For Quick Alerts
  ALLOW NOTIFICATIONS  
  For Daily Alerts

  'ದ್ವಿತ್ವ' ನಿಂತ ಬಳಿಕ ಪವನ್ ಕುಮಾರ್ ಮುಂದಿನ ಹೆಜ್ಜೆ ಮಲಯಾಳಂ ನಟನ ಜೊತೆ!

  |

  ಕನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಪವನ್ ಕುಮಾರ್ ಕೂಡ ಒಬ್ಬರು. ಪವನ್ ಕುಮಾರ್ ಲೂಸಿಯಾ ಪವನ್ ಅಂತಲೇ ಖ್ಯಾತಿ ಪಡೆದಿದ್ದಾರೆ. 'ಲೂಸಿಯಾ' ಸಿನಿಮಾದ ಮೂಲಕ ದೊಡ್ಡ ಯಶಸ್ಸು ಕಂಡು ಉತ್ತಮ ನಿರ್ದೇಶಕ ಎನಿಸಿಕೊಂಡರು ಪವನ್ ಕುಮಾರ್.

  ಸದ್ಯ ಪವನ್ ಕುಮಾರ್ ಬಗ್ಗೆ ಮಾತನಾಡೋಕೆ ಕಾರಣ ಅವರ ಮುಂದಿನ ಸಿನಿಮಾ. ಪವನ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಬಂದು ಹಲವು ವರ್ಷಗಳೇ ಕಳೆದಿದೆ. ಅವರ ಮುಂದಿನ ಸಿನಿಮಾ ಯಾವುದು ಯಾವಾಗ ಎಂದು ಸಿನಿಪ್ರಿಯರು ಕಾಯ್ತಿದ್ದಾರೆ. ಅದಕ್ಕೀಗ ಉತ್ತರ ಸಿಕ್ಕಿದ್ದು ಪವನ್ ಕುಮಾರ್ ಮುಂದಿನ ಸಿನಿಮಾ ಬಹುತೇಕ ಪಕ್ಕಾ ಆಗಿದೆ.

  Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!

  ಮಲಯಾಳಂ ಸ್ಟಾರ್ ನಟನ ಜೊತೆಗೆ ಪವನ್ ಕುಮಾರ್ ಕೈಜೋಡಿಸುತ್ತಿದ್ದಾರೆ. ಮಯಾಳಂ ಮತ್ತು ಕನ್ನಡದಲ್ಲಿ ಈ ಸಿನಿಮಾ ಬರಲಿದೆ. ಪವನ್ ಕುಮಾರ್ ಫಹಾದ್ ಫಾಸಿಲ್‌ಗೆ ಸಿನಿಮಾ ಬಗ್ಗೆ ಮುಂದೆ ಓದಿ..

  ಅಪ್ಪು ಜೊತೆ ಪವನ್ ಕುಮಾರ್ ಸಿನಿಮಾ!

  ಅಪ್ಪು ಜೊತೆ ಪವನ್ ಕುಮಾರ್ ಸಿನಿಮಾ!

  ಇನ್ನು ಪವನ್ ಕುಮಾರ್ ಸಿನಿಮಾಗಳಿಗಾಗಿ ಕಾಯ್ತಿದ್ದ ಸಿನಿಪ್ರಿಯರಿಗೆ ಕಳೆದ ವರ್ಷ ಪವನ್ ಕುಮಾರ್ ಸಿಹಿಸುದ್ದಿಯನ್ನು ಕೊಟ್ಟಿದ್ದರು. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡಲು ಪವನ್ ಕುಮಾರ್ ಸಜ್ಜಾಗಿದ್ದರು. ಈ ಚಿತ್ರ ಅಧಿಕೃತವಾಗಿ ಪ್ರಕಟವಾಗಿತ್ತು. ಜೊತೆಗೆ 'ದ್ವಿತ್ವ' ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಪೋಸ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕಂಡು ಸಿನಿಮಾದ ಮೇಲೆ ಒಂದಷ್ಟು ನಿರೀಕ್ಷೆ ಹುಟ್ಟಿತ್ತಿ. ಆದರೆ ದುರದೃಷ್ಟವಶಾತ್ ಅಪ್ಪು ಅಕಾಲಿಕ ಮರಣದಿಂದಾಗಿ ಸಿನಿಮಾ ನಿಂತುಹೋಗಿದೆ.

  ಪುನೀತ್ ಜೊತೆ ನಟಿಸಬೇಕಿದ್ದ ಆಶಿಕಾಗೆ ನಿರಾಸೆ: ದ್ವಿತ್ವ ಕಥೆಯೇನು?ಪುನೀತ್ ಜೊತೆ ನಟಿಸಬೇಕಿದ್ದ ಆಶಿಕಾಗೆ ನಿರಾಸೆ: ದ್ವಿತ್ವ ಕಥೆಯೇನು?

  ಪವನ್ ಕುಮಾರ್ 'ಯೂ ಟರ್ನ್' ಯಶಸ್ಸು!

  ಪವನ್ ಕುಮಾರ್ 'ಯೂ ಟರ್ನ್' ಯಶಸ್ಸು!

