ಯಡಿಯೂರಪ್ಪ ಕೆಜೆಪಿ ಪಕ್ಷಕ್ಕೆ ನಿರ್ಮಾಪಕ ಕೆ ಮಂಜು?

ಬಹುಶಃ ಅವರು ಈಗಷ್ಟೇ ಕಣ್ಣು ಬಿಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರುವ ಸಾಧ್ಯತೆಗಳಿಗೆ. ಅವರ ಸ್ವಸ್ಥಳ ತುರುವೇಕೆರೆಯಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎನ್ನುತ್ತವೆ ಮೂಲಗಳು.
ಈಗಾಗಲೆ ಕೆ ಮಂಜು ಅವರು ವಿಜಯೇಂದ್ರ ಅವರನ್ನು ಸಂಪರ್ಕಿಸಿದ್ದು ಈ ಬಗ್ಗೆ ಮಾತುಕತೆಯೂ ನಡೆಸಿದ್ದಾರಂತೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ್ದೇ ಮೇಲುಗೈ. ಇದನ್ನು ಉದ್ದೇಶವಾಗಿಟ್ಟುಕೊಂಡೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆ ಮಂಜು ಅವರಿಗೆ ಕೆಜೆಪಿ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತುರುವೇಕೆರೆ ಕ್ಷೇತ್ರದಿಂದ ಕೊಬ್ರಿ ಮಂಜು ಏನಾದರೂ ಕಣಕ್ಕಿಳಿದರೆ ಬಿಜೆಪಿ ಪಕ್ಷವೇನು ಕೈಕಟ್ಟಿ ಕೂರುವುದಿಲ್ಲ. ನವರಸ ನಾಯಕ ಜಗ್ಗೇಶ್ ಅವರನ್ನು ಮಂಜು ವಿರುದ್ಧ ಕಣಕ್ಕಳಿಸಲಿದೆ. ಸದ್ಯಕ್ಕೆ ಜೆಡಿ(ಎಸ್) ಭದ್ರಕೋಟೆಯಾಗಿರುವ ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ ವಿರುದ್ಧ ಸೆಣೆಸುವುದು ಕೆಜೆಪಿ ಹಾಗೂ ಬಿಜೆಪಿ ಇಬ್ಬರಿಗೂ ಸವಾಲಿನ ಪ್ರಶ್ನೆ. (ಏಜೆನ್ಸೀಸ್)


Click it and Unblock the Notifications











