»   » ತೆನೆಹೊತ್ತ ಮಹಿಳೆಯ ಕೈಹಿಡಿದ ಎಸ್ ನಾರಾಯಣ್

ತೆನೆಹೊತ್ತ ಮಹಿಳೆಯ ಕೈಹಿಡಿದ ಎಸ್ ನಾರಾಯಣ್

Posted By:
Subscribe to Filmibeat Kannada
Director S Narayan
ಇದೀಗ ತಾನೆ ಬಂದ ಸುದ್ದಿ. ಕಲಾ ಸಾಮ್ರಾಟ್ ಬಿರುದಾಂಕಿತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಎಸ್ ನಾರಾಯಣ್ ಅವರು ರಾಜ್ಯ ರಾಜಕೀಯಕ್ಕೆ ಧುಮುಕಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಅವರು ಶನಿವಾರ (ಆ.11) ಅಧಿಕೃತವಾಗಿ ಸೇರ್ಪಡೆಯಾಗಲಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸ್ ನಾರಾಯಣ್, "ರಾಜಕೀಯಕ್ಕೆ ಬರುತ್ತೇನೆ ಎಂಬ ಕಲ್ಪನೆಯೇ ನನಗಿರಲಿಲ್ಲ. ಇದನ್ನು ನಿರೀಕ್ಷಿಸಿರಲಿಲ್ಲ. ಇದೊಂದು ದಿಢೀರ್ ಬೆಳವಣಿಗೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಸ್ವತಃ ಅವರೇ ಬೆರಗಾಗಿದ್ದಾರೆ.

ನಾರಾಯಣ್ ಅವರಿಗೆ ಸಿನೆಮಾ ಸಾಕಾಯ್ತೆ? ಎಂದರೆ ಸಿನೆಮಾ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಸಾಕಷ್ಟಿದೆ. ಸಿನೆಮಾ ಮಾಡಬೇಡಿ ಎಂದು ನನಗೆ ಯಾರು ಹೇಳಿಲ್ಲ. ಬಹುಶಃ ಈ ಕ್ಷೇತ್ರದಲ್ಲಿ ತಾವು ಮಾಡಬೇಕಾದ ಕೆಲಸ ಸಾಕಷ್ಟಿದೆ. ಈ ಜನ್ಮದಲ್ಲಿ ಮುಗಿಯದಷ್ಟು ಕೆಲಸವಿದೆ ಎಂದಿದ್ದಾರೆ.

ಅದು ರಾಜಕೀಯವೇ ಇರಲಿ, ಸಿನೆಮಾ ಕ್ಷೇತ್ರವೇ ಇರಲಿ ನನ್ನ ತನವನ್ನು ನಾನು ಬಿಟ್ಟುಕೊಡಲ್ಲ. ನಾನು ಯಾವುದನ್ನೂ ಸುತ್ತಿ ಬಳಸಿ ಹೇಳುವ ಪೈಕಿಯಲ್ಲ. ಎಲ್ಲವನ್ನೂ ನೇರ ನಿಷ್ಠುರವಾಗಿ ಹೇಳುತ್ತೇನೆ. ಚಿತ್ರೋದ್ಯಮದಲ್ಲಿರುವ ಎಲ್ಲರಿಗೂ ಇದು ಗೊತ್ತು. ರಾಜಕೀಯದಲ್ಲೂ ಅಷ್ಟೇ ಇದೇ ರೀತಿ ಇರುತ್ತೇನೆ.

ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದಿರುವ ಕಲಾಸಾಮ್ರಾಟ್, ಜೆಡಿಎಸ್ ಪಕ್ಷದಲ್ಲಿ ತಮಗೆ ಯಾವ ಸ್ಥಾನ ನೀಡುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ನೋಡಬೇಕು ಎಂದಿದ್ದಾರೆ. ಮೂಲಗಳ ಪ್ರಕಾರ ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಾಜಿನಗರ ಅಥವಾ ಭದ್ರಾವತಿಯಿಂದ ಟಿಕೆಟ್ ನೀಡಬಹುದು ಎನ್ನಲಾಗಿದೆ.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೂ ಎಸ್ ನಾರಾಯಣ್ ಅವರಿಗೂ ಮೊದಲಿನಿಂದಲೂ ಒಡನಾಟವಿತ್ತು. ಕುಮಾರಸ್ವಾಮಿ ಅವರ ಬ್ಯಾನರ್ ನಲ್ಲಿ ಬಂದಂತಹ ಹಲವಾರು ಚಿತ್ರಗಳನ್ನು ನಾರಾಯಣ್ ನಿರ್ದೇಶಿಸಿದ್ದಾರೆ. ಅವುಗಳಲ್ಲಿ 'ಸೂರ್ಯವಂಶ', 'ಗಲಾಟೆ ಅಳಿಯಂದಿರು', 'ಚಂದ್ರಚಕೋರಿ' ಪ್ರಮುಖವಾದವು.

ನಾರಾಯಣ್ ನಿರ್ದೇಶಿಸಿರುವ ಲೇಟೆಸ್ಟ್ ಚಿತ್ರ 'ಅಪ್ಪಯ್ಯ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೆ ಕನ್ನಡ ಚಿತ್ರರಂಗದ ತಾರೆಗಳಾದ ಪೂಜಾಗಾಂಧಿ, ಮಾಳವಿಕಾ ಅನಿನಾಶ್ ಅವರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಕೈಹಿಡಿದ್ದಾರೆ. ತಾರೆ ರಕ್ಷಿತಾ ಅವರು ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜಾಡಿನಲ್ಲಿ ಈಗ ಕಲಾ ಸಾಮ್ರಾಟ್ ಹೆಜ್ಜೆ ಹಾಕುತ್ತಿರುವುದು ವಿಶೇಷ. (ಒನ್ ಇಂಡಿಯಾ ಕನ್ನಡ)

English summary
Kannada films popular director Kala Samrat S Narayan to join JD(S) shortly. S.Narayan had a meeting with JD (S) working President H.D.Kumara Swamy on Friday. Narayan done films like, "Suyavamsha', "Galate Aliyandiru' and "Chandra Chakori" with Kumara Swamy.
Please Wait while comments are loading...