»   » ವಂಚನೆ ಆರೋಪದಡಿ ನಿರ್ಮಾಪಕಿ ಜಯಶ್ರೀ ದೇವಿ ಅರೆಸ್ಟ್

ವಂಚನೆ ಆರೋಪದಡಿ ನಿರ್ಮಾಪಕಿ ಜಯಶ್ರೀ ದೇವಿ ಅರೆಸ್ಟ್

Posted By:
Subscribe to Filmibeat Kannada

'ಶ್ರೀ ಮಂಜುನಾಥ', 'ಮುಕುಂದ ಮುರಾರಿ' ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕಿ ವಂಚನೆ ಮಾಡಿರುವ ಆರೋಪದಡಿಯಲ್ಲಿ ಪೋಲಿಸರು ಬಂಧಿಸಿದ್ದಾರೆ. ಆನಂದ್ ಎಂಬುವವರಿಗೆ 34 ಲಕ್ಷ ವಂಚನೆ ಮಾಡಿದ ಹಿನ್ನಲೆಯಲ್ಲಿ ಪ್ರೊಡ್ಯುಸರ್ ಜಯಶ್ರೀ ದೇವಿ ಅವರನ್ನ ಬಂಧಿಸಲಾಗಿದೆ. ಹನ್ನೋಂದು ವರ್ಷದ ಹಿಂದೆಯೇ ಹಣ ಪಡೆದಿದ್ದು ಆನಂದ್ ಇಲ್ಲಿಯ ವರೆಗೂ ಕಾದಿದ್ದು ಹಣ ಹಿಂತಿರುಗಿಸದ ಕಾರಣ ಪೋಲಿಸರಿಗೆ ದೂರು ನೀಡಿ ಕೋರ್ಟ್ ಮೊರೆ ಹೋಗಿದ್ದರು.

ಈ ಬಗ್ಗೆ ಚಾಮರಾಜಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಜಯಶ್ರೀ ದೇವಿ ಅವರನ್ನ ಪೋಲಿಸರು 18ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಜಯಶ್ರೀ ದೇವಿ ಆನಂದ್ ಎನ್ನುವವರಿಗೆ 34 ಲಕ್ಷದ ಚೆಕ್ ನೀಡಿದ್ದರು. ಬ್ಯಾಂಕ್ ನಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಆದ್ದರಿಂದ ಆನಂದ್ ಕೋರ್ಟ್ ಮೆಟ್ಟಿಲೇರಿದ್ದರು.

ಚೆಕ್ ಬೌನ್ಸ್ : ಹಿರಿಯ ನಿರ್ಮಾಪಕಿ ಜಯಶ್ರೀದೇವಿ ಬಂಧನ

Kannada film producer Jayashree Devi was arrested on charges of check bounce.

ಕೋರ್ಟ್ ನಿಂದ ವಾರಂಟ್ ಆಗಿದ್ದ ಹಿನ್ನಲೆ ಇಂದು ಆರೋಪಿತೆಯನ್ನ ಪೊಲೀಸರು ಬಂದಿಸಿದ್ದಾರೆ. ಹಣ ನೀಡದಿದ್ದರೆ ಒಂದು ವರ್ಷ ಜೈಲು ಎಂದು 18 ನೇ ಎಸಿಎಂಎಂ ಕೋರ್ಟ್ ನಿಂದ ಆದೇಶ ಜಾರಿ ಆಗಿತ್ತು. ಈ ಹಿಂದೆ ಜಯಶ್ರೀ ದೇವಿ ಅವರು ಶ್ರೀ ಮಂಜುನಾಥ ಸಿನಿಮಾ ನಿರ್ಮಾಣ ಮಾಡುವ ಸಮಯಲ್ಲಿಯೂ ಸುದ್ದಿ ಆಗಿದ್ದರು

ಜಯಶ್ರೀ ದೇವಿ ನಿರ್ಮಿಸಿರುವ ಶ್ರೀ ಮಂಜುನಾಥ ಚಿತ್ರಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಕೋಟಿ ಆಕ್ಷೇಪಣೆ ಸೂಚಿಸಿತ್ತು. ಹಂಪ ನಾಗರಾಜಯ್ಯ ಅವರಂಥ ಸಾಹಿತಿಗಳು, ಅಚ್ಯುತದಾಸರಂಥ ಹರಿಕಥಾದಾಸರು ಮತ್ತು ಹತ್ತಾರು ಕನ್ನಡಪರ ಸಂಘಟನೆಗಳು ದೇವಿಯವರಿಗೆ ಒಂದು ಪತ್ರ ಬರೆದು, ಚಿತ್ರದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.

Kannada film producer Jayashree Devi was arrested on charges of check bounce.

ಈ ಚಿತ್ರಕ್ಕೂ ಧರ್ಮಸ್ಥಳ ಮಂಜುನಾಥನಿಗೂ ಯಾವ ಸಂಬಂಧವೂ ಇಲ್ಲ. ಇಂಥಾ ಟೈಟಲ್ ಇಡೋದಕ್ಕೆ ಕನಿಷ್ಠ ವೀರೇಂದ್ರ ಹೆಗಡೆಯವರ ಸಮ್ಮತಿಯನ್ನೂ ಪಡೆಯಲಾಗಿಲ್ಲ. ಮಂಜುನಾಥನ ಹೆಸರಲ್ಲಿ ಕಟ್ಟುಕತೆಯನ್ನು ಸಿನಿಮಾ ಮಾಡೋದು ಮಹಾಪರಾಧ. ಹಾಗಾಗಿ ಇದೊಂದು ಕಾಲ್ಪನಿಕ ಕಥೆಯೆಂದು ಜಯಶ್ರೀದೇವಿ ಪತ್ರಿಕಾ ಜಾಹೀರಾತು ಕೊಡಬೇಕು. ಇಲ್ಲವೇ ಚಿತ್ರದ ಹೆಸರು ಬದಲಾಯಿಸಬೇಕು. ಇದು ಭಕ್ತರ ಆಗ್ರಹಿಸಿದ್ದರು.

English summary
Kannada film producer Jayashree Devi was arrested on charges of check bounce.Jayasree Devi has produced Sri Manjunath and Mukund Murari movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X