For Quick Alerts
  ALLOW NOTIFICATIONS  
  For Daily Alerts

  ಹುಚ್ಚುಡುಗ್ರು...ಫುಲ್ ಊಟ ಬೀಡಿ ಬೆಂಕಿಪಟ್ಣ

  By Rajendra
  |

  ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಆಲೋಚನೆಗಳೊಂದಿಗೆ ಹೊಸ ಹುಡುಗ್ರು ಎಂಟ್ರಿ ಕೊಡುತ್ತಿದ್ದಾರೆ. ಹೊಸಬರ ಜಮಾನ ಶುರುವಾಗಿದ್ದು ಅವರ ನವೀನ ಪ್ರಯೋಗವೇ 'ಹುಚ್ಚುಡುಗ್ರು'. ಈ ಚಿತ್ರಕ್ಕೆ ಇದೇ ರೇಡಿಯೋ ಜಾಕಿ ಪ್ರದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ಪ್ರಯತ್ನ.

  ಈ ಚಿತ್ರಕ್ಕಾಗಿ ಪ್ರದೀಪ್ ಬಹಳಷ್ಟು ಕಷ್ಟಪಟ್ಟು ಹುಡುಗರನ್ನು ಆಯ್ಕೆ ಮಾಡಿಕೊಳುತ್ತಿದ್ದಾರೆ. ಒಟ್ಟು ಹದಿನೈದು ದಿನಗಳ ಕಾಲ ಚಿತ್ರದ ಹೀರೋ ಸೇರಿದಂತೆ 15 ಮಂದಿ ಪ್ರತಿಭಾವಂತರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಅವರು ಯಾರು ಎಂಬುದು ಗೊತ್ತಾಗಬೇಕಾದರೆ ಮಾರ್ಚ್ 20ರ ತನಕ ಕಾಯಬೇಕು.

  ಮಾರ್ಚ್ ಮೊದಲ ವಾರದಲ್ಲಿ ಕಲಾವಿದರ ಆಯ್ಕೆ ಮುಗಿಯಲಿದ್ದು ಮಾರ್ಚ್.20ರಿಂದ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತದೆ 'ಹುಚ್ಚುಡುಗ್ರು' ಚಿತ್ರತಂಡ. ತಂತ್ರಜ್ಞರೇ ಸೇರಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ವೇದಾ ಅವರು ಅಧಿಕೃತ ನಿರ್ಮಾಪಕಿ.

  ಈಗಾಗಲೆ ಚಿತ್ರಕ್ಕೆ ಆಕಾಶ್ ಆಡಿಯೋದಲ್ಲಿ ಹಾಡಿನ ಧ್ವನಿಮುದ್ರಿಸಿಕೊಳ್ಳಲಾಗಿದೆ. ಈ ಹಾಡನ್ನು ಜೋಗಯ್ಯ ಖ್ಯಾತಿಯ ಪ್ರೇಮ್ ಹಾಡಿರುವುದು ವಿಶೇಷ. ರಘು ಹಾಸನ್ ಅವರು ಪ್ರೇಮ್ ಗೆ ಸಾಥ್ ನೀಡಿದ್ದಾರೆ. "ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗ್ರು.."ಎಂಬ ಹಾಡಿಗೆ ಜೋಶ್ವ ಶ್ರೀಧರ್ ಸಂಗೀತ ನೀಡಿದ್ದಾರೆ.

  ಅಂದಹಾಗೆ "ಫುಲ್ ಊಟ ಬೀಡಿ ಬೆಂಕಿಪಟ್ಲ" ಎಂಬುದು ಚಿತ್ರದ ಅಡಿಬರಹ. ರಘು ಹಾಸನ್ ಅವರ ಕಥೆ, ಚಿತ್ರಕಥೆ ಇರುವ ಹುಚ್ಚುಡುಗ್ರು ಚಿತ್ರಕ್ಕೆ ಶಮನ್ ಮಿತ್ರ ಅವರ ಛಾಯಾಗ್ರಹಣವಿದೆ. ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರ ಸಾಹಿತ್ಯ ಚಿತ್ರಕ್ಕಿದೆ.

  ನಂಜನಗೂಡು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಅಭಿನಯಿಸಲು ನಿಮಗೂ ಆಸಕ್ತಿ ಇದ್ದರೆ ಆಡಿಷನ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 90604 68686. (ಒನ್ಇಂಡಿಯಾ ಕನ್ನಡ)

  English summary
  Radio Jockey Pradeep's debut direction movie titled as Huchchudugru. The film has commenced song recording at Akash Audio. Director Prem with whom Raghu Hassan has worked from Kariya to Raaj the Showman has lent his voice for one of the important title songs of the film. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X