For Quick Alerts
  ALLOW NOTIFICATIONS  
  For Daily Alerts

  ಹೊಸ ಹೇರ್ ಸ್ಟೈಲ್ ಜೊತೆಗೆ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ಕುರಿ ಪ್ರತಾಪ್

  By Naveen
  |
  ಹೊಸ ಹೇರ್ ಸ್ಟೈಲ್ ನೊಂದಿಗೆ ಪ್ರತ್ಯಕ್ಷವಾದ ಮಜಾ ಟಾಕೀಸ್ ಕುರಿ ಪ್ರತಾಪ | Filmibeat Kannada

  ಹಾಸ್ಯ ನಟ ಕುರಿ ಪ್ರತಾಪ್ ಸದ್ಯ ಕನ್ನಡದ ಬಹು ಬೇಡಿಕೆಯ ಕಲಾವಿದ. ಸ್ಟಾರ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿರುವ ಕುರಿ ಪ್ರತಾಪ್ ಕಾಮಿಡಿ ಸಖತ್ ಕ್ಲಿಕ್ ಆಗುತ್ತಿದೆ. ಇತ್ತ ಅವರ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕುರಿ ಪ್ರತಾಪ್ ಇದೀಗ ಹೊಸ ಹೇರ್ ಸ್ಟೈಲ್ ನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ.

  ಹೊಸ ಕೇಶ ವಿನ್ಯಾಸವನ್ನು ಕುರಿ ಪ್ರತಾಪ್ ಮಾಡಿಸಿಕೊಂಡಿದ್ದಾರೆ. 'ದಿ ವಿಲನ್' ಸಿನಿಮಾಗಾಗಿ ಸುದೀಪ್, 'ನಟ ಸಾರ್ವಭೌಮ' ಸಿನಿಮಾಗಾಗಿ ಪುನೀತ್ ರಾಜ್ ಕುಮಾರ್ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ ರೀತಿಯ ಅದೇ ಮಾದರಿಯ ಕೇಶ ವಿನ್ಯಾಸದೊಂದಿಗೆ ಕುರಿ ಎಂಟ್ರಿ ಕೊಟ್ಟಿದ್ದಾರೆ.

  'ಕುರಿ' ಕಾಲ್ ಶೀಟ್ ಗಾಗಿ ಯಾವ ಮಟ್ಟದ ಡಿಮ್ಯಾಂಡ್ ಇದೆ ನೋಡಿ'ಕುರಿ' ಕಾಲ್ ಶೀಟ್ ಗಾಗಿ ಯಾವ ಮಟ್ಟದ ಡಿಮ್ಯಾಂಡ್ ಇದೆ ನೋಡಿ

  ಹೊಸ ಲುಕ್ ನಲ್ಲಿ ಫೋಟೋ ತೆಗೆದುಕೊಂಡಿರುವ ಕುರಿ ಪ್ರತಾಪ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕುರಿ ಅಭಿಮಾನಿಗಳು ಕೂಡ ಈ ಹೇರ್ ಸ್ಟೈಲ್ ಇಷ್ಟ ಪಟ್ಟಿದ್ದಾರೆ.

  ಇನ್ನು 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ಕುರಿ ಪ್ರತಾಪ್ ಸದ್ಯ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ಉಳಿದಂತೆ, 'ರಾಂಬೋ 2', 'ರಾಜ ಲವ್ಸ್ ರಾಧೆ', 'ಮಿಸ್ಟರ್ ಜೈ', 'ಎಂ ಎಲ್ ಎ' ಸಿನಿಮಾದಲ್ಲಿ ಕುರಿ ಪ್ರತಾಪ್ ನಟಿಸುತ್ತಿದ್ದಾರೆ.

  English summary
  'Maja Talkies' fame kannada comedy actor Kuri Prathap came with new hairstyle

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X