For Quick Alerts
  ALLOW NOTIFICATIONS  
  For Daily Alerts

  ಗಿರೀಶ್ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ಚಿತ್ರರಂಗ

  |

  ಚಲನ ಚಿತ್ರರಂಗಕ್ಕೆ ಗಿರೀಶ್ ಕಾರ್ನಾಡ್ ಅವರ ಕೊಡಿಗೆ ಅಪಾರ. ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗ ಸೇರಿದಂತೆ ಅನಕ ಭಾಷೆಯಲ್ಲಿ ಅಭಿನಯಿಸಿದ್ದಾರೆ. 70ರ ದಶಕದಲ್ಲಿ ಕಾರ್ನಾಡ್ ಅಭಿನಯಿಸಿದ್ದ 'ಸಂಸ್ಕಾರ' ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗಳಿಸಿತ್ತು. ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಕಾರ್ನಾಡ್ ನಿರ್ದೇಶನದ ಮೊದಲ ಸಿನಿಮಾ 'ಒಂದಾನೊಂದು ಕಾಲದಲ್ಲಿ' ಆ ನಂತರ 'ಕಾಡು', 'ಕಾನೂರು ಹೆಗ್ಗಡತಿ', ಹಿಂದಿಯಲ್ಲಿ 'ಉತ್ಸವ್', 'ಚೆಲ್ವಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

  ಗಿರೀಶ್ ಕಾರ್ನಾಡ್ ಅವರು ಪೂನಾ ಫಿಲ್ಮ್ ಇಸ್ಟಿಟ್ಯೂಟ್ ನ ನಿರ್ದೇಶಕರಾಗಿದ್ದಾ ಸಂದರ್ಭದಲ್ಲಿ ಮಹಾನ್ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಪ್ರಖ್ಯಾತ ನಟರಾದ ನಾಸಿರುದ್ದೀನ್ ಷಾ, ಓಂ ಪುರಿ, ಗಿರೀಶ್ ಕಾಸರವಳ್ಳಿ ಮುಂತಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕೇವಲ ಅಂದ ಚಂದ ನೋಡಿ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಆ ಕಾಲದಲ್ಲಿ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ದು ಕಾರ್ನಾಡ್.

  ಕನ್ನಡದಲ್ಲಿ ಖ್ಯಾತ ನಟರಾದ ಶಂಕರ್ ನಾಗ್, ವಿಷ್ಣುವರ್ಧನ್ ಅವರಂತಹ ಅನನ್ಯ ಪ್ರತಿಭೆಗಳನ್ನು ಹುಡುಕಿಕೊಟ್ಟರು ಕಾರ್ನಾಡ್. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ, ಸದಭಿರುಚಿಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇಂತಹ ಖ್ಯಾತ ನಟ, ನಿರ್ದೇಶಕನ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮುಂದೆ ಓದಿ..

  ಕಾರ್ನಾಡ್ ನನಗೆ ಗುರು ಆಗಿದ್ದರು

  ಕಾರ್ನಾಡ್ ನನಗೆ ಗುರು ಆಗಿದ್ದರು

  ಕಾರ್ನಾಡ್ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ', 'ಗೋದೋಳಿ' ಚಿತ್ರದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅದ್ಭುತ ಗುರು ಆಗಿದ್ದರು. ಎಡಿಟಿಂಗ್ ಬಗ್ಗೆ ಮೊದಲು ಕಲಿಸಿದ್ದು ಅವರು. ವ್ಯಕ್ತಿಯಲ್ಲಿರುವ ಕಲಿಕೆಯ ಗುಣಗಳನ್ನು ಅರ್ಥಮಾಡಿಕೊಂಡು. ಅದನ್ನು ಅವರಿಗೆ ಒದಗಿಸಿ ಕೊಡುವ ವ್ಯಕ್ತಿತ್ವ ಅವರದ್ದು. 'ಅನ್ವೇಷಣೆ', 'ನೆನಪಿನ ದೋಣಿ', 'ಮೈಸೂರು ಮಲ್ಲಿಗೆ' ಚಿತ್ರಗಳಲ್ಲಿ ಅವರಿಗೆ ನಿರ್ದೇಶನ ಮಾಡುವ ಭಾಗ್ಯ ಸಿಕ್ಕಿದೆ, ಅವರೆ ಕಲಿಸಿದ ಪಾಠವನ್ನು ಅವರ ಮೇಲೆ ಪ್ರಯೋಗಮಾಡಿದ್ದೇನೆ. ಎಂದು ಹಿರಿಯ ನಿರ್ದೇಶಕ ನಾಗಾಭರಣ ಹೇಳಿದ್ದಾರೆ.

