twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ತಾರೆಗಳು ಒಂದಾಗುವ ಸಮಯ ಮತ್ತೆ ಬಂದಿದೆ

    By ಜೀವನರಸಿಕ
    |

    ಕನ್ನಡ ಇಂಡಸ್ಟ್ರಿಗೆ ಡಬ್ಬಿಂಗ್ ಭೂತ ಕಾಡ್ತಿರೋದರ ವಿರುದ್ಧ ಇದೇ ಜನವರಿ 27ಕ್ಕೆ ಚಿತ್ರರಂಗದ ಮಂದಿ ಎಲ್ಲರೂ ಪ್ರತಿಭಟನೆಗೆ ಇಳಿಯೋಕೆ ಡೆಡ್ ಲೈನ್ ಫಿಕ್ಸ್ ಮಾಡ್ಕೊಂಡಿದ್ದಾರೆ. ಡಬ್ಬಿಂಗ್ ಬೇಡ ಅಂತ ಬೊಬ್ಬಿರಿಯೋ ಎಲ್ಲ ಕನ್ನಡದ ಸಿನಿಮಾ ಮಂದಿ ಇದೊಂದು ಕೆಲಸವನ್ನ ಸರಿಯಾಗಿ ಮಾಡಿದ್ರೆ ಇಂಡಷ್ಟ್ರಿಗೆ ಯಾವುದೇ ಸಮಸ್ಯೆಗಳು ಎದುರಾಗೋದಿಲ್ಲ.

    ವಾಟಾಳ್ ನಾಗರಾಜ್ ಏನೋ ಒಂದಷ್ಟು ಚಿತ್ರರಂಗದ ಕಲಾವಿದರನ್ನ ಸೇರಿಸಿ ಡಬ್ಬಿಂಗ್ ಭೂತದ ವಿರುದ್ದ ಮಾತುಕತೆ ನಡೆಸದರು. ಅದರ ವಿರುದ್ಧ ಪ್ರತಿಭಟಿಸೋಕೆ ಡೆಡ್ ಲೈನ್ ಕೂಡ ಫಿಕ್ಸ್ ಮಾಡದರು. ಆದರೆ ಈಗ ಚಿತ್ರರಂಗದ ದೊಡ್ಡ ಸ್ಟಾರ್ ಗಳು ಈ ಪ್ರತಿಭಟನೆಯಲ್ಲಿ ಇರ್ತಾರಾ? ಮುಂಚೂಣಿಯಲ್ಲಿ ನಿಂತು ಬಲ ತುಂಬ್ತಾರಾ ಅನ್ನೋ ಅನುಮಾನ ಕಾಡುತ್ತಿದೆ. [ಒಂದು ವೇಳೆ ಡಬ್ಬಿಂಗ್ ಬಂದ್ರೆ ಮಹಾ ಏನಾಗುತ್ತದೆ?]

    Bandh against dubbing culture
    ಯಾಕಂದ್ರೆ ಹಿಂದೆ ನಡೆದ ಹೆಚ್ಚಿನ ಪ್ರತಿಭಟನೆಗಳಲ್ಲಿ ಕನ್ನಡ ಚಿತ್ರರಂಗದ ಹಿರಿತಲೆಗಳು ಕಾಣಿಸಿಕೊಂಡಿರೋದು ಬಿಟ್ಟರೆ ದೊಡ್ಡ ಸ್ಟಾರ್ ಗಳು ಅಂತ ಹಣೆಪಟ್ಟಿ ಹೊತ್ತವರು. ಪ್ರತಿಭಟನೆಗಳಿಂದ ದೂರ ಉಳಿದುಕೊಂಡಿದ್ದರು. ನಮಗೆ ಸಂಬಂಧಪಟ್ಟ ವಿಚಾರ ಅಲ್ಲವೇನೋ ಅಂತ ತಮ್ಮ ಶೂಟಿಂಗ್ ನಲ್ಲಿ ಬಿಜಿ ಇದ್ದರು.

    ಇನ್ನು ಇಂಡಸ್ಟ್ರೀಲಿ ಇರೋ ಸ್ಟಾರ್ ಗಳಲ್ಲಿ ಅವರವರದ್ದೇ ಗುಂಪುಗಳು. ಎತ್ತು ಏರಿಗೆಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತಿದೆ ಪರಿಸ್ಥಿತಿ. ಹೀಗಿರುವಾಗ ಎಲ್ಲರೂ ಒಟ್ಟಾಗಿ ಕೈ ಜೋಡಿಸೋದು ಅನುಮಾನ. ಅದೇ ಪಕ್ಕದ ತೆಲುಗು ಅಥವಾ ತಮಿಳು ಚಿತ್ರರಂಗಗಳನ್ನ ನೋಡದರೆ ಖುಷಿಯಾಗತ್ತೆ. ಯಾಕಂದರೆ ಅಲ್ಲಿ ಸಣ್ಣದೊಂದು ಸಮಸ್ಯೆಯಾದರೂ ಇಡೀ ಚಿತ್ರರಂಗ ಒಗ್ಗಟ್ಟಾಗಿ ನಿಲ್ಲತ್ತದೆ.

    ಡಬ್ಬಿಂಗ್ ಕನ್ನಡಕ್ಕೆ ಬರೋದಕ್ಕೆ ನಾವ್ ಬಿಡೋಲ್ಲ ಅಂತೆಲ್ಲಾ ಮೈಕಿನ ಮುಂದೆ ಪುಂಖಾನುಪುಂಖವಾಗಿ ಡೈಲಾಗ್ ಉದುರಿಸೋ ಚಿತ್ರರಂಗದ ಮಂದಿ ಪ್ರತಿಭಟನೆಗೆ ಒಟ್ಟಾಗ್ತಾರಾ ಅನ್ನೋದೇ ಎಲ್ಲರ ಮುಂದಿರೋ ಪ್ರಶ್ನೆ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ಕನ್ನಡ ಚಿತ್ರರಂಗ ಅರ್ಥ ಮಾಡ್ಕೋಬೇಕಿದೆ.

    English summary
    Kannada film industry has called for a film industry bundh on the 27th of January, 2014. The issue of dubbing other language films into Kannada is again in focus, with Kannada Chaluvali Vatal Paksha president Vatal Nagaraj calling a Kannada film industry bandh oppose “dubbing culture”.
    Monday, January 13, 2014, 12:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X