»   » ಕನ್ನಡ ಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಯತ್ನ; ಅಸಲಿ ಕಾರಣವೇನು?

ಕನ್ನಡ ಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಯತ್ನ; ಅಸಲಿ ಕಾರಣವೇನು?

Posted By:
Subscribe to Filmibeat Kannada

ಇಂಡಸ್ಟ್ರಿ ಬಗ್ಗೆ ಗೊತ್ತಿಲ್ಲದೇ ಇರುವವರು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಬಾರದು. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿರುವ ಅನೇಕ ಕಷ್ಟ-ಸಂಕಷ್ಟಗಳನ್ನ ಎದುರಿಸುವ ಶಕ್ತಿ ಇದೆ ಅನ್ನೋರು ಮಾತ್ರ ಇಲ್ಲಿ ಕಾಲಿಡಬೇಕು.

ಸಾಲ ಮಾಡಿ ಸಿನಿಮಾ ಮಾಡ್ತೀನಿ ಅನ್ನೋರು, ಕೋಟಿಗಟ್ಟಲೆ ಸಾಲ ತೀರಿಸುವ ಗಟ್ಟಿ ಗುಂಡಿಗೆ ಇರಬೇಕು. ಯಾವುದೂ ಇಲ್ಲದೆ ಹೋದರೆ ಮುಂದಿನ ದಾರಿ ಕಷ್ಟ ಕಷ್ಟ. ಈಗ ನಿರ್ಮಾಪಕ ಶಶಿಕುಮಾರ್ ಗೆ ಬಂದಿರುವ ಸಂಕಷ್ಟ ಅಂಥದ್ದೇ.['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]


ಹೊಸ ಬರ ಸಿನಿಮಾ ಮಾಡಿ ಹತ್ತತ್ರ ಮೂರು ಮುಕ್ಕಾಲು ಕೋಟಿ ಬಂಡವಾಳ ಹಾಕಿ, ಸಾಲ ಮಾಡಿ, ಚಿತ್ರವನ್ನು ರಿಲೀಸ್ ಮಾಡಲು ಆಗದೆ, ಮುಂದಿನ ದಾರಿ ತೋಚದೆ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಮುಂದೆ ಓದಿ....


ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನ

ಕನ್ನಡ ಚಿತ್ರ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಅವರ ನಿವಾಸದಲ್ಲಿ ನಿನ್ನೆ ಮಧ್ಯಾಹ್ನ ವಿಷ ಸೇವಿಸಿ ಸೂಸೈಡ್ ಅಟೆಂಪ್ಟ್ ಮಾಡಿದ್ದಾರೆ.[ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ]


ಸುಂಕದಕಟ್ಟೆ ಆಸ್ಪತ್ರೆಗೆ ದಾಖಲು

ತಕ್ಷಣ ಅವರ ಪರಿಸ್ಥಿತಿ ಕಂಡ ಕುಟುಂಬದವರು ಸುಂಕದಕಟ್ಟೆಯ ಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ನಿರ್ಮಾಪಕ ಶಶಿಕುಮಾರ್ ಪ್ರಾಣಪಾಯದಿಂದ ಪಾರಾಗಿದ್ದಾರೆ.


ಇಲಿ ಪಾಷಾಣ ಸೇವಿಸಿರುವ ನಿರ್ಮಾಪಕ

ಇಲಿ ಪಾಷಾಣವನ್ನು ಸೇವಿಸಿ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.


ಯಾವ ಚಿತ್ರ ನಿರ್ಮಿಸಿದ್ರು?

ಹೊಸ ಪ್ರತಿಭೆ ಸಂದೀಪ್ ಮತ್ತು ಸೋನು ಗೌಡ ನಟಿಸಿರುವ 'ಹಾಫ್ ಮೆಂಟ್ಲು' ಚಿತ್ರದ ನಿರ್ಮಾಪಕ ಶಶಿಕುಮಾರ್.


ಒಂದುವರೆ ವರ್ಷದಿಂದ ಚಿತ್ರ ರಿಲೀಸ್ ಆಗಿಲ್ಲ!

ಸಂದೀಪ್ ಮತ್ತು ಸೋನು ಗೌಡ ಮುಖ್ಯ ಭೂಮಿಕೆಯಲ್ಲಿರುವ 'ಹಾಫ್ ಮೆಂಟ್ಲು' ಸಿನಿಮಾ ರೆಡಿಯಾಗಿ ಒಂದು ವರ್ಷದ ಮೇಲಾಗಿದೆ. ಹೀಗಿದ್ರೂ, ಚಿತ್ರ ಬಿಡುಗಡೆ ಆಗಿಲ್ಲ. ಹೊಸಬರ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ಶಶಿಕುಮಾರ್ ಸಂಕಷ್ಟ ಎದುರಿಸಿದ್ದಾರೆ.


ಹುಚ್ಚನ ಲವ್ ಸ್ಟೋರಿ ಇದು!