  ಸುದ್ದಿ ಕೇಳಿ ಬೇಸರವಾಗಿದೆ

  ಸುದ್ದಿ ಕೇಳಿ ಬೇಸರವಾಗಿದೆ

  "ನಿಧನದ ಸುದ್ದಿ ಕೇಳಿ ಬೇಸರವಾಯ್ತು, ಆರೋಗ್ಯ ಸರಿ ಇಲ್ಲ ಎನ್ನುವುದು ಗೊತ್ತಿತ್ತು. ಹಾಗಾಗಿ ಇಂತಹ ಒಂದು ದಿನ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದೆ. ಶಂಕರ್ ಅವರನ್ನು ಸಿನಿಮಾಗೆ ಕರೆದುಕೊಂಡು ಬಂದಿದ್ದೆ ಅವರು. ಅವರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ನನಗೆ ಅವರ ಜೊತೆ ಬೇರೆ ಬೇರೆ ರೂಪದಲ್ಲಿ ಒಡನೇಟ ಇತ್ತು. ಕಳೆದ ವರ್ಷ ಫೋನ್ ಮಾಡಿ ಹೇಳಿದ್ರು. ರಕ್ಕಸತಂಗಡಿ ನಾಟಕ ಬರೆದಿದ್ದೇನೆ ಎಂದು ಹೇಳಿ, ಓದಿ ಹೇಳು ಅಂತ ಹೇಳಿದ್ರು. ಈ ಸುದ್ದಿ ಬರುತ್ತೆ ಎಂದು ಆತಂಕದಲ್ಲಿ ಇದ್ದೆ. ಅನಾರೋಗ್ಯದಲ್ಲಿಯೂ ಸುಂದರವಾದ ನಾಟಕ ಬರೆದಿದ್ದಾರೆ. ಮಾಹಾನ್ ನಾಟಕಗಾರ, ಅವರ ಕೃತಿಗಳು ನಮ್ಮ ಜೊತೆ ಇರುತ್ತವೆ"

  ಭಾರತೀಯ ಚಿತ್ರರಂಗದ ಅದ್ಭುತ ನಟ

  ಭಾರತೀಯ ಚಿತ್ರರಂಗದ ಅದ್ಭುತ ನಟ

  ಅನೇಕ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಸುದ್ದಿ ಕೇಳಿ ಬೇಸರ ಆಗಿದೆ. 'ಎಕೆ 47' ಸಿನಿಮಾ 'ಜನ್ಮದಾತ' ಸಿನಿಮಾಗಳಲ್ಲಿ ಅಭಿನಸಿದ್ದೇನೆ. ಅವರ ಜೊತೆ ಅಭಿನಯಿಸಿದ್ದು ನಾನು ಲಕ್ಕಿ. ತುಂಬಾ ಭಾವನಾತ್ಮಕ ದೃಶ್ಯಗಳಿತ್ತು. ಸಿನಿಮಾದಲ್ಲಿ ಸಹಜ ಅಭಿನಯ ಇರುತ್ತಿತ್ತು. ಜಾಸ್ತಿ ಓವರ್ ಆಕ್ಟ್ ಮಾಡುತ್ತಿರಲಿಲ್ಲ. ಭಾರತೀಯ ಚಿತ್ರರಂಗದ ಅದ್ಭತ ನಟ ಕಾರ್ನಾಡ್. ತುಂಬಾ ಆಕ್ಟೀವ್ ಆಗಿರುತ್ತಿದ್ದರು. ಭಾಷೆಯ ಬಗ್ಗೆ ಸ್ಪಷ್ಟತೆ ಇತ್ತು. ಯಾವಾಗ್ಲು ಅಪ್ಪಾಜಿ ಬಗ್ಗೆ ಕೇಳುತ್ತಿದ್ದರು. ಅವರು ಇಲ್ಲ ಎನ್ನುವುದು ನೋವು.

  ಇವರ ಪಾತ್ರ ನೋಡಿ ಮಾವನನ್ನು ಮಾತನಾಡಿಸಿರಲಿಲ್ಲ

  ಇವರ ಪಾತ್ರ ನೋಡಿ ಮಾವನನ್ನು ಮಾತನಾಡಿಸಿರಲಿಲ್ಲ

  "1985 ಸುಪ್ರಿಂಕೊರ್ಟ್ ಪರಿಮಳ ನಾನು ಪತಿಪತ್ನಿಯಾಗಿ ಸ್ವತಂತ್ರವಾಗಿ ಬಾಳ ಬಹುದು ಎಂದು ತೀರ್ಪು ನೀಡಿ ಕಳಿಸಿದಾಗ, ತುರುವೇಕೆರೆ ಕೃಷ್ಣ ಚಿತ್ರಮಂದಿರದಲ್ಲಿ ನೀ ಬರೆದ ಕಾದಂಬರಿ ಚಿತ್ರದಲ್ಲಿ ಇವರ ಪಾತ್ರ ನನ್ನ ಮಾವನ ಗುಣದಂತೆ ಕಂಡು, ಗಾಬರಿಯಾಗಿ ಎಲ್ಲಿ ನನ್ನ ಪರಿಮಳನ ದೂರ ಮಾಡುತ್ತಾರೆ ಎಂದು ಹೆದರಿ, 14ವರ್ಷ ಮಾವನ ಮಾತಾಡಿಸಲಿಲ್ಲಾ

  ಓಂಶಾಂತಿ"

  ಅವರ ಜೊತೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ

  ಅವರ ಜೊತೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ

  "ಪದ್ಮ ಶ್ರೀ, ಪದ್ಮಭೂಷಣ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಮನ್ನು ಅಗಲಿದ್ದಾರೆ, ಸಾಹಿತ್ಯ ಲೋಕಕ್ಕೆ ಹಾಗು ರಂಗಭೂಮಿಗೆ ಅವರು ನೀಡಿದ ಕೊಡುಗೆ ಅಪಾರ, ಅವರ ಜೊತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಭಾಗ್ಯ ನನ್ನದು" ಎಂದು ಪುನೀತ್ ಹೇಳಿದ್ದಾರೆ. ರಣವಿಕ್ರಮ ಮತ್ತು ಯಾರೆ ಕೂಗಾಡಲಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಗಿರೀಶ್ ಕಾರ್ನಾಡ್ ಜೊತೆ ಅಭಿನಯಿಸಿದ್ದಾರೆ.

  ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ

  ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ

  "ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ"

  English summary
  Kannada film actors condolence for Actor and Director Girish Karnad. He passed away in today morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X