For Quick Alerts
  ALLOW NOTIFICATIONS  
  For Daily Alerts

  'ಬರ್ಫಿ' ತಿನ್ನಿಸಲು ಬರುತ್ತಿದ್ದಾರೆ ಧೂದ್ ಪೇಡ ದಿಗಂತ್

  By Rajendra
  |

  ಸುದೀರ್ಘ ಸಮಯದ ಬಳಿಕ ಧೂದ್ ಪೇಡ ದಿಗಂತ್ ಪ್ರೇಕ್ಷಕರಿಗೆ 'ಬರ್ಫಿ' ತಿನ್ನಿಸಲು ಬರುತ್ತಿದ್ದಾರೆ. ಈ ಶುಕ್ರವಾರ (ಆ.30) ಬರ್ಫಿ ಚಿತ್ರ ಸುಮಾರು 100 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಪರಭಾಷಾ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುತ್ತಿರುವ ಬೆಂಗಳೂರಿನ ಊರ್ವಶಿಯಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ.

  ಚತುರ್ಥಿ ಕ್ರಿಯೇಷನ್ಸ್ ಲಾಂಛನದಲ್ಲಿ ಕೆ.ಎಂ.ಶಂಕರ್ ನಿರ್ಮಿಸಿರುವ ಚಿತ್ರ ಇದಾಗಿದೆ. ಪಂಜಾಬಿ ಹುಡುಗಿ ಕನ್ನಡದ ಹುಡುಗನ ಸುಂದರ ಪ್ರೇಮ ಕಥೆಯುಳ್ಳ ಚಿತ್ರವನ್ನು ಶೇಖರ್ ನಿರ್ದೇಶನ ಮಾಡಿದ್ದಾರೆ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿಪಡಬಹುದಾದ ಚಿತ್ರವಾಗಿ ಎನ್ನುತ್ತಾರೆ ನಿರ್ದೇಶಕರು.

  ಶೀರ್ಷಿಕೆಗೆ ತಕ್ಕಂತೆ ಚಿತ್ರವೂ ಸ್ವೀಟ್ ಆಗಿರುತ್ತದೆ. ಇದು ರೊಮ್ಯಾಂಟಿಕ್ ಚಿತ್ರವಾದರೂ ಎಲ್ಲ ವರ್ಗಕ್ಕೂ ಇಷ್ಟವಾಗುವ ಎಲಿಮೆಂಟ್ಸ್ ಚಿತ್ರದಲ್ಲಿವೆ. ಪ್ರೇಕ್ಷಕರಿಗೆ ಖಂಡಿತ ನಿರಾಸೆ ಮಾಡಲ್ಲ ಎನ್ನುತ್ತಾರೆ ನಟ ದಿಗಂತ್. ಈ ಬಾರಿ ದಿಗಂತ್ ಗೆ ಮಲ್ಲು ಬೆಡಗಿ ಭಾಮಾ ಜೋಡಿ.

  ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ.ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ, ಕವಿರಾಜ್, ಬಾಹುಬಲಿ, ಹೃದಯಶಿವ ಸಾಹಿತ್ಯವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಎಸ್. ಬಾಹುಬಲಿ ಸಹಕಾರ ನಿರ್ದೇಶನ, ಹರ್ಷ ಕಂಬಿರಾಜ್ ನೃತ್ಯ ನಿರ್ದೇಶನವಿದೆ.

  ಪಾತ್ರವರ್ಗದಲ್ಲಿ ದಿಗಂತ್, ಭಾಮಾ, ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೇಂದ್ರಪ್ರಸಾದ್, ಪವಿತ್ರಾ ಲೋಕೇಶ್, ಸಂಯುಕ್ತ ಬೆಳವಾಡಿ, ಶಂಕರ್ ಭಟ್ಟ, ಇಂದ್ರಜಿತ್ ಲಂಕೇಶ್ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada romantic comedy film 'Burfi' all set to release on 30th August. It stars Diganth and Bhama in the lead roles. Arjun Janya is the music director and KM Shankar is the producer of the film and directed by Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X