»   » ಶಿವಣ್ಣನ ನಂತರ ಕನ್ನಡಿಗ ನಾಗತಿಹಳ್ಳಿ ಚಂದ್ರಶೇಖರ್ ಗೆ ಲಂಡನ್ ನಲ್ಲಿ ಗೌರವ

ಶಿವಣ್ಣನ ನಂತರ ಕನ್ನಡಿಗ ನಾಗತಿಹಳ್ಳಿ ಚಂದ್ರಶೇಖರ್ ಗೆ ಲಂಡನ್ ನಲ್ಲಿ ಗೌರವ

Posted By:
Subscribe to Filmibeat Kannada

'ಅಮೇರಿಕಾ..ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಆಗಿ ನೀಡಿದ ಖ್ಯಾತಿ ಸಾಹಿತಿ-ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರದ್ದು.

ಮೂರು ವರ್ಷಗಳ ತಮ್ಮ ಸಿನಿ ಪಯಣದಲ್ಲಿ ಹಲವು ಬಾರಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ರವರ ಹಿರಿಮೆಗೆ ಮತ್ತೊಂದು ಗರಿ ಲಭಿಸಿದೆ.

ನಾಗತಿಹಳ್ಳಿ ಚಂದ್ರಶೇಖರ್ ಗೆ ಲಂಡನ್ ನಲ್ಲಿ ಗೌರವ

23 ಅಕ್ಟೋಬರ್ 2015 ರಂದು ಲಂಡನ್ ನ ಲ್ಯಾಂಬೆತ್ ನಲ್ಲಿ ಬಸವಣ್ಣ ಪುತ್ಥಳಿ ಮುಂಭಾಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರಿಗೆ ವಿಶ್ವಮಟ್ಟದ ಅತ್ಯುನ್ನತ ಗೌರವ ಸಂದಿದೆ. [ಎರಡು ವರ್ಷದ ನಂತ್ರ ಮತ್ತೆ ಬಂದ ನಾಗತಿಹಳ್ಳಿ ಚಂದ್ರಶೇಖರ್]

ಬಸವೇಶ್ವರ ಫೌಂಡೇಶನ್ ನಿಂದ ಸನ್ಮಾನ

ಕನ್ನಡ ಸಂಸ್ಕೃತಿ ಹಾಗೂ ಪರಂಪರೆಗೆ ನಾಗತಿಹಳ್ಳಿ ಚಂದ್ರಶೇಖರ್ ನೀಡಿರುವ ಅಪಾರ ಕೊಡುಗೆ ಪರಿಗಣಿಸಿ ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪರವಾಗಿ ಲ್ಯಾಂಬೆತ್ ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಗೌರವಿಸಿದ್ದಾರೆ.

ಅಂದು ಶಿವಣ್ಣ, ಇಂದು ನಾಗತಿಹಳ್ಳಿ

ಕಳೆದ ಮಾರ್ಚ್ ತಿಂಗಳಿನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರಿಗೆ ಇದೇ ರೀತಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸನ್ಮಾನಿಸಿತ್ತು. [ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ]

ನರೇಂದ್ರ ಮೋದಿ ಅನಾವರಣ ಮಾಡಿದ್ದ ಬಸವಣ್ಣ ಪುತ್ಥಳಿ

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೃತಹಸ್ತ ದಿಂದ ಲಂಡನ್ ನ ಲ್ಯಾಂಬೆತ್ ನಲ್ಲಿ ಬಸವಣ್ಣನವರ ಪುತ್ಥಳಿ ಕಳೆದ ವರ್ಷ ಅನಾವರಣಗೊಂಡಿತ್ತು. ಅಲ್ಲೇ ಮೋದಿ ರವರಿಗೆ 'ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್'ನಿಂದ ಸನ್ಮಾನ ಕೂಡ ಮಾಡಲಾಗಿತ್ತು. [ಥೇಮ್ಸ್ ದಡದಲ್ಲಿ ಬಸವಣ್ಣನ ಪುತ್ಥಳಿ, ಮೋದಿಗೆ ಆಹ್ವಾನ]

ನಾಗತಿಹಳ್ಳಿ ಚಂದ್ರಶೇಖರ್ ಕುರಿತು....

ಚಿತ್ರಕಥೆ ಬರಹಗಾರರಾಗಿ 'ಕಾಡಿನ ಬೆಂಕಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್, 'ಬಾ ನಲ್ಲೆ ಮಧುಚಂದ್ರಕೆ', 'ಅಮೇರಿಕಾ ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ', 'ಇಷ್ಟಕಾಮ್ಯ' ಸೇರಿದಂತೆ ಅನೇಕ ಚಿತ್ರಗಳ ಸೂತ್ರಧಾರ.

English summary
Renowned Kannada film Director Mr Nagathihalli Chandrashekar was honoured by The Lambeth Basaveshwara Foundation in London on 23rd October 2015.The former Mayor of Lambeth Dr Neeraj Patil had invited him on behalf of The Foundation for his contribution towards promoting Kannada culture and heritage.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada