twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ಸೂರಿ ಶಿಷ್ಯನ ಚೊಚ್ಚಲ ನಿರ್ದೇಶನದ ಚಿತ್ರದ ಟೈಟಲ್ ಲಾಂಚ್: ಪೈಂಟ್ ಮಾಡಿ ಶೀರ್ಷಿಕೆ ಅನಾವರಣ

    |

    ಸಿನಿಮಾ ಮಾಡಬೇಕು ಅಂತ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಪ್ರತಿಭೆಗಳಿಗೇನು ಕಮ್ಮಿ? ಪ್ರತಿದಿನ ಒಬ್ಬರಲ್ಲ ಒಬ್ಬರು ಸಿನಿಮಾ ಕನಸು ಹೊತ್ತು ಬರುತ್ತಾರೆ. ಆದರೆ, ಅವರೆಲ್ಲರೂ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಅನ್ನುವುದಕ್ಕೆ ಆಗುವುದಿಲ್ಲ. ಆದರೆ, 9 ವರ್ಷ ಸುಕ್ಕಾ ಸೂರಿ ಅಂತಲೇ ಹೆಸರಾಗಿರುವ ದುನಿಯಾ ಸೂರಿ ಜೊತೆ ಸಹಾಯಕನಾಗಿ ಕೆಲಸ ಮಾಡುವ ಹುಡುಗ ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ಆತ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ಸ್ವತ: ದುನಿಯಾ ಸೂರಿ ವಿಭಿನ್ನವಾಗಿ ಅನಾವರಣಗೊಳಿಸಿದ್ದಾರೆ.

    ದುನಿಯಾ ಸೂರಿ ನಿರ್ದೇಶಿಸಿದ 'ಕಡ್ಡಿಪುಡಿ' ಸಿನಿಮಾದಿಂದ ಯುವ ನಿರ್ದೇಶಕ ಅಭಿ ಸಹಾಯಕನಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ 'ಸಲಗ' ಸಿನಿಮಾಗೂ ದುನಿಯಾ ವಿಜಯ್‌ಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದಾರೆ. ಈಗ ಸ್ವತಂತ್ರ ನಿರ್ದೇಶಕನಾಗಿದ್ದು, ಚೊಚ್ಚಲ ಚಿತ್ರ 'ಸೋಮು ಸೌಂಡ್ ಇಂಜಿನಿಯರ್' ಟೈಟಲ್ ಗುರುವೇ ಲಾಂಚ್ ಮಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ನಿರ್ದೇಶಕ ಸಿನಿಮಾ ಹಾಗೂ ಸೂರಿ ಜೊತೆಗಿನ ಒಡನಾಟದ ಬಗ್ಗೆ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

    ದುನಿಯಾ ಸೂರಿ ಜೊತೆ ಒಡನಾಟ ಬೆಳೆದಿದ್ದು ಹೇಗೆ?

    ದುನಿಯಾ ಸೂರಿ ಜೊತೆ ಒಡನಾಟ ಬೆಳೆದಿದ್ದು ಹೇಗೆ?

    "ನಾನು ಸೂರಿ ಸರ್ ಜೊತೆ 9 ವರ್ಷ ಕೆಲಸ ಮಾಡಿದ್ದೇನೆ. 2011 ರಿಂದ 2019ರವರೆಗೂ ಮಾಡಿದ್ದೇನೆ. ನಾನು ಸಿನಿಮಾ ಇಂಡಸ್ಟ್ರಿಗೆ ಬಂದಲ್ಲಿಂದ ಬೇರೆಯವರೊಂದಿಗೆ ಸಿನಿಮಾವನ್ನೇ ಮಾಡಿಲ್ಲ. ಕಡ್ಡಿಪುಡಿಯಿಂದ ಸಿನಿಮಾ ಜರ್ನಿ ಆರಂಭ ಮಾಡಿದ್ದು, ಟಗರು ಸಿನಿಮಾವರೆಗೂ ಅವರೊಂದಿಗೆ ಕೆಲಸ ಮಾಡಿದ್ದೇನೆ. ಸೋಮು ಸೌಂಡ್ ಇಂಜಿನಿಯರ್ ನನ್ನ ಮೊದಲ ನಿರ್ದೇಶನದ ಸಿನಿಮಾ." ಅಂತಾರೆ 'ಸೋಮು ಸೌಂಡ್ ಇಂಜಿನಿಯರ್' ನಿರ್ದೇಶಕ ಅಭಿ.

    ಸೋಮು ಟೈಟಲ್ ವಿಶೇಷತೆಯೇನು?

    ಸೋಮು ಟೈಟಲ್ ವಿಶೇಷತೆಯೇನು?

