For Quick Alerts
  ALLOW NOTIFICATIONS  
  For Daily Alerts

  'ಫಿಲ್ಮ್ ಚೇಂಬರ್‌ನವರು ಡಾ.ರಾಜ್‌ಕುಮಾರ್‌ಗೆ ಚೂರಿ ಹಾಕಿದ್ರು'-ರಾಜೇಂದ್ರ ಸಿಂಗ್ ಬಾಬು

  |

  ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಳೆದೆರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ರಾಜೇಂದ್ರ ಸಿಂಗ್ ಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮಾಡುವುದಾಗಿ ಹೇಳಿ ಸುದ್ದಿಯಲ್ಲಿದ್ದರು. ನೇರ ನುಡಿಗಳಿಗೆ ಹೆಚ್ಚು ಜನಪ್ರಿಯರಾಗಿರುವ ರಾಜೇಂದ್ರ ಸಿಂಗ್ ಬಾಬು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

  ಕರ್ನಾಟಕ ವಾಣಿಜ್ಯ ಮಂಡಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಈ ಕಾರಣಕ್ಕೆ ಫಿಲ್ಮ್ ಚೇಂಬರ್‌ನ ಸದಸ್ಯರು ಕೆಲವು ದಿನಗಳಿಂದ ಹಾಲಿ ಅಧ್ಯಕ್ಷರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಬಳಿಕ ಈಗ ಚುನಾವಣೆ ಘೋಷಣೆಯಾಗಿದ್ದು, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದು ಹಾಗೂ ನಿರ್ಮಾಪಕ ಭಾ ಮಾ ಹರೀಶ್ ನಡುವೆ ಪೈಪೋಟಿ ಶುರುವಾಗಿದೆ.

  'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!

  ಇಬ್ಬರು ಅಭ್ಯರ್ಥಿಗಳ ಪರ ಕನ್ನಡ ಚಿತ್ರರಂಗದ ನಟ-ನಟಿಯರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಅಖಾಡಕ್ಕಿಳಿದಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ಮಾಪಕ ಭಾ ಮಾ ಹರೀಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ವೇಳೆ ಫಿಲ್ಮ್ ಚೇಂಬರ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಫಿಲ್ಮ್ ಚೇಂಬರ್‌ನವರು ಡಾ. ರಾಜ್‌ಕುಮಾರ್ ಅವರಿಗೆ ಚೂರಿ ಹಾಕಿದ್ದರು ಎಂದು ಹೇಳಿದ್ದಾರೆ. ಅದ್ಯಾಕೆ ಹೀಗಂದರು ಅಂತ ತಿಳಿಯುವುದಕ್ಕೆ ಮುಂದೆ ಓದಿ.

  'ಡಾ. ರಾಜ್‌ಕುಮಾರ್‌ಗೆ ಚೂರಿ ಹಾಕಿದ್ರು'

  'ಡಾ. ರಾಜ್‌ಕುಮಾರ್‌ಗೆ ಚೂರಿ ಹಾಕಿದ್ರು'

  ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿಯನ್ನು ತಡೆಯಬೇಕು ಅಂತ ಹಲವು ವರ್ಷಗಳ ಹಿಂದೆ ಹೋರಾಟ ನಡೆದಿತ್ತು. ಆಗ, ಚಿತ್ರರಂಗದವರೆಲ್ಲಾ ಸೇರಿ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳು 7 ವಾರಗಳ ಬಳಿಕ ಬಿಡುಗಡೆಯಾಗಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಹೋರಾಟದ ವೇಳೆ ಡಾ. ರಾಜ್‌ಕುಮಾರ್‌ ಅವರನ್ನೂ ಕರೆತರಲಾಗಿತ್ತು. ಆಗ ವಿಧಾನ ಸೌಧಕ್ಕೂ ಮುತ್ತಿಗೆ ಹಾಕಲಾಗಿತ್ತು. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.

  ಮಗನಿಗಾಗಿ ರಾಜೇಂದ್ರ ಸಿಂಗ್‌ಬಾಬು ಹೊಸ ಚಿತ್ರ: ದರ್ಶನ್ ಸಿನಿಮಾದ ಗತಿ ಏನು?ಮಗನಿಗಾಗಿ ರಾಜೇಂದ್ರ ಸಿಂಗ್‌ಬಾಬು ಹೊಸ ಚಿತ್ರ: ದರ್ಶನ್ ಸಿನಿಮಾದ ಗತಿ ಏನು?

  Recommended Video

  KGF2 ಸಿನಿಮಾದ ದಾಖಲೆಗಳನ್ನೆಲ್ಲ ಹಿಂದಿಕ್ಕಲಿದ್ಯ ದರ್ಶನ್ ಸಿನಿಮಾ | Rajendra Singh Babu
  ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

  ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

  " 7 ವಾರ ಬಿಟ್ಟು ಬೇರೆ ಭಾಷೆಯ ಸಿನಿಮಾ ಬರಬೇಕು ಅಂತ ಹೋರಾಡಿ, ಮಾಡಿ ರಾಜ್‌ಕುಮಾರ್ ಅವರನ್ನು ಕರೆದುಕೊಂಡು ಬಂದು, ವಿಧಾನ ಸಭೆಯನ್ನು ಮುತ್ತಿಗೆ ಹಾಕಿದ್ದೆವು. ಅಲ್ಲಿವರೆಗೂ ಯಾರಿಗೂ ಮುತ್ತಿಗೆ ಹಾಕಲು ಸಾಧ್ಯವಾಗಿರಲಿಲ್ಲ. ಅಂತಹ ವೇಳೆ ಇದೇ ಚೇಂಬರ್‌ನವರು ರಾಜ್‌ಕುಮಾರ್ ಅವರಿಗೇ ಚೂರಿ ಹಾಕಿದ್ರು." ಎಂದು ಹಿರಿಯ ನಿರ್ದೇಶಕ ಹೇಳಿಕೆ ನೀಡಿದ್ದಾರೆ. ಇದು ಚಿತ್ರರಂಗದಲ್ಲಿ ಭಾರೀ ಚರ್ಚೆಯಾಗುತ್ತಿದೆ.