  ನಿರ್ದೇಶಕ ಪವನ್ ಕುಮಾರ್ ಕೊಂಚ ಡಿಫರೆಂಟ್. ವಿಭಿನ್ನ ಶೈಲಿಯಲ್ಲಿ ಡೈರೆಕ್ಷನ್ ಮಾಡುತ್ತಾರೆ. ಹಾಗಾಗಿ ಇವರು ಮಾಡಿದಂತಹ 'ಯು ಟರ್ನ್' ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು. ಕನ್ನಡದಲ್ಲಿ ಬಂದು ಹಿಟ್ ಲಿಸ್ಟ್ ಸೇರಿದ 'ಯು ಟರ್ನ್' ತಮಿಳು, ತೆಲುಗಿನಲ್ಲಿ ರಿಮೇಕ್ ಆಯ್ತು. 'ಯೂ ಟರ್ನ್' ಪ್ರಕಟ ಮಾಡಿದ ಸಿನಿಮಾ 'ದ್ವಿತ್ವ'. ಆ ಚಿತ್ರ ನಿಂತುಹೋದ ಕಾರಣ ಮುಂದಿನ ಹೆಜ್ಜೆ ಇಟ್ಟಿದ್ದಾರೆ ಪವನ್. ಬಹುಭಾಷಾ ನಟರಾದ ಫಹಾದ್ ಫಾಸಿಲ್‌ಗೆ ನಿರ್ದೇಶನ ಮಾಡುತ್ತಿದ್ದಾರೆ.

  ಫಹಾದ್ ಫಾಸಿಲ್‌ಗೆ ಪವನ್ ನಿರ್ದೇಶನ!

  ಫಹಾದ್ ಫಾಸಿಲ್‌ಗೆ ಪವನ್ ನಿರ್ದೇಶನ!

  ಮಲಯಾಳಂ ನಟ ಫಹಾದ್ ಫಾಸಿಲ್ ಸ್ಟಾರ್ ನಟ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮತ್ತಷ್ಟು ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಹಾಗಾಗಿ ಪವನ್ ಕುಮಾರ್ ಫಹಾದ್ ಫಾಸಿಲ್‌ಗೆ ಸಿನಿಮಾ ಮಾಡುತ್ತಾರೆ ಎನ್ನುವುದು ಫ್ಯಾನ್ಸ್‌ಗೆ ಬಂಪರ್ ಸುದ್ದಿ. ಈ ಸಿನಿಮಾ ಮಲಯಾಳಂ ಮತ್ತು ಕನ್ನಡದಲ್ಲಿ ತಯಾರಾಗಲಿದೆ. ಹಾಗಾಗಿ ಈ ಮೂಲಕ ಫಹಾದ್ ಫಾಸಿಲ್ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ಹಾಗೆ ಆಗುತ್ತೆ.

  ಪುನೀತ್ ನಟಿಸಬೇಕಿದ್ದ 'ದ್ವಿತ್ವ' ಸಿನಿಮಾದ ಬಗ್ಗೆ ನಿರ್ದೇಶಕ ಪವನ್ ಮಾತುಪುನೀತ್ ನಟಿಸಬೇಕಿದ್ದ 'ದ್ವಿತ್ವ' ಸಿನಿಮಾದ ಬಗ್ಗೆ ನಿರ್ದೇಶಕ ಪವನ್ ಮಾತು

  ಕಥೆ ಒಪ್ಪಿರುವ ಫಹಾದ್ ಫಸಿಲ್!

  ಕಥೆ ಒಪ್ಪಿರುವ ಫಹಾದ್ ಫಸಿಲ್!

  ಈ ಚಿತ್ರದ ಮಾತುಕತೆ ಎಲ್ಲವೂ ಪೂರ್ಣಗೊಂಡಿದೆ. ಫಹಾದ್‌ಗೆ ಪವನ್ ಕುಮಾರ್ ಕಥೆಯನ್ನು ಹೇಳಿದ್ದಾರಂತೆ. ಫಹಾದ್ ಫಾಸಿಲ್ ಕೂಡ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲಿಯೇ ಸಿನಿಮಾವನ್ನು ನಿರ್ಮಾಣ ಸಂಸ್ಥೆ ಪ್ರಕಟ ಮಾಡಲಿದೆ. ಪವನ್ ಕುಮಾರ್ ಕ್ಲೀಷೆಗಳನ್ನು ಹೊರತುಪಡಿಸಿ ಸಿನಿಮಾ ಮಾಡುತ್ತಾರೆ. ಹಾಗಾಗಿಯೇ ಅವರ ಸಿನಿಮಾಗಳು ಹೆಚ್ಚು ಕಂಟೆಂಟ್ ಆಧಾರಿತವಾಗಿರುತ್ತವೆ. ಈ ಸಿನಿಮಾದಲ್ಲಿ ಯಾವ ರೀತಿಯ ಹೊಸ ಪ್ರಯೋಗ ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ.

  English summary
  Kannada Director Pawan Kumar To Direct Fahadh Faasil Upcoming Movie, Know More,
  Saturday, July 9, 2022, 18:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X