»   » 'ಭಟ್ರ' ಪ್ರಕಾರ ಅಭಿಮಾನಿಗಳಿಗೆ ಈ ವರ್ಷ ಯೋಗಾಯೋಗ..!

'ಭಟ್ರ' ಪ್ರಕಾರ ಅಭಿಮಾನಿಗಳಿಗೆ ಈ ವರ್ಷ ಯೋಗಾಯೋಗ..!

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಈಗೇನ್ ಮಾಡ್ತಿದ್ದಾರೆ..? ಆಗೊಮ್ಮೆ ಈಗೊಮ್ಮೆ ಚಿತ್ರಗಳಿಗೆ ಹಾಡು ಬರೆಯೋದು ಬಿಟ್ರೆ, ನಿರ್ದೇಶನವನ್ನ ಭಟ್ರು ಮರೆತುಬಿಟ್ರಾ ಅಂತ ಕನ್ನಡ ಸಿನಿ ಪ್ರಿಯರಿಗೆ ಡೌಟ್ ಬರೋದು ಸಹಜ. ಯಾಕಂದ್ರೆ, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ತೆರೆಗೆ ಬಂದು ಬರೋಬ್ಬರಿ 3 ವರ್ಷಗಳಾಗಿವೆ.

2012 ರಲ್ಲಿ 'ಡ್ರಾಮಾ' ತೆರೆಕಂಡ ಬಳಿಕ ವಾಸ್ತು ಹಿಂದೆ ಬಿದ್ದ ಭಟ್ರು, ಇನ್ನು ಕೆಲವೇ ದಿನಗಳಲ್ಲಿ 'ವಾಸ್ತು ಪ್ರಕಾರ' ರಿಲೀಸ್ ಮಾಡ್ತಿದ್ದಾರೆ. ಅಲ್ಲಿಗೆ, ಭಟ್ರ ಮುಂದಿನ ಸಿನಿಮಾ ಯಾವುದು?


ಈ ಪ್ರಶ್ನೆಗೆ ಗಾಂಧಿನಗರದಲ್ಲಿ ಉತ್ತರ ಸಿಕ್ಕಿದೆ. 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಈ ಹಿಂದೆ ಓದಿದ ಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸದ್ಯದಲ್ಲೇ ಮುಹೂರ್ತ ನೆರವೇರಲಿದೆ. [ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]


yograj bhat

ಇದಾದ ಬಳಿಕ ಹೊಸಬರ ಗ್ಯಾಂಗ್ ಜೊತೆ ಎರಡು ಚೆಂದದ ಸಿನಿಮಾ ಮಾಡುವುದಕ್ಕೆ ಭಟ್ರು ನಿರ್ಧರಿಸಿದ್ದಾರೆ. ಅದಕ್ಕೆ ಅದಾಗಲೇ ಸ್ಕ್ರಿಪ್ಟ್ ಕೂಡ ರೆಡಿಮಾಡಿಕೊಂಡಿದ್ದಾರೆ.


ಇದೇ ಗ್ಯಾಪ್ ನಲ್ಲಿ ಹಿಂದಿ ಚಿತ್ರಕ್ಕೂ ಕುಂಬಳಕಾಯಿ ಹೊಡೆಯಬೇಕು. ಸಿಂಪಲ್ ಆಗಿ ಹೇಳಬೇಕು ಅಂದ್ರೆ, ಯೋಗರಾಜ್ ಭಟ್ರು ಈ ವರ್ಷ ಬಿಡುವಿಲ್ಲದಷ್ಟು ಬಿಸಿ. [ಭಟ್ಟರ ಟೀಂಗೆ 'ವಾಸ್ತುಪ್ರಕಾರ' ಅಡಿಯಿಟ್ಟ ಹುಚ್ಚು ವೆಂಕಟ]


ಮೂರು ವರ್ಷ ಪ್ರೇಕ್ಷಕರನ್ನ ಖಾಲಿ ಕೂರಿಸಿದ ಪರಿಣಾಮ ಈ ವರ್ಷ ಎರಡ್ಮೂರು ಚಿತ್ರಗಳನ್ನ ಬ್ಯಾಕ್ ಟು ಬ್ಯಾಕ್ ನೀಡುವ ತವಕದಲ್ಲಿದ್ದಾರೆ. ಭಟ್ರ ಅಭಿಮಾನಿಗಳಿಗೆ ಇದಕ್ಕಿಂತ ಯೋಗಾಯೋಗ ಬೇಕಾ? (ಏಜೆನ್ಸೀಸ್)

English summary
Kannada Director Yogaraj Bhat is gearing up for his directorial 'Vaastu Prakara' release by the end of this month (March). Meanwhile, the Director is busy with Four Movies in hand, including one Bollywood flick.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada