»   » ಕೆ.ಎಸ್.ಎಲ್.ಸ್ವಾಮಿ ನಿಧನಕ್ಕೆ ಚಿತ್ರರಂಗದ ಗಣ್ಯರ ಕಂಬನಿ

ಕೆ.ಎಸ್.ಎಲ್.ಸ್ವಾಮಿ ನಿಧನಕ್ಕೆ ಚಿತ್ರರಂಗದ ಗಣ್ಯರ ಕಂಬನಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹ ಸ್ವಾಮಿ (77) ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಗಾಯಕರಾಗಿ ಗುರುತಿಸಿಕೊಂಡಿದ್ದ ಕೆ.ಎಸ್.ಎಲ್.ಸ್ವಾಮಿ ಅವರ ನಿಧನ 'ಗಾಂಧಿನಗರ'ಕ್ಕೆ ತುಂಬಲಾರದ ನಷ್ಟವಾಗಿದೆ. [ ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ]

ಕೆ.ಎಸ್.ಎಲ್.ಸ್ವಾಮಿ ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಹಿರಿಯ ನಟಿ ಜಯಂತಿ, ಹಿರಿಯ ನಟಿ ಲೀಲಾವತಿ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರವಿಶಂಕರ್ ಸೇರಿದಂತೆ ಹಲವು ಗಣ್ಯರು ಕೆ.ಎಸ್.ಎಲ್.ಸ್ವಾಮಿ ಅವರ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ......

ರಾಧಾ

''ಸಂಜೆ ಮನೆಗೆ ಕರೆದುಕೊಂಡು ಬಂದ್ವಿ. ಹುಷಾರಾಗಿ ಇದ್ದರು. ಎಲ್ಲರ ಜೊತೆ ಮಾತನಾಡುತ್ತಿದ್ದರು. ಮನೆಗೆ ಬಂದ್ನಲ್ಲಾ ಅಂತ ಖುಷಿ ಆಗಿದ್ದರು. 12.30 ವರೆಗೂ ಮಾತನಾಡುತ್ತಿದ್ದರು. 1.30 ಅಷ್ಟೊತ್ತಿಗೆ ಹೀಗಾಯ್ತು.'' - ರಾಧಾ [ಸಾವಿನಲ್ಲೂ ಸಾರ್ಥಕತೆ ಮೆರೆದ ಕೆ.ಎಸ್ ಎಲ್ ಸ್ವಾಮಿ]

ಥಾಮಸ್ ಡಿಸೋಜ

''ನಮಗೆ ರವಿ ಅಣ್ಣ ಅಂದ್ರೆ ಸರಸ್ವತಿ ಪುತ್ರನಿದ್ದಹಾಗೆ. ಅವರು ಇವತ್ತು ದೈವಾದೀನರಾಗಿದ್ದಾರೆ ಅಂದ್ರೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಚಿತ್ರರಂಗದ ದೊಡ್ಡ ವ್ಯಕ್ತಿಯನ್ನ ನಾವು ಕಳೆದುಕೊಂಡಿದ್ದೇವೆ. ಚಿತ್ರೋದ್ಯಮದ ಎಲ್ಲಾ ವಲಯಗಳಲ್ಲೂ ಅವರು ಹೆಸರುವಾಸಿ. ನಟನೆ, ನಿರ್ದೇಶನ, ಗಾಯನದ ಜೊತೆ ಎಲ್ಲದರಲ್ಲೂ ಅವರು ಪ್ರವೀಣರು. ಅವರು ಆಸ್ಪತ್ರೆಗೆ ದಾಖಲಾಗಿದ್ದಾಗಲೂ ನಾನು ಹೋಗಿದ್ದೆ. ಅವರ ಪರಿಸ್ಥಿತಿ ನೋಡಿದಾಗ ನನಗೆ ತುಂಬಾ ನೋವಾಯ್ತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.'' - ಥಾಮಸ್ ಡಿಸೋಜ

ಶಿವರಾಜ್ ಕುಮಾರ್

''ನಮ್ಮ ಕುಟುಂಬಕ್ಕೆ ಅವರು ತುಂಬಾ ಆಪ್ತರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. '' - ಶಿವರಾಜ್ ಕುಮಾರ್ [ದರ್ಶನ್ ತಂದೆಗೆ 'ತೂಗುದೀಪ' ಹೆಸರು ಕೊಟ್ಟವ್ರು ಇದೇ ರಾಧಾರವಿ.!]

ಪುನೀತ್ ರಾಜ್ ಕುಮಾರ್

''ನಮಗೆ ತುಂಬಾ ಸಲಹೆಗಳನ್ನ ನೀಡ್ತಿದ್ದವರು ಕೆ.ಎಸ್.ಎಲ್.ಸ್ವಾಮಿ. ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿ ನೀಡಲಿ ಅಂತ ದೇವರಲ್ಲಿ ನಾನು ಕೇಳಿಕೊಳ್ಳುತ್ತೇನೆ.'' - ಪುನೀತ್ ರಾಜ್ ಕುಮಾರ್ [ಶ್ರೀನಾಥ್ ರನ್ನ 'ಸ್ಟಾರ್' ಮಾಡಿದ್ದೇ ಕೆ.ಎಸ್.ಎಲ್.ಸ್ವಾಮಿ.!]

ಜಯಂತಿ

''ಪುಟ್ಟಣ್ಣ ಕಣಗಾಲ್ ರವರ 'ಸಾವಿರ ಮೆಟ್ಟಿಲು' ಚಿತ್ರವನ್ನ ಕಂಪ್ಲೀಟ್ ಮಾಡಿದವರು ಅವರು. ನಟಿಯಾಗಿ ನಾನು ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಅವರು ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ.'' - ಜಯಂತಿ

ಲೀಲಾವತಿ

''ತುಂಬಾ ಬೇಸರವಾಯ್ತು ಈ ಸುದ್ದಿ ಕೇಳಿ. ನಾನು ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ ಅವರು ತುಂಬಾ ಸಹಾಯ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' - ಲೀಲಾವತಿ

ರಾಜೇಂದ್ರ ಸಿಂಗ್ ಬಾಬು

''ನಾನು ಅವರ ಗರಡಿಯಲ್ಲಿ ಪಳಗಿದವನು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ. ನಾನು ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ.'' - ರಾಜೇಂದ್ರ ಸಿಂಗ್ ಬಾಬು

ಸಿಹಿ ಕಹಿ ಚಂದ್ರು

''ನನ್ನ ಗುರು, ನಮ್ಮೆಲ್ಲರ ನೆಚ್ಚಿನ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ನಿಧನಕ್ಕೆ ನಾನು ಕಂಬನಿ ಮಿಡಿಯುತ್ತೇನೆ. ನಾನು ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ.'' - ಸಿಹಿ ಕಹಿ ಚಂದ್ರು

English summary
Kannada Director KSL Swamy (77) passes away. Kannada Actors like Shivarajkumar, Puneeth Rajkumar, Kannada Actress Jayanthi, Leelavathi paid tribute to KSL Swamy.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X