For Quick Alerts
  ALLOW NOTIFICATIONS  
  For Daily Alerts

  ಕಿಸ್ಮತ್ ಶೂಟಿಂಗ್, 24ಕ್ಯಾರೆಟ್, ಆರ್ಯನ್ ..etc

  By Mahesh
  |

  ಕನ್ನಡ ಚಿತ್ರರಂಗದ ಆಗು ಹೋಗುಗಳನ್ನು ಕಾಲಕಾಲಕ್ಕೆ ಮಾಧ್ಯಮಗಳಿಗೆ ನೀಡುವಲ್ಲಿ ಪಿಆರ್ ಓ ಗಳ ಪಾತ್ರ ಹಿರಿದು. ಈ ದಿನದ ಚಿತ್ರರಂಗದ ಸುದ್ದಿಗಳನ್ನು ಶ್ರೀರಾಘವೇಂದ್ರ ಚಿತ್ರವಾಣಿ ಕಡೆಯಿಂದ ಪಡೆಯಲಾಗಿದ್ದು, ವಿಜಯ್ ರಾಘವೇಂದ್ರ ಅವರ ಕಿಸ್ಮತ್ ಚಿತ್ರಕ್ಕೆ ಚಾಲನೆ, '24ಕ್ಯಾರೆಟ್' ಚಿತ್ರಕ್ಕೆ ಕ್ಲೈಮ್ಯಾಕ್ಸ್ ಚಿತ್ರೀಕರಣ, 'ಆರ್ಯನ್' ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ ಹಾಗೂ ಹಿರಿಯ ನಟ ಶಿವರಾಂ ಅವರಿಗೆ ವೈದ್ಯರು ನೀಡಿದ ಸಲಹೆ ಮುಂತಾದ ಸುದ್ದಿ ಚಿತ್ರಗಳು ಇಲ್ಲಿವೆ ನೋಡಿ

  ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ವಿಜಯ ರಾಘವೇಂದ್ರ ಮತ್ತೆ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಗೆ ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮಲೆಯಾಳಂ-ತಮಿಳಿನ ನೇರಂ ಚಿತ್ರದ ರಿಮೇಕ್ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಜತೆಗೆ ತಮ್ಮ ಹೆಸರನ್ನೂ ಬದಲಾಯಿಸಿಕೊಂಡು ಲಕ್ ಟೆಸ್ಟ್ ಮಾಡುತ್ತಿದ್ದಾರೆ.

  'ಚಿನ್ನಾರಿ ಮುತ್ತ' ಪಾತ್ರದಿಂದ ಜನರ ಮೆಚ್ಚುಗೆ ಗಳಿಸಿದ ಪ್ರತಿಭಾವಂತ ನಟ ವಿಜಯ್ ಅವರು ತಮ್ಮ ಹೆಸರನ್ನು ಚಿನ್ನಾರಿ ಮುತ್ತ ವಿಜಯ್ ಎಂದು ಬದಲಾಯಿಸಿಕೊಂಡು ನಂದಿತೀರ್ಥದಲ್ಲಿ ಮಲ್ಲೇಶ್ವರಂನ 'ಕಿಸ್ಮತ್' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ನವೆಂಬರ್ 15 ರಂದು ಚಿತ್ರದ ಮುಹೂರ್ತವಾದರೂ ಶೂಟಿಂಗ್ ನ.25ರಿಂದ ಆರಂಭವಾಗಲಿದೆ.

  ಪ್ರಥಮ ಸನ್ನಿವೇಶಕ್ಕೆ ವಿಜಯರಾಘವೇಂದ್ರರ ತಂದೆ ಚಿನ್ನೇಗೌಡ ಅವರು ಆರಂಭಫಲಕ ತೋರಿದರೆ ಸೆಂಚುರಿಸ್ಟಾರ್ ಶಿವರಾಜಕುಮಾರ್ ಕ್ಯಾಮೆರಾಚಾಲನೆ ಮಾಡಿದರು. ಪವರ್‍ಸ್ಟಾರ್ ಪುನೀತ್‍ರಾಜಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಚ್.ಡಿ.ಗಂಗರಾಜ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು. ಇನ್ನಷ್ಟು ಸುದ್ದಿ ಮುಂದೆ ಓದಿ...

  ಕಿಸ್ಮತ್ ಚಿತ್ರದ ಬಗ್ಗೆ

  ಕಿಸ್ಮತ್ ಚಿತ್ರದ ಬಗ್ಗೆ

  ರಾಜೇಶ್ ಮುರುಗೇಶನ್ ಸಂಗೀತ ನಿರ್ದೇಶನದ 'ಕಿಸ್ಮತ್'ಗೆ ರಾಜೇಶ್ ಯಾದವ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಪಂಡಿತ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್‍ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಆನಂದಪ್ರಿಯ ಗೀತರಚನೆ ಮಾಡಿದ್ದಾರೆ.

  ವಿಜಯರಾಘವೇಂದ್ರ, ನವೀನ್ ಕೃಷ್ಣ, ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ.

  24ಕ್ಯಾರೆಟ್’ ಚಿತ್ರಕ್ಕೆ ಕ್ಲೈಮ್ಯಾಕ್ಸ್

  24ಕ್ಯಾರೆಟ್’ ಚಿತ್ರಕ್ಕೆ ಕ್ಲೈಮ್ಯಾಕ್ಸ್

  ಚೌಡೇಶ್ವರಿ ಸಿನಿ ಚಿತ್ರಾಲಯ ಲಾಂಛನದಲ್ಲಿ ಚೌಡರೆಡ್ಡಿ(ಬಾಗೇಪಲ್ಲಿ) ಅವರು ನಿರ್ಮಿಸುತ್ತಿರುವ 24 ಕ್ಯಾರೆಟ್ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಪಿರಿಯಾಪಟ್ಟಣ ಬಳಿಯ ಬೆಟ್ಟದಪುರದಲ್ಲಿ ನಡೆದಿದೆ. ವಿರಾಟ್, ಪೂಜಾ, ರಿಶಿಕುಮಾರ್ ಸ್ವಾಮೀಜಿ, ರಂಗಾಯಣರಘು, ಶೋಭ್ ರಾಜ್, ಕರುಣಾಕರ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು ಉಳಿದ ಚಿತ್ರೀಕರಣ ಪೂರ್ಣವಾಗಿದೆ ಎನ್ನುತ್ತಾರೆ ನಿರ್ದೇಶಕ ಎಸ್.ಉಮೇಶ್.

  ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಸೂಪರ್ ಕಾಪ್ ಬಿಕೆ ಶಿವರಾಂ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಉಳಿದ ತಾರಾಬಳಗದಲ್ಲಿ ಋಷಿಕುಮಾರ ಸ್ವಾಮೀಜಿ,ಸುರೇಶ್ ಮಂಗಳೂರು, ಧನಂಜಯ್, ಸುಧಾ ಬೆಳವಾಡಿ, ಪೆಟ್ರೋಲ್ ಪ್ರಸನ್ನ, ಅಮರನಾಥ್ ಆರಾಧ್ಯಾ, ಕರುಣಾಕರ್, ಕೃಷ್ಣಕುಮಾರ್ ಮುಂತಾದವರಿದ್ದಾರೆ. ಋಷಿಕುಮಾರ್ ಸ್ವಾಮೀಜಿ ಪುತ್ರಿ ಲಿಖಿತ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಆರ್ಯನ್’ ಚಿತ್ರಕ್ಕೆ ಮೂರನೇ ಹಂತಕ್ಕೆ

  ಆರ್ಯನ್’ ಚಿತ್ರಕ್ಕೆ ಮೂರನೇ ಹಂತಕ್ಕೆ

  ಡಿ.ಕೇಶವ್ ಫಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ `ಅರ್ಯನ್' ಚಿತ್ರದ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

  ಚಿತ್ರ ಸಿದ್ದವಾಗುವಷ್ಟರಲ್ಲೇ 'ಅರ್ಯನ್' ಚಿತ್ರದ ನಿರ್ದೇಶಕ ಡಿ.ರಾಜೇಂದ್ರಬಾಬು ನಿಧನರಾಗಿದ್ದು ನೋವಿನ ಸಂಗತಿ. ಈಗ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಚಿ.ಗುರುದತ್ ಹೊತ್ತಿದ್ದಾರೆ.

  ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಮ್ಯ. ಶರತ್‍ಬಾಬು, ಬುಲೆಟ್ ಪ್ರಕಾಶ್, ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ 'ಅರ್ಯನ್' ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.

  ಹಿರಿಯ ನಟ ಶಿವರಾಂಗೆ ಪೆಟ್ಟು

  ಹಿರಿಯ ನಟ ಶಿವರಾಂಗೆ ಪೆಟ್ಟು

  ಹಿರಿಯ ನಟ ಶಿವರಾಂ ಅವರು ಸೋಮವಾರ ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅವರಿಗೆ ಒಂದು ವಾರದ ವಿಶ್ರಾಂತಿ ಬೇಕು ಎಂದಿರುವ ವೈದ್ಯರು, ಆತಂಕ ಪಡುವ ಯಾವುದೇ ಕಾರಣವಿಲ್ಲ. ಅಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ. spinal cordಗೆ ಪೆಟ್ಟು ಬಿದ್ದಿದ್ದು ವಿವಿಧ ರೀತಿ ಪರೀಕ್ಷೆಗೆ ಶಿವರಾಂ ಅವರನ್ನು ಒಳಪಡಿಸಲಾಗಿದೆ.

  ಮುಸುರಿ ವೆಬ್ ಸೈಟ್ ಅನಾವರಣ

  ಮುಸುರಿ ವೆಬ್ ಸೈಟ್ ಅನಾವರಣ

  ಮುಸುರಿ ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ವೆಬ್ ಸೈಟ್ ಅನಾವರಣಗೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಇಲ್ಲಿ ಓದಿರುತ್ತೀರಿ.

  'ಸರ್ಕಾರದ ಕಡೆಯಿಂದ ಅವರಿಗೆ ಯಾವುದೇ ಪ್ರಶಸ್ತಿ ಸಿಗದೇ ಇರುವುದು ಖೇದಕರ ಸಂಗತಿ" ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಹಿರಿಯ ಕಲಾವಿದರ ವೆಬ್ ಸೈಟ್ ಆರಂಭಿಸುತ್ತೇವೆ ಎಂದಿರುವ ಚಿತ್ರಲೋಕ ವೆಬ್ ಸೈಟ್ ಸಂಪಾದಕ ಕೆ.ಎಂ.ವೀರೇಶ್ ಜತೆಗೆ ಮುಸುರಿ ಅವರ ಮಕ್ಕಳು ಹಾಗೂ ಕೆಎಫ್ ಸಿಸಿ ಅಧಿಕಾರಿಗಳು ವೆಬ್ ಸೈಟ್ ಅನಾವರಣ ಮಾಡಿದ ಚಿತ್ರ ಇಲ್ಲಿದೆ ನೋಡಿ

  English summary
  Kannada Films news Bytes : Vijay Raghavendra's directorial debut, shooting will start from November 25. Veteran actor Shivaram, popularly known as Shivaramanna in the Kannada film industry sustained injury to his spinal cord after a fall and advised to take rest for a week and many cine bytes from Kannada film industry

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X