»   » ಕಾಣದ ಕೈಗಳ ಚೆಲ್ಲಾಟಕ್ಕೆ 'ಮಳೆ' ಹಾಡುಗಳು ಬಲಿ

ಕಾಣದ ಕೈಗಳ ಚೆಲ್ಲಾಟಕ್ಕೆ 'ಮಳೆ' ಹಾಡುಗಳು ಬಲಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇತ್ತೀಚಿನ ದಿನಗಳಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ಆ ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳು ಲೀಕ್ ಆಗುತ್ತಿರುವುದು ಸಾಮಾನ್ಯವಾಗಿದೆ. ಈ ಹಿಂದೆ ತೆಲುಗಿನಲ್ಲಿ ಅತ್ತಾರಿಂಟಿಕಿ ದಾರೇದಿ ಚಿತ್ರದ ಮೊದಲರ್ಧ ರಿಲೀಸ್ ಆಗಿ ಟಾಲಿವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

  ಈಗ ಸ್ಯಾಂಡಲ್ ವುಡ್ ನಲ್ಲೂ ಈ ಕಾಯಿಲೆ ಶುರುವಾಗಿದೆ. ಆರ್ ಚಂದ್ರು ನಿರ್ಮಿಸುತ್ತಿರುವ 'ಮಳೆ' ಚಿತ್ರದ ಎಲ್ಲಾ ಹಾಡುಗಳು ಯೂಟ್ಯೂಬ್ ನಲ್ಲಿ ಲೀಕ್ ಆಗಿವೆ. ಇನ್ನೊಂದು ವಾರದಲ್ಲಿ ಹಾಸನದಲ್ಲಿ ಅಧಿಕೃತವಾಗಿ ಆಡಿಯೋ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಅಷ್ಟರಲ್ಲೇ ಎಡವಟ್ಟಾಗಿದೆ. [ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ]

  ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಚಂದ್ರು, "ಪ್ರತಿಯೊಂದನ್ನೂ ಪ್ಲಾನ್ ಪ್ರಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಚಿತ್ರದ ಹಾಡುಗಳನ್ನು ಕೇಳಿದ ಗೆಳೆಯರು ಸೂಪರ್ ಎಂದಿದ್ದರು. ಈ ಬಗ್ಗೆ ಹೆಮ್ಮೆಯೂ ಆಗಿತ್ತು. ಆದರೆ ಈ ರೀತಿ ಆಗಿರುವುದು ನಿಜಕ್ಕೂ ಬೇಸರವಾಗಿದೆ" ಎಂದಿದ್ದಾರೆ ಚಿತ್ರದ ನಿಮಾಪಕ ಆರ್ ಚಂದ್ರು.

  ಮಳೆ ಹಾಡುಗಳು ಅಧಿಕೃತವಾಗಿ ರಿಲೀಸ್ ಆಗುತ್ತಾ?

  ಈಗ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಕಾರಣ ವಿಧಿಯಿಲ್ಲದೆ ಆದಷ್ಟು ಬೇಗ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆಯಂತೆ. ಈ ಮೂಲಕ ಎಲ್ಲಾ ಮಳಿಗೆಗಳಲ್ಲೂ ಮಳೆ ಆಡಿಯೋ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತದೆ ಚಿತ್ರತಂಡ.

  ಜೆಸ್ಸಿ ಗಿಫ್ಟ್ ಸಂಗೀತದ ಐದು ಹಾಡುಗಳು

  ಸ್ಟೈಲಿಶ್ ಸ್ಟಾರ್ ಪ್ರೇಮ್ ಹಾಗೂ ಅಮೂಲ್ಯಾ ಜೋಡಿಯ ಚಿತ್ರ ಇದಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿವೆ. ಚಿತ್ರ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನು ಆರ್ ಚಂದ್ರು ಅವರೇ ಹೊತ್ತಿದ್ದಾರೆ.

  ಆಡಿಯೋ ಬಿಡುಗಡೆ ಸಮಾರಂಭ ಡೌಟು

  ಫೆಬ್ರವರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ ಆ ಬಳಿಕ ಬೇಸಿಗೆ ಸಮಯಕ್ಕೆ 'ಮಳೆ'ಯನ್ನು ಸುರಿಸುವ ಪ್ಲಾನ್ ಹಾಕಿಕೊಂಡಿದ್ದರು ನಿರ್ಮಾಪಕರು. ಆದರೆ ಈಗ ಆಡಿಯೋ ಬಿಡುಗಡೆ ಸಮಾರಂಭ ನಡೆಯುವುದು ಡೌಟು ಎನ್ನುತ್ತವೆ ಮೂಲಗಳು.

  ನವಿರಾದ ಪ್ರೇಮಕಥೆಯ ಚಿತ್ರವಿದು

  ಇದೊಂದು ಟ್ರಾವೆಲಿಂಗ್ ಸ್ಟೋರಿ. ನವಿರಾದ ಪ್ರೇಮಕಥೆಯನ್ನು ಒಳಗೊಂಡಿದ್ದು ಚಂದ್ರು ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ತೇಜಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ತೇಜಸ್ ಆತ್ಮೀಯ ಗೆಳೆಯನಾಗಿರುವ ಕಾರಣ ಅವರ ಹೆಗಲಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ ಚಂದ್ರು.

  ಚಿತ್ರತಂಡಕ್ಕೆ ಶಾಕ್ ನೀಡಿದ ಲೀಕೇಜ್

  ಈ ಚಿತ್ರದಲ್ಲಿ ಮಳೆ ಸಹ ಪ್ರಮುಖ ಪಾತ್ರವಹಿಸುತ್ತದಂತೆ. ಹಾಗಾಗಿ ಶೀರ್ಷಿಕೆ 'ಮಳೆ' ಎಂದು ಇಡಲಾಗಿದೆ. ಸಾಕಷ್ಟು ಸಾರಿ ಚಿತ್ರೀಕರಣಕ್ಕೂ 'ಮಳೆ' ತೊಂದರೆ ಕೊಟ್ಟಿದೆಯಂತೆ. ಈಗ ಹಾಡುಗಳು ಲೀಕ್ ಆಗಿದ್ದು ಚಿತ್ರಕ್ಕೆ ಇನ್ನೊಂದು ದೊಡ್ಡ ಶಾಕ್ ನೀಡಿದಂತಾಗಿದೆ.

  English summary
  The audio songs of Stylish Star Prem and Amoolya lead upcoming film 'Male' has been leaked on the Youtube. The team was planning to release the audio of the film in a public function to be held in Hassan, music by Jassie Gift

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more