ಇಷ್ಟಕ್ಕೂ 'ಹಾಫ್ ಮೆಂಟ್ಲು' ಕಥೆ ಏನೆಂದರೆ ಹುಡುಗಿಗಾಗಿ, ಹುಡುಗಿಯಿಂದ, ಹುಡುಗಿಗೋಸ್ಕರ ಹುಚ್ಚನಾದ ಹುಡುಗನ ಹೃದಯ ವಿದ್ರಾವಕ ಕಥೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಯುವ ಪ್ರತಿಭೆ ಲಕ್ಷ್ಮಿ ದಿನೇಶ್.


ಕೋಟಿಗಟ್ಟಲೆ ಬಂಡವಾಳ

ವಿಭಿನ್ನವಾಗಿ ಅಷ್ಟೇ ಕ್ವಾಲಿಟಿಯಲ್ಲಿ ರೆಡಿಯಾಗಿರುವ 'ಹಾಫ್ ಮೆಂಟ್ಲು' ಚಿತ್ರಕ್ಕೆ ಮೂರು ಮುಕ್ಕಾಲು ಕೋಟಿ ಬಂಡವಾಳ ಹೂಡಿದ್ದಾರೆ ನಿರ್ಮಾಪಕ ಶಶಿಕುಮಾರ್. ಸಿನಿಮಾದಿಂದಾಗಿ ಅವರು ಕೋಟಿಗಟ್ಟಲೆ ಸಾಲ ಮಾಡಿಕೊಂಡಂತೆ ಆಗಿದೆ. ಅದಕ್ಕೆ ಬಡ್ಡಿ, ಅಸಲು ತೀರಿಸಲಾಗಿದೆ ಒದ್ದಾಡುತ್ತಿದ್ದಾರೆ.


ವಿತರಣೆ ಮಾಡುವಲ್ಲಿ ಸಂಕಷ್ಟ!

ಮೂರು ಮುಕ್ಕಾಲು ಕೋಟಿ ಬಂಡವಾಳದ ಜೊತೆಗೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಪಬ್ಲಿಸಿಟಿಗಾಗಿ 50 ರಿಂದ 80 ಲಕ್ಷ ಬೇಕು ಎಂದಿದ್ದಾರೆ ಗಾಂಧಿನಗರದವರು. ಹಳೆ ಸಾಲ, ಜೊತೆಗೆ 80 ಲಕ್ಷ ಎಕ್ಸ್ ಟ್ರಾ ಹೊಂದಿಸಲು ಆಗದೆ ಶಶಿಕುಮಾರ್ ಬೇಸೆತ್ತು ಆತ್ಮಹತ್ಯೆ ಮಾಡಿಕೊಳ್ಳುವ ದುಡುಕು ನಿರ್ಧಾರ ಮಾಡಿಬಿಟ್ಟರು.


ಆತ್ಮಹತ್ಯೆಯೊಂದೇ ಪರಿಹಾರ?

ತಮ್ಮ ಸಾವಿನಿಂದವಾದರೂ, ಚಿತ್ರ ಬಿಡುಗಡೆ ಮಾಡಲು ಯಾರಾದರೂ ಮುಂದೆ ಬರಬಹುದು ಎಂಬ ನಂಬಿಕೆ ಮೇಲೆ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ.


ಯಾವುದಕ್ಕೂ ಕಮ್ಮಿ ಮಾಡಿರ್ಲಿಲ್ಲ!

ಹೊಸಬರ ಚಿತ್ರವೇ ಆದರೂ, ತಮ್ಮ ಮೊದಲ ಚಿತ್ರವಾದರೂ ನಿರ್ಮಾಪಕ ಶಶಿಕುಮಾರ್ ಯಾವುದಕ್ಕೂ ಕಮ್ಮಿ ಮಾಡಿರ್ಲಿಲ್ಲ. ತಮ್ಮ ಚೊಚ್ಚಲ ಚಿತ್ರ ಚೆನ್ನಾಗಿ ಮೂಡಿಬರಬೇಕು, ಪ್ರೇಮಿಗಳಿಗೆ ಒಂದು ಸಂದೇಶ ನೀಡಬೇಕು, ಒಂದೊಳ್ಳೆ ಕನ್ನಡ ಸಿನಿಮಾ ಮಾಡಬೇಕು ಅಂತ ಶಶಿಕುಮಾರ್ ಕೋಟಿ ಕೋಟಿ ದುಡ್ಡು ಸುರಿದಿದ್ದರು. ಹೀಗಿದ್ದರೂ ವರ್ಷಗಳು ಉರುಳಿದರೂ, ಚಿತ್ರ ಬಿಡುಗಡೆ ಆಗಿಲ್ಲ ಎನ್ನುವ ಖಿನ್ನತೆ ಅವರನ್ನ ಆತ್ಮಹತ್ಯೆ ದಾರಿಗೆ ದೂಡಿದೆ.


English summary
Kannada Film 1/2 Mentlu (Half Mentlu) producer Shashi Kumar attempts to commit suicide on Thursday (February 18th) in Kamakshipalya, Bengaluru.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X