For Quick Alerts
  ALLOW NOTIFICATIONS  
  For Daily Alerts

  ವೀಣಾ ಮಲಿಕ್ ನಂಬಿ ಹಣ ಕಳೆದುಕೊಂಡ ನಿರ್ಮಾಪಕ

  By Rajendra
  |

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಚಿತ್ರದ ಫೋಟೋ ಶೂಟ್‌ಗೆ ಮೇ18ರಂದೇ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಬರಬೇಕಾಗಿತ್ತು. ಆದರೆ ಆಕೆಯ ವೀಸಾ ಅವಧಿ ಮುಗಿದ ಆಕೆ ಬೆಂಗಳೂರಿಗೆ ಬರುವುದು ಕೊಂಚ ತಡಲಾಗುತ್ತಿದೆ.

  ಆಕೆ ಬರುವುದು ತಡವಾದ ಕಾರಣ ಚಿತ್ರದ ನಿರ್ಮಾಪಕ ವೆಂಕಟಪ್ಪ ಅವರ ಜೇಬಿಗೆ ಕತ್ತರಿಬಿದ್ದಿದೆ. ವೀಣಾ ಮಲಿಕ್ ಫೋಟೋ ಶೋಟ್‌ಗಾಗಿ ಅವರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ ಆಕೆ ಸಕಾಲಕ್ಕೆ ಬರದ ಕಾರಣ ರು.6.5 ಲಕ್ಷ ಹಣ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಗಿದೆ.

  ವೀಣಾ ಮಲಿಕ್ ಫೋಟೋ ಶೂಟ್‌ಗಾಗಿ ಚಿತ್ರದ ನಿರ್ಮಾಪಕರು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಿದ್ದರು. ಆಕೆ ಹಾಗೂ ಆಕೆಯ ಸಹಾಯಕರಿಗೆಂದೇ ಪಂಚತಾರಾ ಹೋಟೆಲ್ ಕೂಡ ಬುಕ್ ಮಾಡಿದ್ದರು. ಆದರೆ ಮೇ 18ರಂದು ಆಕೆ ಬರಲಿಲ್ಲ.

  ಈಗ ವೀಣಾ ತಮ್ಮ ವೀಸಾವನ್ನು ನವೀಕರಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಅದೆಲ್ಲವನ್ನೂ ಮುಗಿಸಿಕೊಂಡು ಆಕೆ ಬೆಂಗಳೂರಿಗೆ ಅಡಿಯಿಡಬೇಕಾದರೆ ಮೇ 24 ಅಥವಾ 25ರ ತನಕ ಕಾಯಬೇಕು. ತನ್ನಿಂದಾದ ನಷ್ಟವನ್ನು ತುಂಬಿಕೊಡುತ್ತೇನೆ ಎಂದು ವೀಣಾ ನಿರ್ಮಾಪಕರಿಗೆ ಭರವಸೆ ನೀಡಿದ್ದಾರಂತೆ. ಹಾಗಾಗಿ ನಿರ್ಮಾಪಕರು ಈ ಬಗ್ಗೆ ಹೆಚ್ಚಾಗಿ ತಲೆಬಿಸಿ ಮಾಡಿಕೊಂಡಿಲ್ಲ. (ಏಜೆನ್ಸೀಸ್)

  English summary
  Kannada Dirty Picture: Silk Sakkath Maga filmmaker Venkatappa loses Rs.6.5 lakhs approximately. Because Veena Malik, who was expected to join the photo shoot of her debut Kannada film on 18th May. And this delay has cost the Kannada filmmaker Rs. 6.5 lakhs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X