For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಚಿತ್ರರಂಗ?

  |
  Kurukshetra Movie: ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಕನ್ನಡ ಚಿತ್ರರಂಗ

  ಸ್ಯಾಂಡಲ್ ವುಡ್ ನ ನಿರ್ಮಾಪಕ ಮುನಿರತ್ನ ತೆಗೆದುಕೊಂಡಿರುವ ನಿರ್ಧಾರ ಚಿತ್ರರಂಗದ ಅನೇಕರ ಬೇಸರಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. 'ಕುರುಕ್ಷೇತ್ರ' ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳಿಂದ ಕಾಯುತ್ತಿದ್ದವರಿಗೆ ರಿಲೀಸ್ ಡೇಟ್ ಸಂತಸ ಮೂಡಿಸುವ ಬದಲು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

  ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಇನ್ನು ಎರಡು ದೊಡ್ಡ ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡಿಕೊಂಡಿದೆ. ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಮತ್ತು ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ. ಅದೆ ದಿನ ಕುರುಕ್ಷೇತ್ರ ಸಿನಿಮಾ ಕೂಡ ಎಂಟ್ರಿ ಕೊಡುತ್ತಿದೆ.

  'ಕುರುಕ್ಷೇತ್ರ' ವಿಚಾರಕ್ಕೆ ಮುನಿರತ್ನ ಸಿಕ್ಕಾಪಟ್ಟೆ ಟ್ರೋಲ್: ಯಾಕೆ ಹೀಗೆ ಆಯ್ತು?

  ಮುನಿರತ್ನ ಅವರಿಗೆ ಈ ಎರಡು ಸಿನಿಮಾಗಳು ರಿಲೀಸ್ ಆಗುತ್ತಿರುವುದು ಗೊತ್ತಿದ್ದರು ಅವತ್ತೆ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಮಾಡುತ್ತಿರುವುದು ಒಮ್ಮೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜೊತೆಗೆ ಬಹುತೇಕರ ಬೇಸರಕ್ಕೂ ಕಾರಣವಾಗಿದೆ. ಮುಂದೆ ಓದಿ..

  ಮುನಿರತ್ನ ಅವರಿಗೆ ಅರ್ಥವಾಗಬೇಕು

  ಮುನಿರತ್ನ ಅವರಿಗೆ ಅರ್ಥವಾಗಬೇಕು

  ಮುನಿರತ್ನ ಅವರು ನಿರ್ಮಾಪಕ ಸಂಘದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಬೇರೆಯವರ ಕಷ್ಟ ಅರ್ಥವಾಗಬೇಕು. ದೊಡ್ಡ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುವುದರಿಂದ ಚಿತ್ರಮಂದಿರದ ಮಾಲಿಕರಿಗೆ ಕಷ್ಟವಾಗುತ್ತೆ. ಇದರಿಂದ ಯಾರಿಗೂ ಲಾಭ ಆಗುವುದಿಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದಕ್ಕಿಂತ ಸ್ವಲ್ಪ ದಿನಗಳ ಅಂತರ ಇದ್ದರೆ ನಿರ್ಮಾಪಕರಿಗೂ ಹಾಗೂ ಚಿತ್ರಮಂದಿರದ ಮಾಲಿಕರು ಒಳ್ಳೆಯದು. ವರ್ಷದಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುವುದೆ ಕಡಿಮೆ. ಅಂತಹದ್ರಲ್ಲಿ ಒಟ್ಟೊಟ್ಟಿಗೆ ತೆರೆಗೆ ಬರುವುದು ಯಾರಿಗೂ ಒಳ್ಳೆಯದಲ್ಲ ಎಂದು ಚಿತ್ರರಂಗದ ಅನೇಕರು ಬೇಸರ ಹೊರಹಾಕುತ್ತಿದ್ದಾರೆ.

  'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ?

