For Quick Alerts
  ALLOW NOTIFICATIONS  
  For Daily Alerts

  ರಾಯಣ್ಣ ಜೊತೆ ರೀಮೇಕ್ ಚಿತ್ರ ಡಕೋಟ ಪಿಕ್ಚರ್

  By Rajendra
  |

  ಬಿಗ್ ಬಜೆಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಜೊತೆಗೆ ನವೆಂಬರ್ 1ರಂದು 'ಡಕೋಟ ಪಿಕ್ಚರ್' ಕೂಡ ತೆರೆಕಾಣುತ್ತಿದೆ. ಓಂ ಪ್ರಕಾಶ್ ರಾವ್ ಹಾಗೂ ರಾಕ್ ಲೈನ್ ವೆಂಕಟೇಶ್ ಅಭಿನಯಿಸಿರುವ ಈ ಚಿತ್ರ ಹಿಂದಿಯ ಸೂಪರ್ ಹಿಟ್ 'ಮಾಲಾಮಾಲ್ ವೀಕ್ಲಿ' ಚಿತ್ರದ ರೀಮೇಕ್.

  ಇದುವರೆಗೂ ಆಕ್ಷನ್ ಚಿತ್ರಗಳನ್ನು ನಿರ್ದೇಶಿಸಿದ್ದ ಓಂಪ್ರಕಾಶ್‌ರಾವ್ ಮೊಟ್ಟಮೊದಲ ಬಾರಿಗೆ ಹಾಸ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಹಿಂದಿಯ 'ಮಾಲಾ ಮಾಲ್' ಚಿತ್ರ ಹಾಲಿವುಡ್ ನ 'ವೇಕಿಂಗ್ ನೆಡ್ ಡಿವೈನ್' ಚಿತ್ರದ ಕಥೆಗೆ ಬಹುತೇಕ ಸಾಮ್ಯತೆ ಇದೆ.

  ಒಟ್ಟು ರು.6 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ 'ಮಾಲಾಮಾಲ್' ಚಿತ್ರ ಬಾಕ್ಸ್ ಆಫೀಸಲ್ಲಿ ಸರಿಸುಮಾರು ರು.39 ಕೋಟಿ ಬಾಚಿ ದಾಖಲೆ ನಿರ್ಮಿಸಿತ್ತು. ಈ ಹಿಂದೆ ಓಂ ಮತ್ತು ರಾಕ್ ಲೈನ್ ಜೊತೆಯಾಗಿ 'ಡಕೋಟ ಎಕ್ಸ್ ಪ್ರೆಸ್' ಚಿತ್ರದಲ್ಲಿ ಅಭಿನಯಿಸಿದ್ದರು. ಆ ಚಿತ್ರವೂ ಪ್ರೇಕ್ಷರಿಗೆ ಇಷ್ಟವಾಗಿತ್ತು. ಈಗ ಮತ್ತೊಮ್ಮೆ ಜೊತೆಯಾಗಿ 'ಡಕೋಟ ಪಿಕ್ಚರ್' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಚಿತ್ರದ ತಾರಾಬಳಗದಲ್ಲಿ ದೊಡ್ಡಣ್ಣ, ಮನದೀಪ್ ರಾಯ್ ಹಾಗೂ ಮುಖ್ಯಮಂತ್ರಿ ಚಂದ್ರು ಮುಂತಾದವರಿದ್ದಾರೆ. ಚಿತ್ರದ ನಾಯಕಿ ನಿತಿಶಾ ಪಟೇಲ್. ಗುರುದೇಸಾಯಿ ಹಾಗೂ ಸರಿಗಮವಿಜಿ ಸಂಭಾಷಣೆ ಬರೆದಿದ್ದಾರೆ. ಜೆ.ಎಸ್.ವಾಲಿ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ಸೋಮರಾಜ್ ಸಹನಿರ್ದೇಶನವಿರುವ 'ಡಕೋಟ ಪಿಕ್ಚರ್'ಗೆ ಹಂಸಲೇಖ ಗೀತರಚನೆ ಮಾಡಿ ಸಂಗೀತ ನೀಡಿದ್ದಾರೆ.

  ಹಂಸಲೇಖಾ ಎರಡು ಇಂಪಾದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ಹಲವು ವರ್ಷಗಳ ನಂತರ ನಾಯಕನಾಗಿ ಬಣ್ಣಹಚ್ಚಿರುವ ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಸುಮಾರು 60 ಚಿತ್ರಮಂದಿರದಲ್ಲಿ ಬಿಡುಗಡೆಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada film Dakota Picture (Remake of Hindi film Malamaal Weekly) slated for release on 1st November. On the same day Darshan's big budget film Krantiveera Sangolli Rayanna also releasing. Dakota Picture directed by Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X