For Quick Alerts
  ALLOW NOTIFICATIONS  
  For Daily Alerts

  'ರಾಕಿಂಗ್' ವಿಷಯಕ್ಕೆ ಶಾಕ್ ಆಗಿ 'ಜೆಡಿ'ಗೆ ಟಾಟಾ ಹೇಳಿದ ಎಸ್ ನಾರಾಯಣ್

  By Suneetha
  |

  ಮೊನ್ನೆ ಮೊನ್ನೆ ನಿರ್ದೇಶಕ ಎಸ್ ನಾರಾಯಣ್ ಅವರು 'ಜೆಡಿ' ಎಂಬ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅದು ಅವರ 50ನೇ ಸಿನಿಮಾ ಅಂತ ಎಲ್ಲಾ ಕಡೆ ಭಾರಿ ಸುದ್ದಿಯಾಗಿತ್ತು.

  ಆದರೆ ಇದೀಗ ಲೇಟೆಸ್ಟ್ ಮಾಹಿತಿ ಪ್ರಕಾರ ಎಸ್ ನಾರಾಯಣ್ ಅವರು 'ಜೆ.ಡಿ' ಚಿತ್ರಕ್ಕೆ ನಿರ್ದೇಶನ ಮಾಡುತ್ತಿಲ್ಲ, ಇದು ಅವರ 50ನೇ ಸಿನಿಮಾ ಅಲ್ಲ. ಈ ವಿಷಯವನ್ನು ಖುದ್ದಾಗಿ ಎಸ್ ನಾರಾಯಣ್ ಅವರೇ ಹೇಳಿರುವುದರಿಂದ ಎಲ್ಲರೂ ನಂಬಲೇಬೇಕಾಗಿದೆ.['ರಾಕಿಂಗ್'ಗೆ ಸೈಡ್ ಗೆ ಹೋಗೋ' ಎಂದ 'ಜೆಡಿ' ಚಿತ್ರದ ಬಜೆಟ್ ಎಷ್ಟು.?]

  ಅಷ್ಟಕ್ಕೂ ಎಸ್ ನಾರಾಯಣ್ ಅವರು ಚಿತ್ರತಂಡದಿಂದ ಹೊರ ಬೀಳಲು ಕಾರಣ ಏನಪ್ಪಾ ಅಂದ್ರೆ ಚಿತ್ರದ ನಟ ಕಮ್ ನಿರ್ಮಾಪಕ ಜೆಡಿ ಅಲಿಯಾಸ್ ಜಗದೀಶ್ ಅವರು ಎಂಬ ಉತ್ತರ ಬರುತ್ತದೆ.

  ಈ ಮೊದಲು 'ಜೆಡಿ' ಪೋಸ್ಟರ್ ಗಳಲ್ಲಿ 'ಸೈಡ್ಗ್ ಹೋಗೋ ರಾಕಿಂಗ್..ಅಣ್ಣ ಡ್ಯಾನ್ಸ್ ಲ್ ಕಿಂಗ್' ಅನ್ನೋ ಪಂಚ್ ಡೈಲಾಗ್ ಗಳು ಕಂಡುಬಂದಿತ್ತು. ತದನಂತರ ಮತ್ತೆ 'ರಿವೇಂಜ್ ಇಟ್ಕೊಳೋದೆ...ತಾಕತ್ ಇದೆ ತಡೆಯೋದೆ....ವೇಯ್ಟ್ ರಾಕಿಂಗ್..ಡಾನ್ ಕಮಿಂಗ್...' ಹೀಗೆ ಹಲವಾರು ಸಾಲು-ಸಾಲು ಡೈಲಾಗ್ ಗಳು ಜೆಡಿ ಪೋಸ್ಟರ್ ನಲ್ಲಿವೆ. ಇದನ್ನು ನೋಡುತ್ತಿದ್ದರೆ, ಇದು ಖಂಡಿತ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಟಾಂಗ್ ಕೊಟ್ಟಿರುವಂತಿದೆ.[ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?]

  ಪೋಸ್ಟರ್ ಗಳಲ್ಲಿ ಈ ರೀತಿ ಎಲ್ಲಾ ಬದಲಾವಣೆ ಮಾಡಿರುವುದು ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಗೊತ್ತಿರಲಿಲ್ಲವಂತೆ. ಶುಕ್ರವಾರ ಬೆಳಗ್ಗೆ ಪತ್ರಿಕೆಗಳಲ್ಲಿ ಈ ತರಹದ ತರೇಹವಾರಿ ಸಾಲುಗಳನ್ನು ಕಂಡ ಎಸ್ ನಾರಾಯಣ್ ಅವರು ಗಾಬರಿ ಬಿದ್ದಿದ್ದಾರೆ.

  ತನಗೇ ಗೊತ್ತಿಲ್ಲದಂತೆ ಈ ರೀತಿ ಯಾಕೆ ಜಾಹೀರಾತು ಕೊಟ್ಟಿದ್ದೀರಿ ಎಂದು ನಿರ್ಮಾಪಕರನ್ನು ಕೇಳಿದ್ದಕ್ಕೆ, ಅವರು ಕಾಲು ಕೆರೆದು ಜಗಳಕ್ಕೆ ಬಂದಿದ್ದಾರೆ. ಹೀಗಾಗಿ ಮಾತಿಗೆ ಮಾತು ಬೆಳೆದಿದೆ. ಇದೀಗ ನಿರ್ಮಾಪಕರ ವರ್ತನೆಯಿಂದ ಬೇಸತ್ತಿರುವ ಎಸ್ ನಾರಾಯಣ್ ಅವರು ತಕ್ಷಣ ಚಿತ್ರದಿಂದ ಹೊರ ನಡೆದಿದ್ದಾರೆ.

  ಒಟ್ನಲ್ಲಿ ಪ್ರಾರಂಭದ ಹಂತದಲ್ಲೇ ಇಷ್ಟೆಲ್ಲಾ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಚಿತ್ರತಂಡ ಇನ್ನು ಯಾವ ನಿರ್ದೇಶಕರನ್ನು ಕರೆತರುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

  English summary
  Kannada Director S.Narayan who was all set to direct his 50th film 'JD' has walked out of the film. Even before the launch of the film, S Narayan has quits the film due to difference of opinions with the producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X