For Quick Alerts
  ALLOW NOTIFICATIONS  
  For Daily Alerts

  'ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ

  By Bharathkumar
  |

  ರಿಯಲಿಸ್ಟಿಕ್ ಪ್ರೇಮಕಥೆಗಳನ್ನ ಸಿನಿಮಾ ಮಾಡುವುದರಲ್ಲಿ ನಿರ್ದೇಶಕ ಆರ್ ಚಂದ್ರು ಎತ್ತಿದ ಕೈ. ಅದೇ ರೀತಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಆಕ್ಷನ್ ಸಿನಿಮಾಗಳನ್ನ ತೆರೆ ಮೇಲೆ ತರುವಲ್ಲಿ ಕೂಡ ಆರ್ ಚಂದ್ರು ನಿಪುಣರು.

  ಈಗ ಇವೆರೆಡು ಎಲಿಮೆಂಟ್ಸ್ ಗಳನ್ನ ಒಂದೇ ಚಿತ್ರದಲ್ಲಿ ನೀಡಲು ಮುಂದಾಗಿದ್ದಾರೆ ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್.['ಲಕ್ಷ್ಮಣ', ಆರ್.ಚಂದ್ರು, ಮೇಘನಾ ರಾಜ್ ಸುತ್ತ ಏನಿದು ಗಾಸಿಪ್ಪು.?]

  'ಲಕ್ಷ್ಮಣ' ಚಿತ್ರದ ಯಶಸ್ಸಿನಲ್ಲಿದ್ದ ಆರ್ ಚಂದ್ರು, ಈಗ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಸದಾ ವಿಭಿನ್ನ ಸಿನಿಮಾಗಳನ್ನ ನೀಡುವಲ್ಲಿ ಗಮನ ಹರಿಸುವ ಈ ನಿರ್ದೇಶಕ ಈ ಬಾರಿ ಮತ್ತೊಂದು ನೈಜಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ಸೂಚನೆ ಕೊಟ್ಟಿದ್ದಾರೆ.[ಜೈಪುರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆರ್.ಚಂದ್ರು ಚಿತ್ರ]

  Kannada Director R Chandru New Film 'Kanaka'

  ಆರ್ ಚಂದ್ರು ಆಕ್ಷನ್ ಕಟ್ ಹೇಳಲಿರುವ ಹೊಸ ಸಿನಿಮಾದ ಹೆಸರು 'ಕನಕ-ರಾಜ್ ಕುಮಾರ್ ಫ್ಯಾನ್'. ಚಿತ್ರದ ಟೈಟಲ್ ಗಮನಿಸಿದ್ರೆ, ಇದು ಡಾ.ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬರ ಕಥೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

  ಹೌದು, 'ಕನಕ' ಸಿನಿಮಾ ಒಬ್ಬ ಆಟೋ ಡ್ರೈವರ್ ಕಥೆ. ಡಿಗ್ರಿ ಮಾಡದ ಈ ವ್ಯಕ್ತಿ ಅಪ್ಪಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿರುತ್ತಾರೆ. ಇಂತಹ ವ್ಯಕ್ತಿಯದೊಂದು ಲವ್ ಸ್ಟೋರಿಯ, ಜೊತೆಗೆ ಕೆಲವು ಇಂಟ್ರಸ್ಟಿಂಗ್ ವಿಷಯಗಳನ್ನಿಟ್ಟು ಸಿನಿಮಾ ರೂಪ ಕೊಡುತ್ತಿದ್ದಾರೆ ಆರ್ ಚಂದ್ರು.[ಆರ್.ಚಂದ್ರು 'ಲಕ್ಷ್ಮಣ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

  ಈಗಾಗಲೇ ಚಿತ್ರದ ನಾಯಕನ ಪಾತ್ರಕ್ಕೆ ಕನ್ನಡದ ಸ್ಟಾರ್ ನಟನೊಬ್ಬನ ಜೊತೆ ಮಾತುಕತೆ ಮುಗಿಸಿದ್ದು, ಅಂತಿಮವಾಗಿದೆಯಂತೆ. ಇನ್ನೂ ಚಿತ್ರದ ತಾಂತ್ರಿಕ ವರ್ಗ ಹಾಗೂ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಆರ್.ಚಂದ್ರು ಡಿಸೆಂಬರ್ ನಲ್ಲಿ' ರಾಜ್ ಕುಮಾರ್ ಅಭಿಮಾನಿಯ ಚಿತ್ರವನ್ನ ಶುರು ಮಾಡಲಿದ್ದಾರೆ.

  English summary
  Kannada Director R Chandru Started his New Film titled as a 'Kanaka-Rajkumar Fan'. This film based on a true story about Auto Driver

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X