»   » ಆಟ ನೋಡಲು ರೆಡಿಯಾಗಿ ಲೂಸುಗಳು ಬರ್ತಿದ್ದಾರೆ

ಆಟ ನೋಡಲು ರೆಡಿಯಾಗಿ ಲೂಸುಗಳು ಬರ್ತಿದ್ದಾರೆ

Posted By:
Subscribe to Filmibeat Kannada

ಈ ಚಿತ್ರ ಹಲವಾರು ಕಾರಣಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ. 'ಲೂಸುಗಳು...ನಾವು ನೀವು' ಚಿತ್ರ 23 ಹೊಸ ತಂತ್ರಜ್ಞರಿಂದ ಕೂಡಿದ ವಿಶೇಷ ಬಗೆಯ ಚಿತ್ರ. ಆರಂಭದಿಂದಲೂ ಕೌತುಕವನ್ನು ಕಾಪಾಡಿಕೊಂಡು ಈಗ ಚಿತ್ರಮಂದಿರಕ್ಕೆ ಇದೇ ಶುಕ್ರವಾರ (ಜು.26) ಬರುತ್ತಿದೆ.

ಶ್ರದ್ಧೆ, ಹೊಸ ಪ್ರಯತ್ನದೊಂದಿಗೆ ಮುನ್ನುಗುತ್ತಿರುವ ನವ ನಿರ್ದೇಶಕ ಅರುಣ್ ಅವರ ನೂತನ ಐಡಿಯಾಗಳೊಂದಿಗೆ ಇರುವ 'ಲೂಸುಗಳು' ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು/ಎ' ಅರ್ಹತಾ ಪತ್ರ ನೀಡಿದೆ.


ಬಿಡುಗಡೆಗೂ ಮುಂಚೆಯೇ ತಮಿಳು ಭಾಷೆಗೆ ರೀಮೇಕ್ ಹಕ್ಕುಗಳನ್ನು ಕೇಳಲಾಗಿದೆ. ಧ್ವನಿ ಸುರಳಿ, 'ಡಿಜಿಟಲ್ ಆಡಿಯೋ' ಬಿಡುಗಡೆ ವ್ಯವಸ್ಥೆಯನ್ನು ನಿರ್ದೇಶಕ ಅರುಣ್ ಮೊದಲ ಪ್ರಯತ್ನದಲ್ಲೇ ಮಾಡಿದ್ದಾರೆ. ಹದಿನೆಂಟು ಜಾಹೀರಾತು ಕಂಪನಿಗಳ ಜೊತೆ ಹಾಡುಗಳು ಹಾಗೂ ಸಿನೆಮಾದ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ ನಿರ್ದೇಶಕ ಅರುಣ್.

ಐದು ಹಾಡುಗಳನ್ನು ನಿರ್ದೇಶಕ ಅನಿಲ್ ಕುಮಾರ್, ನಂದಿನಿ ಹೊಟೇಲ್ ಉದ್ಯೋಗಿ ರಾಘವೇಂದ್ರ, ಯೋಗಿ ದೇವಗಂಗ ಹಾಗೂ ಅರುಣ್ ಅವರುಗಳು 'ಲೂಸುಗಳು' ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.

ಈ ಚಿತ್ರದಿಂದ ಕನ್ನಡ ಸಿನಿಮಾಕ್ಕೆ ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರು ಪರಿಚಯ ಆಗುತ್ತಿದ್ದಾರೆ. ಕೌಂಟೀ ಫಿಲ್ಮ್ ಮೇಕರ್ಸ್ ನಿರ್ಮಾಪಕ ಸಯ್ಯದ್ ಹುಸೇನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಬಸವರಾಜ್ ಮಂಚಯ್ಯ.

ಇದೆ ಮೊದಲಬಾರಿಗೆ ಹೆಸರಾಂತ ನಟಿ ರೇಖಾ ವೇದವ್ಯಾಸ್ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೇಖಾ ಅವರ ಜೋಡಿಯಾಗಿ ಶ್ರೀಮುರಳಿ ಇದ್ದಾರೆ. ಶ್ರೀಕಿ ಜೊತೆ ಶ್ರಾವ್ಯಾ, ಅಕುಲ್ ಬಾಲಾಜಿ ಜೋಡಿಯಾಗಿ ಐಶ್ವರ್ಯಾ ನಾಗ್ ಅಭಿನಯಿಸಿದ್ದಾರೆ.

ಶೋಭಿತಾ ರಾಯ್, ರವಿ ಚೇತನ್, ಪದ್ಮಜಾ ರಾವ್, ಮಿಮಿಕ್ರಿ ದಯಾನಂದ, ರವಿ, ಹರೀಶ್, ವಿಜಯಸಾರಥಿ ಅವರು ತಾರಗಣದಲ್ಲಿದ್ದಾರೆ. ಚಿದಾನಂದ ಎಚ್. ಕೆ. ಅವರ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವು ಸಂಕಲನ 'ಲೂಸುಗಳು' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Kannada film Loosugalu all set to release on 26th July. The film featuring three pairs - Sri Murali-Rekha, Sriki-Shravya and Akul-Aishwarya Nag. For the first time in a Kannada film ever since 'Chitra' actress Rekha has stepped for an item song with actor Sri Murali. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada