For Quick Alerts
  ALLOW NOTIFICATIONS  
  For Daily Alerts

  ನರಸಿಂಹರಾಜು ಹೆಸರಿನಲ್ಲಿ ನಡೆಯಲಿದೆ ಫಿಲ್ಮ್ ಫೆಸ್ಟಿವಲ್

  By Naveen
  |
  ತಾತನ ಹೆಸರಿನಲ್ಲಿ ಫಿಲ್ಮ್ ಫೆಸ್ಟಿವಲ್ ಮಾಡಲು ಮುಂದಾದ ಮೊಮ್ಮಕ್ಕಳು..! | Filmibeat Kannada

  ಇಂದು ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜನ್ಮದಿನ. ಈ ದಿನದಂದು ನರಸಿಂಹರಾಜು ಅವರ ಮೊಮ್ಮಕ್ಕಳು ವಿಶೇಷವಾಗಿ ಆಚರಿಸುತ್ತಿದ್ದಾರೆ. ತಮ್ಮ ತಾತನ ಹೆಸರು ಉಳಿಸುವ ಕೆಲಸ ಮಾಡುತ್ತಿರುವ ಅವರು ನರಸಿಂಹರಾಜು ಹೆಸರಿನಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಸಲು ಮುಂದಾಗಿದ್ದಾರೆ.

  Bengalore International Comedy Shorts (BICS) ಎಂಬ ಹೆಸರಿನಲ್ಲಿ ಹಾಸ್ಯ ಕಿರು ಚಿತ್ರೋತ್ಸವ ನಡೆಸಲು ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನರಸಿಂಹರಾಜು ಪ್ಲಾನ್ ಮಾಡಿದ್ದಾರೆ. ನರಸಿಂಹರಾಜು ಅವರ 95ನೇ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರೋತ್ಸವ ನಡೆಯಲಿದೆ.

  ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ.. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ..

  ಸಪ್ಟೆಂಬರ್ ನಲ್ಲಿ BICS ಕಿರು ಚಿತ್ರೋತ್ಸವ ಶುರು ಆಗಲಿದೆ. ನಾಲ್ಕರಿಂದ ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, 20 ನಿಮಿಷದ ಒಳಗೆ ಇರುವ ಹಾಸ್ಯ ಕಿರುಚಿತ್ರವನ್ನು ಇಲ್ಲಿ ಪ್ರದರ್ಶನ ಮಾಡಬಹುದಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಅವಿನಾಶ್ ನರಸಿಂಹರಾಜು ಸ್ಟೂಡಿಯೊದಲ್ಲಿ ನಡೆಯಲಿದೆ.

  ಅಂದಹಾಗೆ, ಬರೀ ಕನ್ನಡ ಮಾತ್ರವಲ್ಲದೆ ಯಾವ ಭಾಷೆಯ ಚಿತ್ರಗಳ ಮೂಲಕ ಕೂಡ ಸ್ಪರ್ಧೆಗೆ ಇಳಿಯಬಹುದಾಗಿದೆ. ಈ ಚಿತ್ರೋತ್ಸವದಲ್ಲಿ ವಿಜೇತರಾದ ಚಿತ್ರತಂಡಕ್ಕೆ ನರಸಿಂಹರಾಜು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

  English summary
  Kannada comedy actor Narasimharaju's 95th birthday anniversary special 'Bengalore International Comedy Shorts' film festival held in Bengaluru on September.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X