕ್ಕಣ್ಣ ಈ ಹೇರ್ ಸ್ಟೈಲ್ ಯಾವ ಚಿತ್ರಕ್ಕಾಗಿ ಎಂಬ ವಿವರ ಮುಂದಿದೆ ಓದಿ....

  'ಪಡ್ಡೆ ಹುಲಿ' ಚಿತ್ರದಲ್ಲಿ ಚಿಕ್ಕಣ್ಣ

  'ಪಡ್ಡೆ ಹುಲಿ' ಚಿತ್ರದಲ್ಲಿ ಚಿಕ್ಕಣ್ಣ

  ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ 'ಪಡ್ಡೆ ಹುಲಿ' ಸಿನಿಮಾದಲ್ಲಿ ಚಿಕ್ಕಣ್ಣ ನಟಿಸುತ್ತಿದ್ದಾರೆ. ಶ್ರೇಯಸ್ ಜೊತೆಗೆ ಚಿತ್ರದ ಹಾಸ್ಯ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಒಂದು ಹಾಸ್ಯ ಸನ್ನಿವೇಶಕ್ಕಾಗಿ ಚಿಕ್ಕಣ್ಣ ಈ ರೀತಿ ಬದಲಾಗಿ ಬಂದಿದ್ದಾರೆ.

  ಶ್ರೇಯಸ್ ಮೊದಲ ಸಿನಿಮಾ

  ಶ್ರೇಯಸ್ ಮೊದಲ ಸಿನಿಮಾ

  ಅನೇಕ ಸ್ಟಾರ್ ನಟರ ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಕೆ.ಮಂಜು ಈಗ ತಮ್ಮ ಮಗನನ್ನು ಲಾಂಚ್ ಮಾಡಿಸುತ್ತಿದ್ದಾರೆ. ಇದು ಶ್ರೇಯಸ್ ಅವರ ಮೊದಲ ಸಿನಿಮಾವಾಗಿದೆ. ಸಿನಿಮಾವನ್ನು ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ ಆಗಿದ್ದಾರೆ.

  ಮತ್ತೆ ಗುರು ದೇಶಪಾಂಡೆ ಚಿತ್ರದಲ್ಲಿ ಚಿಕ್ಕಣ್ಣ

  ಮತ್ತೆ ಗುರು ದೇಶಪಾಂಡೆ ಚಿತ್ರದಲ್ಲಿ ಚಿಕ್ಕಣ್ಣ

  ಈ ಹಿಂದೆ ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದ ಚಿತ್ರಗಳಲ್ಲಿ ಚಿಕ್ಕಣ್ಣ ಕಾಮಿಡಿ ಮೋಡಿ ಮಾಡಿತ್ತು. 'ರಾಜಹುಲಿ' ಚಿಕ್ಕಣ್ಣ ಕೆರಿಯರ್ ನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಬಳಿಕ 'ರುದ್ರತಾಂಡವ' 'ಸಂಹಾರ' ಚಿತ್ರಗಳಲ್ಲಿಯೂ ಈ ಜೋಡಿ ಒಂದಾಗಿತ್ತು.

  ಚಿಕ್ಕಣ್ಣ ಅವರ ಸದ್ಯದ ಸಿನಿಮಾಗಳು

  ಚಿಕ್ಕಣ್ಣ ಅವರ ಸದ್ಯದ ಸಿನಿಮಾಗಳು

  ಚಿಕ್ಕಣ್ಣ ಸಾಕಷ್ಟು ಬಿಜಿ ಇರುವ ಹಾಸ್ಯ ನಟ. ಸದ್ಯ ಅವರು ಅಂಬರೀಶ್ ಪುತ್ರ ಅಭಿಷೇಕ್ ಅವರ 'ಅಮರ್', ನಿಖಿಲ್ ಕುಮಾರ್ ಅವರ 'ಸೀತಾ ರಾಮ ಕಲ್ಯಾಣ, 'ರಾಜಮರ್ತಾಂಡ' ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ.

  English summary
  kannada comedy actor chikkanna came with chikkanna new hairstyle for 'Padde Huli' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X