    "ಟಗರು ಶೂಟಿಂಗ್ ಮುಗಿದ ಕೂಡಲೇ ಈ ಸ್ಕ್ರಿಪ್ಟ್ ಶುರು ಮಾಡಿದ್ದೆ. ಕಮರ್ಷಿಯಲ್, ಫ್ಯಾಮಿಲಿ ಡ್ರಾಮ. ಟೈಟಲ್ ಸೋಮು ಸೌಂಡ್ ಇಂಜಿನಿಯ್ ಟೈಟಲ್ ಇಟ್ಟಿದು ಏಕೆ ಅಂದರೆ, ಆ ಕಥೆಯಲ್ಲೇ ರಿವೀಲ್ ಆಗುತ್ತೆ. ಸೋಮು ಅನ್ನುವ ಕ್ಯಾರೆಕ್ಟರ್ ಮತ್ತು ಸೌಂಡ್ ಇಂಜಿನಿಯರ್ ಇವೆರಡೂ ಕಥೆಯಲ್ಲಿಯೇ ರಿವೀಲ್ ಆಗುತ್ತೆ. ಇದು ಒಂದೂವರೆ ವರ್ಷದ ಹಿಂದೆನೇ ಸ್ಕ್ರಿಪ್ಟ್ ರೆಡಿಯಾಗಿತ್ತು. ನಾನು ಸಲಗಗೂ ಮುಂಚೆಯೇ ಈ ಸಿನಿಮಾ ಮಾಡಬೇಕಿತ್ತು. ಟಗರು ಸಿನಿಮಾಗೆ ನಿರ್ಮಾಪಕ ಶ್ರೀಕಾಂತ್ ಸರ್ ಮಾಡಿದಾಗ ಆತ್ಮೀಯರಾಗಿದ್ದರು. ವಿಜಯ್ ಸರ್ ಮೊದಲ ನಿರ್ದೇಶನದ ಸಿನಿಮಾ ಟೇಕ್ ಆಫ್ ಮಾಡುವುದಕ್ಕೆ ಜೊತೆಗಿರು ಎಂದಿದ್ದರು. ಆ ಕಾರಣಕ್ಕೆ ಈ ಸಿನಿಮಾ ಸ್ವಲ್ಪ ಡಿಲೇ ಆಗಿತ್ತು ಅಷ್ಟೇ." ಅಂತಾರೆ ನಿರ್ದೇಶಕ ಅಭಿ.

    ಉತ್ತರ ಕರ್ನಾಟಕದ ಕಮರ್ಷಿಯಲ್ ಸಿನಿಮಾನಾ?

    ಉತ್ತರ ಕರ್ನಾಟಕದ ಕಮರ್ಷಿಯಲ್ ಸಿನಿಮಾನಾ?

    " ಪಕ್ಕಾ ಉತ್ತರ ಕರ್ನಾಟಕದ ಸಿನಿಮಾ. ಪಕ್ಕಾ ಕಮರ್ಷಿಯಲ್ ಸಿನಿಮಾ. ಸೋಮು ಸೌಂಡ್ ಇಂಜಿನಿಯರ್ ಕೂಡಲ ಸಂಗಮ ಮತ್ತು ಗಂಜಾಳದಲ್ಲಿ ಶೂಟಿಂಗ್ ನಡೆಯುತ್ತೆ. ಇದೊಂದು ಫ್ಯಾಮಿಲಿ ಡ್ರಾಮಾ ಕಮ್ ಕಮರ್ಷಿಯಲ್ ಸಿನಿಮಾ. ಪಾತ್ರವನ್ನು ರಗಡ್ ಆಗಿ ತೆಗೆದುಕೊಂಡು ಹೋಗಿದ್ದೇವೆ. ಟ್ರೀಟ್ಮೆಂಟ್ ಟಗರು, ಸಲಗದ ಹಾಗೇ ಇರುತ್ತೆ. ಆದರೆ, ನನ್ನ ಜೀವನದ ಅನುಭವವನ್ನು ಮಿಕ್ಸ್ ಮಾಡಿರುತ್ತೇನೆ." ಅಂತಿದ್ದಾರೆ ಅಭಿ.

    ಸೋಮು ರಗಡ್ ಸಿನಿಮಾ?

    ಸೋಮು ರಗಡ್ ಸಿನಿಮಾ?

    "ಸೂರಿ ಸರ್ ಬೆಂಗಳೂರಿನಲ್ಲಿಯೇ ಬೆಳೆದಿದ್ದಾರೆ. ಹೀಗಾಗಿ ಇಲ್ಲಿನ ಕ್ರೈಂ ಹೇಗಿರುತ್ತೋ ಹಾಗೇ ಅವರ ಜಾನರ್ ಅನ್ನು ಟಚ್ ಮಾಡುತ್ತಾರೆ. ಉತ್ತರ ಕರ್ನಾಟಕ ಅಂದಾಗ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಇರುತ್ತೆ. ಜಾಗ ಬೇರೆಯಾಗಿರಬಹುದು ಮನಸ್ಥಿತಿ ಒಂದೇ ಇರುತ್ತೆ. ಹೀಗಾಗಿ ಟಗರು, ಸಲಗದ ಟಚ್ ಇರುತ್ತೆ. ಉತ್ತರ ಕರ್ನಾಟಕದ ಮೊದಲ ಕಮರ್ಷಿಯಲ್ ಸಿನಿಮಾ ಅಂತ ಹೇಳಬಹುದು."

    ಸೋಮು ಪಾತ್ರ ಯಾರು ಮಾಡುತ್ತಿದ್ದಾರೆ

    ಸೋಮು ಪಾತ್ರ ಯಾರು ಮಾಡುತ್ತಿದ್ದಾರೆ

    "ಸಲಗದಲ್ಲಿ ಕೆಂಡನ ಪಾತ್ರ ಮಾಡಿದ್ದಾರಲ್ಲಾ ಅವರೇ ಸೋಮು ಪಾತ್ರ ಮಾಡುತ್ತಿದ್ದಾರೆ. ಇನ್ನೊಂದು ಪಾತ್ರವನ್ನು ಜಹಾಂಗೀರ್ ಮಾಡಿದ್ದಾರೆ. ಫೆಬ್ರವರಿಯಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ." ಅಂತ ಸೋಮು ಸೌಂಡ್ ಇಂಜಿನಿಯರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರ ಅಭಿ.

    English summary
    Kannada Director Suri Associate Abhi directing debut movie Somu Sound engineer. From 2011 to 2019 Abhi with Duniya Suri as associate director. He assisted Duniya Vijay for Salaga Movie.
    Thursday, January 27, 2022, 21:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X