  ರಾಜೇಂದ್ರ ಸಿಂಗ್ ಬಾಬು ಹೀಗಂದಿದ್ಯಾಕೆ?

  ರಾಜೇಂದ್ರ ಸಿಂಗ್ ಬಾಬು ಹೀಗಂದಿದ್ಯಾಕೆ?

  "ಒಂದು ಲೆಟರ್ ಕೊಟ್ಬಿಟ್ಟರು. ಸುಪ್ರೀಂ ಕೋರ್ಟ್‌ನಲ್ಲಿ ಸ್ಟೇ ತರಬೇಕು ಅಂತ. ಈ ತರ ನಮ್ಮ ಚಿತ್ರರಂಗ ಮೇಲೆ ಬರೆಬೇಕು ಅಂದಾಗ, ನಮ್ಮ ಚಿತ್ರರಂಗದಿಂದಲೇ ಹಲವಾರು ತೊಂದರೆಗಳು ಆಗಿವೆ. ಈ ಬಾರಿ ಹೊಸಬರಿಗೊಂದು ಅವಕಾಶ ಕೊಡಿ. ನಿಮಗೆ ಇಷ್ಟ ಆಗಿಲ್ಲವ ನೋ ಕಾನ್ಫಿಡೆನ್ಸ್ ಮೋಷನ್ ತಂದು ಇಳಿಸಿ." ಅಣ್ಣಾವ್ರನ್ನೂ ಕರೆದುಕೊಂಡು ಹೋರಾಟ ಮಾಡಲಾಗಿತ್ತು. ಇನ್ನೇನು ಹೋರಾಟ ಯಶಸ್ವಿ ಆಯ್ತು ಎನ್ನುವಾಗಲೇ ಫಿಲ್ಮ್ ಚೇಂಬರ್‌ನವರು ಕೋರ್ಟ್‌ನಲ್ಲಿ ಸ್ಟೇ ತರುತ್ತೇವೆ ಎಂದು ಲೆಟರ್ ಕೊಟ್ಟಿದ್ದರು ಎಂಬುದು ರಾಜೇಂದ್ರ ಸಿಂಗ್ ಬಾಬು ಹೇಳಿಕೆಯ ಉದ್ದೇಶವಾಗಿದೆ.

  ಫಿಲ್ಮ್ ಚೇಂಬರ್‌ನಲ್ಲಿ ಅಕ್ರಮ

  ಫಿಲ್ಮ್ ಚೇಂಬರ್‌ನಲ್ಲಿ ಅಕ್ರಮ

  "ನಾನು ಒಂದು ಆರು ತಿಂಗಳ ಹಿಂದೆ, ನಾವೊಂದು 25-30 ಜನ ನ್ಯಾಷನಲ್ ಅವಾರ್ಡ್ ಗೆದ್ದಿರುವ ಪ್ರಡ್ಯೂಸರ್‌ಗಳು ಹಾಗೂ ಡೈರೆಕ್ಟರ್‌ಗಳು ಇದೇ ವಾಣಿಜ್ಯ ಮಂಡಳಿಗೆ ಕೇಳಿದ್ವಿ. ಹೀಗೆ ದೂರುಗಳು ಬಂದಿವೆ. ಬಾತ್‌ರೂಮ್‌ಗೆ 26 ಲಕ್ಷ ಆಗಿದೆ. ಕಾಫಿ ಮಿಷನ್‌ಗೆ 26 ಸಾವಿರ ಆಗಿದೆ. ಇನ್ನೆಲ್ಲೋ 40 ಲಕ್ಷ ಖರ್ಚಾಗಿದೆ. ಇದು ನಿರ್ಮಾಪಕರು, ವಿತರಕರು, ಪ್ರದರ್ಶನಕರು, ಈ ಎಲ್ಲಾ ವಲಯಗಳ ದುಡ್ಡದು. ಅದನ್ನು ನೋಡಿಕೊಳ್ಳುವುದಕ್ಕೆ ನಿಮ್ಮನ್ನು ಕೂರಿಸಿರುವುದು. ಅದು ದುರ್ಬಳಕೆ ಆದಾಗ ಫಿಲ್ಮ್ ಚೇಂಬರ್‌ಗೆ ಕೇಳಿದ್ವಿ. ಉತ್ತರ ಕೊಡಲಿಲ್ಲ." ಎಂದು ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಆರೋಪ ಮಾಡಿದ್ದಾರೆ.

  English summary
  Kannada Director S V Rajendra Singh Babu Revealed Film Chamber cheated Dr Rajkumar.
  Thursday, May 26, 2022, 21:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X