  ಕುರುಕ್ಷೇತ್ರ ರಿಲೀಸ್ ಡೇಟ್ ಮುಂದಕ್ಕೆ ಹಾಕಲಿ

  ಕುರುಕ್ಷೇತ್ರ ರಿಲೀಸ್ ಡೇಟ್ ಮುಂದಕ್ಕೆ ಹಾಕಲಿ

  'ಕುರುಕ್ಷೇತ್ರ' ರಿಲೀಸ್ ಡೇಟನ್ನು ಮುಂದಕ್ಕೆ ಹಾಕಿದ್ರೆ ಒಳ್ಳೆಯದು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಪೈಲ್ವಾನ್' ಮತ್ತು 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳು ಮೊದಲೆ ವರಮಹಾಲಕ್ಷ್ಮಿಗೆ ತೆರೆಗೆ ಬರುವುದಾಗಿ ಅನೌನ್ಸ್ ಮಾಡಿದ್ದರು. ಆದ್ರೆ ಅದೂ ಗೊತ್ತಿದ್ದರು ಮುನಿರತ್ನ ಹೀಗೆ ಮಾಡಿರುವುದು ಸರಿ ಇಲ್ಲ. ಚಿತ್ರದ ರಿಲೀಸ್ ಡೇಟನ್ನು ಮುಂದಕ್ಕೆ ಹಾಕುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಸಂಭಾವನೆ ಪಡೆಯದೇ ಕೆಲಸ ಮುಗಿಸಿಕೊಟ್ಟ ಅಂಬರೀಶ್: ಮುನಿರತ್ನ

  ಕುರುಕ್ಷೇತ್ರ, ಅವನೇ ಶ್ರೀಮನ್ನಾರಾಯಣ, ಪೈಲ್ವಾನ್

  ಕುರುಕ್ಷೇತ್ರ, ಅವನೇ ಶ್ರೀಮನ್ನಾರಾಯಣ, ಪೈಲ್ವಾನ್

  ದರ್ಶನ್ ಅಭಿನಯದ ಕುರುಕ್ಷೇತ್ರ, ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಮತ್ತು ಪೈಲ್ವಾನ್ ಸಿನಮಾಗಳು ಮರಮಹಾಲಕ್ಷ್ಮಿಗೆ ತೆರೆಗೆ ಬರಲು ಸಜ್ಜಾಗಿವೆ. ಈ ಮೊದಲೆ 'ಪೈಲ್ವಾನ್' ಸಿನಿಮಾದ ಆಗಸ್ಟ್ 9ಕ್ಕೆ ರಿಲೀಸ್ ಮಾಡುವುದಾಗಿ ನಿರ್ದೇಶಕ ಕೃಷ್ಣ ಪ್ಲಾನ್ ಮಾಡಿದ್ದರು. ಅಲ್ಲದೆ ನಿರ್ಮಾಪಕ ಪುಷ್ಕರ್ ಮಲ್ಲಿಖಾರ್ಜುನಯ್ಯ ಸಹ ಅಂದೇ ಸಿನಿಮಾ ರಿಲೀಸ್ ಮಾಡುವ ನಿರ್ಧಾರದಲ್ಲಿದ್ದರು. ಆದ್ರೀಗ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಮುನಿರತ್ನ ಯಾವುದೆ ಕಾರಣಕ್ಕೂ ಸಿನಿಮಾ ರಿಲೀಸ್ ಡೇಟನ್ನು ಮುಂದಕ್ಕೆ ಹಾಕುವುದಿಲ್ಲ ಎಂದು ಖಡಕ್ ಆಗಿಯೆ ಹೇಳಿದ್ದಾರೆ.

  ಬೇರೆ ಭಾಷೆಯಲ್ಲೂ ಕನ್ನಡ ಸಿನಿಮಾ ರಿಲೀಸ್

  ಬೇರೆ ಭಾಷೆಯಲ್ಲೂ ಕನ್ನಡ ಸಿನಿಮಾ ರಿಲೀಸ್

  ಈ ಮೂರು ಸಿನಿಮಾಗಳು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ತೆರೆಗೆ ಬರುತ್ತಿವೆ. ಪೈಲ್ವಾನ್ ಸುಮಾರು 8 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇನ್ನು ಕುರುಕ್ಷೇತ್ರ ಕೂಡ ಐದು ಭಾಷೆಯಲ್ಲಿ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ಐಂದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಆದ್ರೆ ಕುರುಕ್ಷೇತ್ರ ಮಾತ್ರ 2ಡಿ ಜೊತೆಗೆ 3ಡಿಯಲ್ಲೂ ತೆರೆಗೆ ಬರುತ್ತಿದೆ.

  English summary
  Kannada film industry some people angry about producer munirathna decision. A few days later avane srimannarayana and pailwan are also announced the release of the same day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X