For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಬುಲ್ ಬುಲ್' ಚಿತ್ರದ ಪ್ರೀವ್ಯೂ

  By Rajendra
  |

  ತೆಲುಗಿನ 'ಡಾರ್ಲಿಂಗ್' ಚಿತ್ರ ಆವರೇಜ್ ಹಿಟ್ ಸಿನಿಮಾ ಅನ್ನಿಸಿಕೊಂಡಿತ್ತು. ಈಗ ಅದೇ ಚಿತ್ರ ಕನ್ನಡ ಪ್ರೇಕ್ಷಕರ ಮುಂದೆ ಬುಲ್ ಬುಲ್ ಆಗಿ ಬರುತ್ತಿದೆ. ಅಲ್ಲಿ ಸುಮಾರಾಗಿ ಗೆದ್ದ ಚಿತ್ರ ಇಲ್ಲಿ ಏನಾಗುತ್ತದೆ ಎಂಬುದಕ್ಕೆ ಉತ್ತರ ಮೇ.10ರಂದು ಸಿಗಲಿದೆ.

  ಅಲ್ಲಿ ಪರ್ವಾಗಿಲ್ಲ ಅನ್ನಿಸಿಕೊಂಡ ಚಿತ್ರಕ್ಕೆ ಇಲ್ಲಿ ಅದ್ಭುತ ಪ್ರತಿಕ್ರಿಯೆ ಸಿಗಬಾರದು ಅಂತೇನು ಇಲ್ಲವಲ್ಲ. ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾರು? ಇನ್ನು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್ ಇದ್ದಾರೆ ಎಂದ ಮೇಲೆ ಪ್ರೇಕ್ಷಕರಿಗೆ ಇನ್ನೇನು ಬೇಕು. ರೀಮೇಕ್ ಆದರೇನು ಸ್ವಮೇಕ್ ಆದರೇನು?

  ಇದೊಂದು ತ್ರಿಕೋನ ಪ್ರೇಮಕಥೆ. ಬಾಲ್ಯದಲ್ಲೇ ದೂರವಾದ ಗೆಳತಿ ಹಲವಾರು ವರ್ಷಗಳ ಬಳಿಕ ಮತ್ತೆ ಒಂದಾಗಲು ಬಯಸುತ್ತಾರೆ. ಆದರೆ ತನ್ನ ಗೆಳೆಯನಿಗೆ ಮತ್ತೊಬ್ಬ ಹುಡುಗಿ ಗಂಟುಬಿದ್ದಿರುತ್ತಾಳೆ. ಈ ತ್ರಿಕೋನ ಪ್ರೇಮಕಥೆಯಲ್ಲಿ ಏನಾಗುತ್ತದೆ ಎಂಬ ಕುತೂಹಲ ಅಂಶಗಳೊಂದಿಗೆ ಕಥೆ ಸಾಗುತ್ತದೆ.

  ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳಿರುವ ಚಿತ್ರ

  ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳಿರುವ ಚಿತ್ರ

  ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಡುಗಡೆಯಾಗುತ್ತಿರುವ ಅಂಬರೀಶ್ ಅಭಿನಯದ ಮೊದಲ ಚಿತ್ರ ಇದಾಗಿರುವುದು ಇನ್ನೊಂದು ವಿಶೇಷ. ಫ್ರೆಂಡ್ಸ್, ಪೊರ್ಕಿ, ಚೆಲ್ಲಾಟ, ಕೃಷ್ಣ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ.

  ವಿ ಹರಿಕೃಷ್ಣ ಸಂಗೀತ, ಕವಿರಾಜ್ ಸಾಹಿತ್ಯ

  ವಿ ಹರಿಕೃಷ್ಣ ಸಂಗೀತ, ಕವಿರಾಜ್ ಸಾಹಿತ್ಯ

  ಇತ್ತೀಚಿನ ದಿನಗಳಲ್ಲಿ ಹಿಟ್ ಕೃಷ್ಣ ಎಂದೇ ಖ್ಯಾತರಾಗಿರುವ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಎವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ಕವಿರಾಜ್ ಅವರ ಸಾಹಿತ್ಯ ಮತ್ತು ಸಂಭಾಷಣೆ ಇದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರ ಸೇರಿದಂತೆ ಪ್ರಸನ್ನ, ನವರಂಗ್, ಉಮಾ, ಮೋಹನ್, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

  ಮಲ್ಟಿಫ್ಲೆಕ್ಸ್ ಗಳಲ್ಲೂ ಬುಲ್ ಬುಲ್

  ಮಲ್ಟಿಫ್ಲೆಕ್ಸ್ ಗಳಲ್ಲೂ ಬುಲ್ ಬುಲ್

  ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಸಿನೆಪೊಲೀಸ್, ಫೇಮ್, ಸಿನೆಮ್ಯಾಕ್ಸ್, ಫನ್, ಗೋಪಾಲನ್, ರಾಕ್ ಲೈನ್, ಪಿವಿಆರ್, ಐನಾಕ್ಸ್ ಚಿತ್ರಮಂದಿರಗಳು 'ಬುಲ್ ಬುಲ್' ಆಟಕ್ಕೆ ರೆಡಿಯಾಗಿವೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ವಿಶೇಷಣಕ್ಕೆ ಬುಲ್ ಬುಲ್ ಚಿತ್ರ ಪಾತ್ರವಾಗುತ್ತಿದೆ.

  ರಚಿತಾ ರಾಮ್ ಚಿತ್ರದ ನಾಯಕಿ

  ರಚಿತಾ ರಾಮ್ ಚಿತ್ರದ ನಾಯಕಿ

  ಕಿರುತೆರೆಯಲ್ಲಿ ಹೆಸರು ಮಾಡಿದ್ದ ರಚಿತಾ ರಾಮ್ ಚಿತ್ರದ ನಾಯಕಿ. ದರ್ಶನ್ ಅವರ ಹೋಂ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಿರ್ಮಾಣದ ಚಿತ್ರ ಇದಾಗಿದೆ. ವಿ ಹರಿಕೃಷ್ಣ, ಗೀತಸಾಹಿತಿ ಕವಿರಾಜ್ ಹಾಗೂ ಕೆಲವು ತಂತ್ರಜ್ಞರು ಚಿತ್ರದ ನಿರ್ಮಾಣದ ಪಾಲುದಾರರು. ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರೀಮೇಕ್.

  ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ

  ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ

  ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ಮಾಪಕರು.

  English summary
  Kannada film Bulbul preview. Challenging Star Darshan lead film releasing on 10th May. It is remake of Telugu hit film Darling. In Bangalore Nartaki is main theatre and also released in PVR, INOX, Cinepolis and other multiplex theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X