For Quick Alerts
  ALLOW NOTIFICATIONS  
  For Daily Alerts

  'ಮಿಸ್ ಮಲ್ಲಿಗೆ' ಒಂಟಿ ಹೆಣ್ಣಿನ ಕರುಣಾಜನಕ ಕಥೆ

  By ರವಿಕಿಶೋರ್
  |

  ರಾಜ್ಯದಾದ್ಯಂತ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೇ ಸಂದರ್ಭದಲ್ಲಿ ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಂಥ ಗಹನವಾದ ವಿಷಯಗಳನ್ನು ಇಟ್ಟುಕೊಂಡು ನಿರ್ಮಿಸಿರುವ 'ಮಿಸ್ ಮಲ್ಲಿಗೆ' ಚಿತ್ರವೂ ಚಿತ್ರಮಂದಿರಕ್ಕೆ ಬರುತ್ತಿದೆ.

  ಇದೇ ಶುಕ್ರವಾರ (ಜು.25) ಮಿಸ್ ಮಲ್ಲಿಗೆ ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದ ಹಾಟ್ ಪೋಸ್ಟರ್ ಗಳು, ರೂಪಾ ನಟರಾಜ್ ಅವರ ಅರೆನಗ್ನ ಚಿತ್ರಗಳು ಪಡ್ಡೆ ಹುಡುಗರನ್ನು ಸೆಳೆಯುತ್ತಿವೆ. ನಿರೀಕ್ಷೆಯಂತೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.

  ಆದರೆ ಈ ಚಿತ್ರ ಆ ರೀತಿಯ ಚಿತ್ರ ಅಲ್ಲ. ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ತನ್ನ ಗ್ಲಾಮರ್ ನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಚೆಲುವೆ ರೂಪನಟರಾಜ್ ಈ ಚಿತ್ರದ ನಾಯಕಿ. ಹೊಸ ನಟ ರಂಜನ್ ಶೆಟ್ಟಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ.

  ಒಂಟಿ ಹೆಣ್ಣಿನ ಕಷ್ಟಗಳೇ ಚಿತ್ರದ ಕಥಾವಸ್ತು

  ಒಂಟಿ ಹೆಣ್ಣಿನ ಕಷ್ಟಗಳೇ ಚಿತ್ರದ ಕಥಾವಸ್ತು

  ಮೈಸೂರು ಮಲ್ಲಿಗೆ ಎಂದು ಆರಂಭವಾದ ಈ ಸಿನಿಮಾ ಕೊನೆಗೆ 'ಮಿಸ್ ಮಲ್ಲಿಗೆ' ಆಯಿತು. ಸಾಕಷ್ಟು ಅಡ್ಡಿ-ಆತಂಕಗಳನ್ನು ಎದುರಿಸಿ ಇದೀಗ ಬಿಡುಗಡೆಗೆಯಾಗುತ್ತಿದೆ. ಒಂಟಿ ಮಹಿಳೆಯ ಕಷ್ಟ ಏನು ಎಂದು ನಿರ್ದೇಶಕರು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ ಎನ್ನುತ್ತಾರೆ ರೂಪಾ ನಟರಾಜ್.

  ಬ್ರೇಕ್ ನಿರೀಕ್ಷೆಯಲ್ಲಿ ರೂಪಾ ನಟರಾಜ್

  ಬ್ರೇಕ್ ನಿರೀಕ್ಷೆಯಲ್ಲಿ ರೂಪಾ ನಟರಾಜ್

  ಈ ಚಿತ್ರ ನನಗೆ ನಿಜಕ್ಕೂ ತಮಗೆ ಒಂದು ಬ್ರೇಕ್ ನೀಡುತ್ತದೆ ಎಂಬ ವಿಶ್ವಾಸದಲ್ಲಿ ರೂಪಾ ನಟರಾಜ್ ಇದ್ದಾರೆ. ಪೋಸ್ಟರ್ ನೋಡಿ ಸೆಕ್ಸ್ ಸಿನಿಮಾ ಇರ್ಬೇಕು ಅಂತ ಯಾರೂ ಬರಬೇಡಿ. ಒಂದು ಒಳ್ಳೇ ಸಿನಿಮಾ ಅಂತ ಬಂದರೆ ನಿಜಕ್ಕೂ ಒಳ್ಳೇ ಮನರಂಜನೆ ಸಿಗುತ್ತದೆ ಎನ್ನುತ್ತಾರೆ ಅವರು.

  ರಂಜನ್ ಶೆಟ್ಟಿಗೆ ಇದು ಮೊದಲ ಸಿನಿಮಾ

  ರಂಜನ್ ಶೆಟ್ಟಿಗೆ ಇದು ಮೊದಲ ಸಿನಿಮಾ

  ನಾಲ್ಕೈದು ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಂಜನ್ ಶೆಟ್ಟಿ ಅವರಿಗೆ ಇದು ಮೊದಲನೆಯ ಸಿನಿಮಾ. ಹೀರೋ ಆಗ್ತೀನಿ ಅಂತ ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಒಳ್ಳೇ ಮೆಸೇಜ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬರುತ್ತಿರುವುದು ಅವರಿಗೆ ತುಂಬಾನೆ ಖುಷಿ ಕೊಟ್ಟಿದೆ.

  ಆಸ್ಕರ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ

  ಆಸ್ಕರ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ

  ಚಾಮುಂಡೇಶ್ವರಿ ಮೂವೀಸ್ ಮತ್ತು ವಿಸ್ಮಯ ವಿಷುಯಲ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮಿಸ್ ಮಲ್ಲಿಗೆ ಚಿತ್ರಕ್ಕೆ ಆಸ್ಕರ್ ಕೃಷ್ಣ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

  ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ

  ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ

  ಈ ಚಿತ್ರಕ್ಕೆ ಎಸ್.ನಾಗು ಸಂಗೀತ, ಸೂರ್ಯಕಾಂತ್ ಛಾಯಾಗ್ರಹಣ, ರಘು ಮನು ನೃತ್ಯ ನಿರ್ದೇಶನ, ಕೃಷ್ಣಕುಮಾರ್, ಕೃಷ್ಣ ಸಾಹಿತ್ಯ, ಕುಮಾರ್ ಸಂಕಲನವಿದೆ. ರಂಜನ್ ಶೆಟ್ಟಿ, ರೂಪಾ ನಟರಾಜ್, ಶ್ರೀ, ವಿಕ್ರಮ್, ದಶವಾರ ಚಂದ್ರು, ಮಾಸ್ಟರ್ ರಾಕಿನ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

  English summary
  Kannada movie 'Miss Mallige' is all set to release on 25th July. The movie is about an innocent girl, who faces tough time, as she grows up. It is a good mixture of reality and imagination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X