»   » ಕನ್ನಡದ ಮೇಷ್ಟ್ರು ಚಿತ್ರದ ನಾಯಕಿ ಆತ್ಮಹತ್ಯೆಗೆ ಯತ್ನ

ಕನ್ನಡದ ಮೇಷ್ಟ್ರು ಚಿತ್ರದ ನಾಯಕಿ ಆತ್ಮಹತ್ಯೆಗೆ ಯತ್ನ

Posted By:
Subscribe to Filmibeat Kannada
ಡೈನಾಮಿಕ್ ಸ್ಟಾರ್ ದೇವರಾಜ್ ಮುಖ್ಯಭೂಮಿಕೆಯಲ್ಲಿದ್ದ 'ಮೇಷ್ಟ್ರು' ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ಪೋಷಿಸಿದ್ದ ಸೂಜಿ ಬಾಲಾ ಎಂಬ ತಾರೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 25ರಂದು ಈಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈಕೆ ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಈಕೆಯ ಕುಟುಂಬಿಕರು ಕೂಡಲೆ ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣಾಪಾಯದಿಂದ ಸೂಜಿಬಾಲಾ ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಮೂಲಗಳ ಪ್ರಕಾರ ಮದುವೆ ವಿಚಾರವಾಗಿ ಈಕೆ ಜೀವನದಲ್ಲಿ ತುಂಬ ಖಿನ್ನತೆಗೆ ಒಳಗಾಗಿದ್ದರಂತೆ. ಆಗಸ್ಟ್ 27ಕ್ಕೆ ಈಕೆಯ ಮದುವೆ ನಿಗದಿಯಾಗಿತ್ತು. ತಮಿಳಿನ ಚಲನಚಿತ್ರ ನಿರ್ದೇಶಕ ರವಿಕುಮಾರ್ ಅವರೊಂದಿಗೆ ಈಕೆಯ ಮದುವೆ ನಿಶ್ಚಯವಾಗಿತ್ತು.

ಆದರೆ ಈ ಮದುವೆ ಸೂಜಿ ಬಾಲಾಗೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಈಕೆ ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎನ್ನಲಾಗಿದೆ. ಈಗ ಈಕೆಯ ಮದುವೆ ಕ್ಯಾನ್ಸಲ್ ಆಗಿದೆ. ಸದ್ಯಕ್ಕೆ ಈಕೆಗೆ ನಾಗರ್ ಕೋಯಿಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಜಿ ಬಾಲಾ ಸದ್ಯಕ್ಕೆ ಗಂಡಾತರದಿಂದ ಪಾರಾಗಿದ್ದಾರೆ.

ಅಂದಹಾಗೆ ಮೇಷ್ಟ್ರು ಸಿನೆಮಾ ಸತ್ಯ ಘಟನೆಯಾಧಾರಿತ ಚಿತ್ರ. ಎಪ್ಪತ್ತರ ದಶಕದಲ್ಲಿ ಸ್ಕೂಲ್ ಮೇಷ್ಟ್ರು ಒಬ್ಬರು ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿರಬೇಕಾದರೆ ರೌಡಿಯೊಬ್ಬ ದಾರಿಹೋಕರಿಗೆ ತೊಂದರೆ ಕೊಡುತ್ತಿರುತ್ತಾನೆ. ಆತನನ್ನು ದಾರಿಗೆ ತಂದು ಸತ್ಪ್ರಜೆಯನ್ನಾಗಿ ಮಾಡುತ್ತಾರೆ ಸ್ಕೂಲ್ ಮಾಸ್ಟರ್ . ಇದೇ ಕತೆಯನ್ನು ನಿರ್ದೇಶಕ ಮಹದೇವು ತೆರೆಗೆ ತಂದಿದ್ದರು.

ಈ ಚಿತ್ರದಲ್ಲಿ ಸೂಜಿ ಬಾಲ ಒಂದು ಸಣ್ಣ ಪಾತ್ರ ಪೋಷಿಸಿದ್ದರು. ಕನ್ನಡದ ಈ ಒಂದು ಚಿತ್ರ ಬಿಟ್ಟರೆ ಉಳಿದಂತೆ ಈಕೆ ಅಭಿನಯದ ಬಹುತೇಕ ಚಿತ್ರಗಳು ತಮಿಳು ಚಿತ್ರರಂಗದವು. ಈಕೆಯ ಮದುವೆ ಫಿಕ್ಸ್ ಆಗಿರುವ ನಿರ್ದೇಶಕರ ಆಕ್ಷನ್ ಕಟ್ ನಲ್ಲಿ ಬರುತ್ತಿರುವ 'ಉನ್ಮಯ್' ಎಂಬ ಚಿತ್ರದಲ್ಲಿ ಸೂಜಿ ಅಭಿನಯಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Suji Bala, who has acted in Kannada film Meshtru attempted to commit suicide on August 25 by swallowing sleeping pills at her residence. She is out of danger.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada