Just In
Don't Miss!
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- News
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್'ಗೆ 8, 'ಟಗರು' ಚಿತ್ರಕ್ಕೆ ಮೂರು ಅವಾರ್ಡ್: ಸೈಮಾ ವಿರುದ್ಧ ನಿರ್ದೇಶಕ ರಘುರಾಮ್ ಕೆಂಡಾಮಂಡಲ
ಆಗಸ್ಟ್ 15ರಂದು ಕತಾರ್ ನಲ್ಲಿ ನಡೆದ ಅದ್ದೂರಿ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಅನೇಕ ಕನ್ನಡ ಚಿತ್ರಗಳು ಪ್ರಶಸ್ತಿ ಗೆದ್ದು ಬೀಗಿವೆ. ಅದರಲ್ಲೂ ಈ ಬಾರಿಯ ಅತೀ ಹೆಚ್ಚು ಪ್ರಶಸ್ತಿ ಬ್ಲಾಕ್ ಬಸ್ಟರ್ ಕೆಜಿಎಫ್ ಸಿನಿಮಾದ ಪಾಲಾಗಿವೆ.
ಸೈಮಾ ಪ್ರಶಸ್ತಿ ಪಡೆದ ರಾಕಿ ಭಾಯ್ ಅದನ್ನ ಅರ್ಪಿಸಿದ್ದು ಯಾರಿಗೆ?
ಕೆಜಿಎಫ್ ಚಿತ್ರ ಒಟ್ಟು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇನ್ನು ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾ 3 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆದ್ರೆ ದೇಶದಾದ್ಯಂತ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಮೂರೆ ಪ್ರಶಸ್ತಿ ಬಂದಿರುವುದರ ಬಗ್ಗೆ ನಟ ಮತ್ತು ನಿರ್ದೇಶಕ ರಾಘುರಾಮ್ ಗರಂ ಆಗಿದ್ದಾರೆ.

ಟಗರು ಚಿತ್ರಕ್ಕೆ ಮೂರು ಪ್ರಶಸ್ತಿ
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಮೂರೆ ಅವಾರ್ಡ್ ಬಂದಿದೆ. ದೇಶದಾದ್ಯಂತ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಕೇವಲ ಮೂರು ಪ್ರಶಸ್ತಿ ಬಂದಿರುವುದು ರಘುರಾಮ್ ಬೇಸರಕ್ಕೆ ಕಾರಣವಾಗಿದೆ. ಇದೊಂದು ವ್ಯವಹಾರ ಎಂದು ಕೆಂಡಕಾರಿದ್ದಾರೆ.
Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ'

ಸೈಮಾ ಪ್ರಶಸ್ತಿ ವಿರುದ್ಧ ಅಸಮಾಧಾನ
"ಪಡೆದುಕೊಳ್ಳೋದು ಸಂಸ್ಕಾರ ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ, ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು ಸೈಮಾ ಅವರ ಪಕ್ಷಪಾತದ ನಿರ್ಧಾರ" ಎಂದು ಗುಡುಗಿದ್ದಾರೆ.

ಧನಂಜಯ್ ಗೆ ಪ್ರಶಸ್ತಿ
ಟಗರು ಚಿತ್ರದಲ್ಲಿ ಡಾಲಿ ಆಗಿ ಅಬ್ಬರಿಸಿದ್ದ ನಟ ಧನಂಜಯ್ ಖ್ಯಾತ ವಿಲನ್ ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಗಾಯಕಿ ಮತ್ತು ವಿಮರ್ಶಕರ ನೆಚ್ಚಿನ ನಟಿ ಮಾನ್ವಿತಾ ಅವರಗೆ ಪ್ರಶಸ್ತಿ ಬಂದಿದೆ. ಇನ್ನು ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು ಎನ್ನುವುದು ರಘುರಾಮ್ ಬೇಸರ. ಟಗರು ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಖ್ಯಾತಿಗಳಿಸಿತ್ತು. ಆದ್ರೂ ಸೈಮಾ ಕಡೆಗಣಿಸಿರುವುದು ನೋವಿನ ಸಂಗತಿ ಎನ್ನುವುದು ರಘುರಾಮ್ ಮಾತು.
Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್

'ಕೆಜಿಎಫ್' ಗೆ ಎಂಟು ಪ್ರಶಸ್ತಿ
ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸದ್ದು ಮಾಡಿದ್ದ 'ಕೆಜಿಎಫ್ ಚಾಪ್ಟರ್-1' ಚಿತ್ರಕ್ಕೆ ಎಂಟು ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟ ಯಸ್, ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್, ಅತ್ಯುತ್ತಮ ಸಿನಿಮಟೋಗ್ರಾಫರ್ ಭುವನ್ ಗೌಡ, ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರ್, ಅತ್ಯುತ್ತಮ ಪೋಷಕ ನಟಿ ಅರ್ಚನ, ಅತ್ಯುತ್ತಮ ಪೋಷಕ ನಟ ಅಚ್ಯುತ್ ಕುಮಾರ್ ಮತ್ತು ಹಿನ್ನಲೆ ಗಾಯಕ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.