For Quick Alerts
  ALLOW NOTIFICATIONS  
  For Daily Alerts

  ಭಾರಿ ನಿರೀಕ್ಷೆಯೊಂದಿಗೆ ಬರುತ್ತಿದೆ 'ಲೂಸಿಯಾ' ಚಿತ್ರ

  By Rajendra
  |

  ಪವನ್ ಕುಮಾರ್ ಆಕ್ಷನ್ ಕಟ್ ಹೇಳಿರುವ 'ಲೂಸಿಯಾ' ಚಿತ್ರದ ಹೆಗ್ಗಳಿಕೆ ಎಂದರೆ ಬಿಡುಗಡೆಗೂ ಮುನ್ನವೇ ಹಿಟ್ ಆಗಿರುವುದು! ಹೌದು ಈ ಚಿತ್ರ ಲಂಡನ್ ಅಂತಾರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿ ಎಲ್ಲರ ಗಮನಸೆಳೆದಿತ್ತು.

  ಚಿತ್ರದ ಟ್ರೇಲರ್ ಸೂಪರ್ ಡೂಪರ್ ಹಿಟ್ ಆಗಿರುವುದು ಗೊತ್ತೇ ಇದೆ. ಜನರೇ ನಿರ್ಮಾಪಕರಾಗಿರುವ (Crowd funding movie) ಕನ್ನಡದ ಮೊಟ್ಟ ಮೊದಲ ಚಿತ್ರ 'ಲೂಸಿಯಾ'. ಈ ಚಿತ್ರ ಈಗಾಗಲೆ ಹಾಡುಗಳಿಂದ ಹಾಗೂ ವಿಭಿನ್ನ ಪ್ರೊಮೋಗಳಿಂದ ಕನ್ನಡ ಚಿತ್ರರಸಿಕರ ಗಮನಸೆಳೆದಿದೆ.

  ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಲೂಸಿಯಾ' ಚಿತ್ರ ಈ ವಾರ (ಸೆ.6) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ.

  ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್ ಮೂರ್ತಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಕೆ.ಸುಬ್ರಹ್ಮಣ್ಯ.

  ನೀನಾಸಂ ಸತೀಶ್, ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ, ಅಚ್ಯುತಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್, ವಸುಧಾ, ಪವನ್ ಕುಮಾರ್, ಪ್ರಸಾದ್, ಅರಸು, ನಾರಾಯಣಭಟ್, ಗೌರೀಶ್, ಮಹೇಶ್, ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಸರಿಸುಮಾರು 110 ಜನ ಬಂಡವಾಳ ಹೂಡಿ ನಿರ್ಮಿಸಿರುವ ಚಿತ್ರ ಇದಾಗಿದೆ. ಮಂಗಳೂರಿನ ಹಾರ್ದಿಕ ಶೆಟ್ಟಿ, ಕೇರಳದ ಶ್ರುತಿ ಚಿತ್ರದ ನಾಯಕಿಯರು. ಈಗಾಗಲೆ ಚಿತ್ರದ ಆಡಿಯೋಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. "ನೀ ತೊರೆದ ಘಳಿಗೆಯಲಿ ನನ್ನ ಎದೆಯ ತುಂಬಾ ನಿನ್ನ ಗುರುತು", "ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ" ಮತ್ತು "ಬಾನಲಿತ್ತು ಮುರಿದೊದ್ ಚಂದ್ರ" ಹಾಡುಗಳು ಸೂಪರ್ ಆಗಿವೆ. (ಒನ್ಇಂಡಿಯಾ ಕನ್ನಡ)

  English summary
  Kannada film industries first Crowd funding movie 'Lucia' slated for release on 6th September all over world. It stars Satish Neenasam,Shruthi Hariharan. The movie is awesome collaboration of love, laughter, action, drama, surrealism and tears.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X