»   » ಭಾರಿ ನಿರೀಕ್ಷೆಯೊಂದಿಗೆ ಬರುತ್ತಿದ್ದಾನೆ ದಿಲ್ ವಾಲ

ಭಾರಿ ನಿರೀಕ್ಷೆಯೊಂದಿಗೆ ಬರುತ್ತಿದ್ದಾನೆ ದಿಲ್ ವಾಲ

Posted By:
Subscribe to Filmibeat Kannada

ಹೆಸರಿನಲ್ಲೇ ಎಲ್ಲರ ದಿಲ್ ಗೆ ಕೈಹಾಕಿರುವ ಚಿತ್ರ 'ದಿಲ್ ವಾಲ'. ಯಂಗ್ ಅಂಡ್ ಡ್ಯಾಶಿಂಗ್ ಡೈರೆಕ್ಟರ್ ಅನಿಲ್ ಕುಮಾರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರದಲ್ಲಿನ ಎಮೋಷನಲ್ ಎಲಿಮೆಂಟ್ಸ್ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತವೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.

ಈ ಹಿಂದೆ ಅನಿಲ್ ಕುಮಾರ್ ಅವರು 'ಆಟ', ಶಕ್ತಿ ಚಿತ್ರಗಳನ್ನು ನಿರ್ದೇಶಿಸಿದ್ದರು. 'ದಿಲ್ ವಾಲ' ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ. ಚಿತ್ರದಲ್ಲಿ ಸುಮಂತ್ ಅವರ ಸ್ಟಂಟ್ಸ್, ರಾಧಿಕಾ ಪಂಡಿತ್ ಅವರ ಗ್ಲಾಮರ್ ಜೊತೆಗೆ ನಟನೆಯೂ ಚಿತ್ರದ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ.


ಇದೇ ಅಕ್ಟೋಬರ್ 4ರಂದು ಚಿತ್ರ ತೆರೆಕಾಣುತ್ತಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆಟ ಚಿತ್ರದ ಬಳಿಕ ಸುಮಂತ್ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು. ಶೈಲೇಂದ್ರ ಪ್ರೊಡಕ್ಷನ್ಸ್ ನಲ್ಲಿ ಶೈಲೇಂದ್ರ ಬಾಬು ನಿರ್ಮಿಸಿರುವ ಚಿತ್ರ.

ಖಳನಟನಾಗಿ ಈ ಚಿತ್ರದ ಮತ್ತೊಂದು ಆಕರ್ಷಣೆ ರವಿಶಂಕರ್. ಬೆಂಗಳೂರು, ಮೈಸೂರು, ಊಟಿ, ದುಬೈ ಸೇರಿದಂತೆ ಹಲವಾರು ರಮಣೀಯ ತಾಣಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ನಿರ್ದೇಶನದ ಜೊತೆಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅನಿಲ್ ಕುಮಾರ್ ಬರೆದಿದ್ದಾರೆ.

ಅರ್ಜುನ್ ಜನ್ಯ ಅವರ ಸಂಗೀತದ ಹಾಡುಗಳು ಈಗಾಗಲೆ ಕಾಲೇಜು ಹುಡುಗರ ರಿಂಗ್ ಟೋನ್ಸ್ ಆಗಿದೆ. 'ಎತ್ತಾಕ್ಕೊಂಡ್ ಹೋಯ್ತಾ ಇರೋದೆ' ಎಂಬುದು ಚಿತ್ರದ ಅಡಿಬರಹ. ಸುಧಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Actress Radhika Pandit and Sumanth Shailendra lead Kannada film Dilwala is all set to hit the screens on Friday the 04th of October. Anil KUmar has directed the film along with penning the story-screenplay and dialogues. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada