»   » ಫೆಬ್ರವರಿ 9 ರಂದು 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ ಮದುವೆ

ಫೆಬ್ರವರಿ 9 ರಂದು 'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ ಮದುವೆ

Posted By:
Subscribe to Filmibeat Kannada

ಸದ್ಯ, 'ಕಿರಿಕ್ ಪಾರ್ಟಿ' ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ರಿಶಬ್ ಶೆಟ್ಟಿ, ಇದೇ ಸಂತಸದ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮನೆಯವರು ನಿಶ್ಚಯಿಸಿರುವ ಹುಡುಗಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಪ್ರಗತಿ ಶೆಟ್ಟಿ ಅವರನ್ನ, ಕನ್ನಡದ ಸಕ್ಸಸ್ ಫುಲ್ ನಿರ್ದೇಶಕ ರಿಶಬ್ ಶೆಟ್ಟಿ ಇದೇ ವಾರದಲ್ಲಿ ವರಿಸಲಿದ್ದಾರೆ.[ಹಸೆಮಣೆ ಏರಲು ತಯಾರಾದ 'ರಿಕ್ಕಿ' ನಿರ್ದೇಶಕ ರಿಶಬ್ ಶೆಟ್ಟಿ]

ರಿಶಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯವರು ಮದುವೆ ಯಾವಾಗ, ಮತ್ತು ಎಲ್ಲಿ ಎಂಬ ಮಾಹಿತಿಗಾಗಿ ಮುಂದೆ ಓದಿ.....

ರಿಶಬ್ ಶೆಟ್ಟಿ ಬಾಳ ಸಂಗಾತಿ ಇವರೇ..

'ರಿಕ್ಕಿ' ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ರಿಶಬ್ ಶೆಟ್ಟಿ ಅವರನ್ನು ಕೈ ಹಿಡಿಯಲಿರುವ ಸುಂದರಿ ಇವರೇ. ಹೆಸರು ಪ್ರಗತಿ ಶೆಟ್ಟಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.

ಆರೇಂಜ್ಡ್ ಮ್ಯಾರೇಜ್

ನಟ-ನಿರ್ದೇಶಕ ರಿಶಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರದು ಆರೇಂಜ್ಡ್ ಮ್ಯಾರೇಜ್. ಬೆಂಗಳೂರಿನ ಪ್ರತಿ‍ಷ್ಠಿತ ಐಬಿಎಮ್ ಕಂಪೆನಿಯಲ್ಲಿ ಪ್ರಗತಿ ಶೆಟ್ಟಿ ಅವರು ಕೆಲಸ ಮಾಡುತ್ತಿದ್ದು, ಮನೆಯವರು ನಿಶ್ಚಯ ಮಾಡಿದ್ದಾರಂತೆ.

ಯಾವಾಗ ವಿವಾಹ?

ಇದೇ ತಿಂಗಳು (ಫೆಬ್ರವರಿ) 9 ರಂದು, ಮಧ್ಯಾಹ್ನ 12.30 ರ ಶುಭ ಘಳಿಗೆಯಲ್ಲಿ ನಿರ್ದೇಶ ರಿಶಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯ ವಿವಾಹ ಸರಳವಾಗಿ ನಡೆಯಲಿದೆ.

ಮದುವೆ ಎಲ್ಲಿ?

ರಿಶಬ್ ಶೆಟ್ಟಿ ಅವರ ಹುಟ್ಟೂರಾದ ಕುಂದಾಪುರದಲ್ಲೇ ವಿವಾಹ ಮಹೋತ್ಸವ ಜರುಗಲಿದೆ. ಉಡುಪಿ ಜಿಲ್ಲೆಯ ಕೋಟೇಶ್ವರದ 'ಸಹನಾ ಕನ್ವೆಂಶನ್ ಸೆಂಟರ್'ನಲ್ಲಿ ಮದುವೆ ಸಮಾರಂಭ ನೆರವೇರಲಿದೆ.

ಪ್ರಗತಿ ಶೆಟ್ಟಿ ಬಗ್ಗೆ....

ಮೂಲತಃ ಉಡುಪಿ ಜಿಲ್ಲೆಯ ಮಂದಾರ್ಥಿಯವರಾಗಿರುವ ಪ್ರಗತಿ ಶೆಟ್ಟಿ ಅವರು ಸದ್ಯಕ್ಕೆ ಶಿವಮೊಗ್ಗದಲ್ಲಿ ನೆಲೆಸಿದ್ದಾರಂತೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಗತಿ ತಮ್ಮ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ. ರಿಶಬ್ ಶೆಟ್ಟಿ ಅವರ ತಂಗಿ ಪ್ರತಿಭಾ ಅವರಿಂದ ಪ್ರಗತಿ ಶೆಟ್ಟಿ ಅವರ ಪರಿಚಯ ರಿಶಬ್ ಅವರಿಗಿದೆ.

English summary
Kirik Party fame Kannada Director Rishab Shetty is set to tie the knot with software professional Pragathi Shetty February 9th, in his hometown Kundapura.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada