»   » 3 ತಿಂಗಳ ಕನ್ನಡ ಚಿತ್ರರಂಗ : ಗೆದ್ದಿದ್ದು 'ಟಗರು', ಬಿದ್ದಿದ್ದು ಹಲವರು

3 ತಿಂಗಳ ಕನ್ನಡ ಚಿತ್ರರಂಗ : ಗೆದ್ದಿದ್ದು 'ಟಗರು', ಬಿದ್ದಿದ್ದು ಹಲವರು

Posted By:
Subscribe to Filmibeat Kannada
ಹಿಟ್ ಆದ ಸಿನಿಮಾ ಎಷ್ಟು, ಫ್ಲಾಪ್ ಆದ ಸಿನಿಮಾಗಳು ಎಷ್ಟು| sandalwood's hits and flops| FImibeat Kannada

ಈ ವರ್ಷದ ಮೊದಲ ಮೂರು ತಿಂಗಳು ಮುಗಿದಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಕನ್ನಡ ಚಿತ್ರರಂಗದ ಸ್ಥಿತಿ ಹೇಗಿತ್ತು ಅಂತ ನೋಡುವುದಾರೆ ಅಲ್ಲಿ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳ ಸಂಖ್ಯೆಯೇ ಅಧಿಕವಾಗಿದೆ.

ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ಬೃಹಸ್ಪತಿ' ಸಿನಿಮಾದ ಮೂಲಕ 2018ರ ಕನ್ನಡ ಚಿತ್ರರಂಗದ ಖಾತೆ ತೆರೆದುಕೊಂಡಿತ್ತು. ಈ 3 ತಿಂಗಳಲ್ಲಿ ಕನ್ನಡದಲ್ಲಿ 64 ಸಿನಿಮಾ ಬಿಡುಗಡೆಯಾಗಿವೆ. ಅಂದರೆ 91 ದಿನಗಳಲ್ಲಿ 64 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಇವುಗಳ ಪೈಕಿ ಶಿವರಾಜ್ ಕುಮಾರ್ ನಟನೆಯ 'ಟಗರು' ಮತ್ತು ಹೊಸಬರ 'ಗುಳ್ಟು' ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.

ಪೊಗರು ತುಂಬಿದ ಟಗರಿಗೆ ವಿಮರ್ಶಕರು ಕ್ಲೀನ್ ಬೌಲ್ಡ್

ಅಂದಹಾಗೆ, ಕಳೆದ ಮೂರು ತಿಂಗಳ ಕನ್ನಡ ಚಿತ್ರರಂಗದ ಸಂಪೂರ್ಣ ಲೆಕ್ಕಾಚಾರ ಮುಂದಿದೆ ಓದಿ...

64 ಸಿನಿಮಾಗಳು ಬಿಡುಗಡೆ

ಈ ಮೂರು ತಿಂಗಳಿನಲ್ಲಿ ಕನ್ನಡದ 64 ಸಿನಿಮಾಗಳು ತೆರೆಗೆ ಬಂದಿವೆ. ವಾರಕ್ಕೆ ಸರಾಸರಿ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಫೆಬ್ರವರಿ 2ರಂದು ಬರೋಬ್ಬರಿ 7 ಸಿನಿಮಾ ರಿಲೀಸ್ ಆಗಿತ್ತು. ಆದರೆ ಆ ಏಳು ಸಿನಿಮಾಗಳು ಕೂಡ ಮಕಾಡೆ ಮಲಗಿತು. ಪ್ರತಿ ವಾರ ಕೂಡ ಚಿತ್ರಮಂದಿರಕ್ಕೆ ಹೊಸ ಹೊಸ ಸಿನಿಮಾಗಳು ತೇಲಿ ಬರುತ್ತಿದ್ದವು.

50 ದಿನ ಓಡಿದ ಸಿನಿಮಾಗಳು

ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾ ಈ ವರ್ಷದ ಹಿಟ್ ಸಿನಿಮಾಗಳ ಪೈಕಿ ಒಂದು. ಫೆಬ್ರವರಿ 23ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೆ 50 ದಿನ ಪೂರೈಸಿತ್ತು. ಇಂದಿಗೂ ಕೂಡ 'ಟಗರು' ಸಿನಿಮಾ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ತುಂಬಿಸುತ್ತಿದೆ. ಇನ್ನು 'ಟಗರು' ಚಿತ್ರವನ್ನು ಹೊರತು 'ರಾಜು ಕನ್ನಡ ಮೀಡಿಯಂ' ಕೂಡ ಕುಂಟುತ್ತ.. ಕುಂಟುತ್ತ.. ಐವತ್ತು ದಿನದ ಗಡಿ ದಾಟಿತ್ತು.

ನಿರೀಕ್ಷೆ ಹುಸಿಗೊಳಿಸಿದ ಸಿನಿಮಾಗಳು

ಈ ವರ್ಷ ಕೆಲವು ಸಿನಿಮಾಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದವು. ಅವುಗಳ ಪೈಕಿ 'ಕನಕ', 'ಹಂಬಲ್ ಪೊಲಿಟಿಷಿಯನ್ ನಾಗರಾಜ್', 'ಬೃಹಸ್ಪತಿ' 'ಜಾನಿ ಜಾನಿ ಎಸ್ ಪಪ್ಪಾ' 'ಯೋಗಿ ದುನಿಯಾ' 'ರಾಜರಥ' 'ಪ್ರೇಮ ಬರಹ' ಸಿನಿಮಾಗಳು ಪ್ರಮುಖವಾಗಿದೆ. ರಿಲೀಸ್ ಮೊದಲು ದೊಡ್ಡ ನಿರೀಕ್ಷೆ ಹೊಂದಿದ್ದ ಈ ಸಿನಿಮಾಗಳು ಕೊನೆಗೆ ನಿರಾಸೆ ಮೂಡಿಸಿದವು. ಈ ಎಲ್ಲ ಚಿತ್ರಗಳು ದೊಡ್ಡ ಹಿಟ್ ಆಗಲಿಲ್ಲ.

ಫ್ಲಾಪ್ ಸಿನಿಮಾಗಳು

ಬಿಡುಗಡೆಯಾದ 64 ಸಿನಿಮಾಗಳ ಪೈಕಿ ಶೇಕಡ 90 % ಸಿನಿಮಾಗಳು ಸೋತಿವೆ. ಅವುಗಳಲ್ಲಿ 'ಮರಿ ಟೈಗರ್', 'ದೇವ್ರಂತ ಮನುಷ್ಯ', 'ರಾಜಸಿಂಹ', 'ಸಂಹಾರ' 'ದಂಡುಪಾಳ್ಯ 3' ಸಿನಿಮಾಗಳು ಪ್ರಮುಖವಾಗಿದೆ. ಈ ಚಿತ್ರಗಳ ಜೊತೆಗೆ ಸಾಕಷ್ಟು ಸಿನಿಮಾಗಳನ್ನು ಜನ ಹಿಂದು ಮುಂದು ನೋಡದೆ ತಿರಸ್ಕಾರ ಮಾಡಿದ್ದಾರೆ.

'ಗುಳ್ಟು' ಹೊಸ ಪ್ರಯತ್ನ

ಸದ್ಯಕ್ಕೆ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ 'ಗುಳ್ಟು' ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಸಿನಿಮಾದಲ್ಲಿ ಇರುವ ಹೊಸ ರೀತಿಯ ಕಥೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಟ ಯಶ್ ಕೂಡ ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದಾರೆ

2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

English summary
Kannada film industry predicts in 2018 first qatar : Among 64 movies Shiva Rajkumar's 'Tagaru' movie completed 50 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X