ಶೀಘ್ರದಲ್ಲೇ ಚಿತ್ರಮಂದಿರಗಳಿಗೆ 'ಚಡ್ಡಿದೋಸ್ತ್' ಗಳು
'ವಿಕ್ಟರಿ' ಚಿತ್ರದ ಯಶಸ್ಸಿನ ಬಳಿಕ ಎಸ್ಆರ್ ಎಸ್ ಮೀಡಿಯಾ ವಿಷನ್ ಸಂಸ್ಥೆಯ ಆನಂದ್ ಛಾಬ್ರಿಯಾ ಮತ್ತೊಂದು ಹಾಸ್ಯ ಪ್ರಧಾನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರು 'ಚಡ್ಡಿದೋಸ್ತ್'. ಈಗಾಗಲೆ ಚಿತ್ರದ ಟ್ರೇಲರ್ ಹಿಟ್ ಆಗಿದೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಹಾಸ್ಯನಟ ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಎಪ್ಪತ್ತೈದು ದಿನಗಳನ್ನು ಪೂರೈಸಿ ಸೆಂಚುರಿ ಕಡೆಗೆ ದಾಪುಗಾಲು ಹಾಕಿದೆ. ಈಗ ರಂಗಾಯಣ ರಘು, ಸಾಧು ಕೋಕಿಲ ಚಿತ್ರದ ಮುಖ್ಯಭೂಮಿಕೆಯಲ್ಲಿರುವ 'ಚಡ್ಡಿದೋಸ್ತ್' ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ನಾಯಕ ಹಾಗೂ ರೋಮಿಯೋ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿಸಿ ಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು. ಆಕ್ಷನ್, ರೊಮ್ಯಾನ್ಸ್ ಬಳಿಕ ಅವರು ಈಗ ಕಾಮಿಡಿಗೆ ಹೊರಳಿದ್ದಾರೆ. ಅಶ್ವಿನಿ ಗೌಡ, ರೂಪಶ್ರೀ, ಅವಿನಾಶ್, ಮಿತ್ರಾ, ಅಮಿತ್, ಅಶೋಕ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳಲ್ಲಿ "ಅವಳು ನಕ್ಕು ಬಿಟ್ರೆ ಹಾಗೂ ರೋಡಲ್ಲಿ ಟಾರು..." ಹಾಡುಗಳು ಜನಪ್ರಿಯವಾಗಿವೆ. ಜಿ ನಟರಾಜ್ ಅವರ ಸಂಭಾಷಣೆ, ಕುಮಾರನ್ ಅವರ ಛಾಯಾಗ್ರಹಣ, ಶರವಣನ್ ಅವರ ಸಂಕಲನ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











