»   » ಮತ್ತೆ ಬಂದ್ರು ಗಡ್ಡಾ ವಿಜಿ: ಈ ಬಾರಿ ಹೀರೋ ಯಾರಿರಬಹುದು?

ಮತ್ತೆ ಬಂದ್ರು ಗಡ್ಡಾ ವಿಜಿ: ಈ ಬಾರಿ ಹೀರೋ ಯಾರಿರಬಹುದು?

Posted By:
Subscribe to Filmibeat Kannada

'ದ್ಯಾವ್ರೆ', 'ಪ್ಲಸ್' ಚಿತ್ರದ ಖ್ಯಾತಿಯ ನಟ ಕಮ್ ನಿರ್ದೇಶಕ ಗಡ್ಡಾ ವಿಜಿ ಅವರು ಇದೀಗ ತಮ್ಮ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ವಾಪಸಾಗಿದ್ದಾರೆ.

ತಮ್ಮ ಪ್ರತಿಯೊಂದು ಚಿತ್ರದಲ್ಲೂ ಏನಾದರೂ ಒಂದು ವಿಶೇಷ ಪ್ರಯೋಗ ಮಾಡುವ ಯೋಗರಾಜ್ ಭಟ್ರ ಶಿಷ್ಯ ಗಡ್ಡಾ ವಿಜಿ ಅವರು ಇದೀಗ 'ವಾಜಿ' ಎಂಬ ವಿಭಿನ್ನ ಹೆಸರಿನ ಸಿನಿಮಾದ ಜೊತೆ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.[ವಿಮರ್ಶೆ : ಮೈನಸ್ ಮೈನಸ್ '+' ಆದ್ರೆ '-' ಮೈನಸ್.!]

Kannada director Gadda Viji's next movie is 'Vaaji'

ಕರಿಸುಬ್ಬು ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ವಾಜಿ' ಚಿತ್ರದಲ್ಲಿ ಒಂದು ಶ್ವಾನವನ್ನು ಇಟ್ಟುಕೊಂಡು ಗಡ್ಡಾ ವಿಜಿ ಅವರು ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಇಡೀ ಕಥೆಯೇ ನಾಯಿಯ ಸುತ್ತ ಸುತ್ತುತ್ತಿದ್ದು, ಬಹುತೇಕ ಇಡೀ ಚಿತ್ರದ ಹೀರೋ ನಾಯಿಯೇ ಆಗಿರುತ್ತದೆ. ಅಲ್ಲದೇ ಚಿತ್ರದ ಹೆಸರೇ ಶ್ವಾನದ ಹೆಸರಾಗಿದೆ.

ಅಂದಹಾಗೆ ನಾಯಿಯನ್ನು ಇಟ್ಟುಕೊಂಡು ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ. ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ 'ನಿಶ್ಯಬ್ಧ' ಚಿತ್ರದಲ್ಲಿ ಕೂಡ ಶ್ವಾನವೊಂದು ಪ್ರಮುಖ ಪಾತ್ರ ವಹಿಸಿತ್ತು.[ಆರ್.ಜಿ.ವಿ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗೋಕೂ ರೆಡಿ]

Kannada director Gadda Viji's next movie is 'Vaaji'

ಇದೀಗ ಗಡ್ಡಾ ವಿಜಿ ಅವರು ತಾವೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ವಾಜಿ' ಚಿತ್ರದಲ್ಲಿ ಶ್ವಾನವನ್ನು ಇಟ್ಟುಕೊಂಡು ವಿಭಿನ್ನ ಪ್ರಯೋಗ ಮಾಡಲು ಹೊರಟಿದ್ದು, ಆಗಸ್ಟ್ 15 ರಂದು 'ವಾಜಿ' ಸಿನಿಮಾ ಸೆಟ್ಟೇರಲಿದೆ.

ನಟ-ನಟಿ ಸೇರಿದಂತೆ ಇನ್ನುಳಿದ ಪಾತ್ರಗಳ ಅನ್ವೇಷಣೆಯಲ್ಲಿ ತೊಡಗಿರುವ ನಿರ್ದೇಶಕ ಗಡ್ಡಾ ವಿಜಿ ಅವರು ಉಳಿದ ತಂತ್ರಜ್ಞರು ಆಯ್ಕೆ ಮಾಡಿದ್ದು, ಗುರು ಪ್ರಶಾಂತ್ ರೈ, ಮಾಧವ್ ಮತ್ತು ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದರೆ, ಸಂಗೀತ ನಿರ್ದೇಶಕ ವೀರ ಸಮರ್ಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

English summary
After 'Dyavre' and 'Plus', director Gadda Viji is all set to make a comeback with a new film called 'Vaaji'. Gadda Viji himself has scripted the film and the film will be officially launched on the 15th of August. 'Vaaji' is a story of a dog and the film revolves around a dog of that name.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada