»   » 'ಕನ್ನಡ ಚಿತ್ರಗಳ ಚೈತ್ರಕಾಲ' ವಿಶೇಷ ಕಾರ್ಯಕ್ರಮಕ್ಕೆ ನೀವೂ ಬನ್ನಿ

'ಕನ್ನಡ ಚಿತ್ರಗಳ ಚೈತ್ರಕಾಲ' ವಿಶೇಷ ಕಾರ್ಯಕ್ರಮಕ್ಕೆ ನೀವೂ ಬನ್ನಿ

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ಪರ್ವ ಕಾಲ ಬಂದಂತಾಗಿದ್ದು, ಹೊಸಬರ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿವೆ. ರಾಮ್ ರೆಡ್ಡಿ ಅವರ 'ತಿಥಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ನಂತರ ಇದೀಗ 'ಯು-ಟರ್ನ್', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮತ್ತು 'ಕರ್ವ' ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿವೆ.

ಇದೀಗ ಈ ಬಗ್ಗೆ ಕನ್ನಡ ಚಲನಚಿತ್ರ ಅಕಾಡೆಮಿಯು ಜೂನ್ 13, ಸೋಮವಾರದಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರು ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ "ಕನ್ನಡ ಚಿತ್ರದ ಚೈತ್ರಕಾಲ - ಸಿನಿಮಾವಲೋಕನ" ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ.[KFCCಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ]


Kannada film industry on a new path

ಈ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಉದಯವಾಣಿಯ ಪುರವಣಿ ಸಂಪಾದಕ ಹಾಗೂ ಚಿತ್ರ ಸಾಹಿತಿ ಜೋಗಿ.


ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಬಿ-ಟಿವಿ ಸಾಂಸ್ಕೃತಿಕ ವಿಭಾಗದ ಸದಾಶಿವ ಶೆಣೈ, ಪ್ರಜಾವಾಣಿ ಮುಖ್ಯ ಉಪ ಸಂಪಾದಕ ಚ.ಹ. ರಘುನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಮುಂತಾದವರು ಪಾಲ್ಗೊಳ್ಳಲಿದ್ದಾರೆ.[ಸಿನಿಮಾ ತಿಥಿ ಮಾಡ್ಬೇಡಿ ಸ್ವಾಮಿ, ತಿಥಿಯಂಥ ಸಿನಿಮಾ ಮಾಡಿ]


Kannada film industry on a new path

ಈ ಕಾರ್ಯಕ್ರಮದಲ್ಲಿ ಯುವ ನಿರ್ದೇಶಕರುಗಳಾದ 'ತಿಥಿ' ಚಿತ್ರದ ನಿರ್ದೇಶಕ ರಾಮ್ ರೆಡ್ಡಿ, 'ಯು- ಟರ್ನ್' ನಿರ್ದೇಶಕ ಪವನ್ ಕುಮಾರ್, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್, 'ಕರ್ವ' ಚಿತ್ರದ ನಿರ್ದೇಶಕ ನವನೀತ ಹಾಗೂ 'ಲಾಸ್ಟ್ ಬಸ್' ಚಿತ್ರದ ನಿರ್ದೇಶಕ ಅರವಿಂದ ಮುಂತಾದವರು ಭಾಗವಹಿಸಲಿದ್ದಾರೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

English summary
Kannada film industry on a new path. Formula Films 2 new formulas by Karnataka Chalanachitra Academy is organised Mahadev Desai Hall, Gandhi Bhavan, Kumara park road in Bengaluru on June 13th, 2016, Monday at 10.30 AM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada