»   » ಕನ್ನಡ ಚಿತ್ರ ನಿರ್ಮಾಪಕ ರಾಕೇಶ್ ಜೈನ್ ಆತ್ಮಹತ್ಯೆ

ಕನ್ನಡ ಚಿತ್ರ ನಿರ್ಮಾಪಕ ರಾಕೇಶ್ ಜೈನ್ ಆತ್ಮಹತ್ಯೆ

Posted By:
Subscribe to Filmibeat Kannada
Rajesh Kumar Jain
ಕನ್ನಡ ಚಿತ್ರದ ನಿರ್ಮಾಪಕ ರಾಕೇಶ್ ಕುಮಾರ್ ಜೈನ್ ಅವರು ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ್ದಾರೆ. ಇವರು ನಿರ್ಮಿಸುತ್ತಿದ್ದ 'ಅನಾರ್ಕಲಿ' ಎಂಬ ಚಿತ್ರ ಇನ್ನೂ ನಿರ್ಮಾಣ ಹಂತದಲ್ಲಿದೆ. ಸಾಧು ಕೋಕಿಲ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ರಾಕೇಶ್ ಕುಮಾರ್ ಜೈನ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಮೂಲತಃ ಗಣಿ ಉದ್ಯಮಿಯಾಗಿದ್ದ ಇವರ ಚೊಚ್ಚಲ ನಿರ್ಮಾಣದ ಚಿತ್ರ ಅನಾರ್ಕಲಿ. ಕೈತುಂಬ ನಷ್ಟ ಅನುಭವಿಸಿ ಮೈತುಂಬ ಸಾಲವನ್ನು ಮಾಡಿಕೊಂಡಿದ್ದ ಇವರ ತಲೆ ಮೇಲೆ ಸುಮಾರು ರು.20 ಕೋಟಿಗೂ ಅಧಿಕ ಸಾಲ ಇತ್ತು ಎನ್ನಲಾಗಿದೆ.

ಬೆಂಗಳೂರಿನ ಅಮೃತನಗರದ ನಿವಾಸದಲ್ಲಿ ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ 29ರಂದು ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿ ರಾಕೇಶ್ ಅವರು ಒಂಟಿಯಾಗಿಯೇ ವಾಸಿಸುತ್ತಿದ್ದರಂತೆ.

ಇವರ ಪತ್ನಿ ಹಾಗೂ ಒಬ್ಬ ಪುತ್ರ ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಶವ ಪರೀಕ್ಷೆಯ ನಂತರ ಇವರ ದೇಹವನ್ನು ಸ್ವಕ್ಷೇತ್ರ ಹೊಸಪೇಟೆಗೆ ರವಾನಿಸಲಾಗುತ್ತದೆ. ಅವರ ಅಂತಿಮಕ್ರಿಯೆ ಅಲ್ಲಿಯೇ ನಡೆಯಲಿದೆ. ಇವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಬಹುಶಃ ಸಾಲದ ಶೂಲವೇ ಇವರ ಕೊರಳಿಗೆ ಉರುಳಾಗಿದೆ ಎಂದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ.

ಇವರು ನಿರ್ಮಿಸುತ್ತಿರುವ ಅನಾರ್ಕಲಿ ಚಿತ್ರದಲ್ಲಿ ಶ್ರೀನಗರಕಿಟ್ಟಿ, ಪ್ರಜ್ಞಾ ಹಾಗೂ ರಮ್ಯಾ ಬಾರ್ನಾ ಮುಖ್ಯಪಾತ್ರದಲ್ಲಿದ್ದಾರೆ. ಜೂನ್ 2011ರಂದು ಸೆಟ್ಟೇರಿದ ಈ ಚಿತ್ರ ರೋಮ್ಯಾನ್ಸ್ ಚಿತ್ರವಾಗಿದೆ. ಈ ಚಿತ್ರಕ್ಕೆ ಮೊದಲು ದಿಗಂತ್ ನಾಯಕ ನಟ ಎಂದಾಗಿತ್ತು. ಬಳಿಕ ಕಾರಣಾಂತರಗಳಿಂದ ಅನಾರ್ಕಲಿ ಚಿತ್ರ ಶ್ರೀನಗಕಿಟ್ಟಿ ಪಾಲಾಗಿತ್ತು. (ಏಜೆನ್ಸೀಸ್)

English summary
Kannada film producer Rakesh Kumar Jain commits suicide on 29th August at his resident in Bangalore, Amruthnagar. He has producing a Kannada movie titled as Anarkali, which is directing by Sadhu Kokila. The movie is still completed.
Please Wait while comments are loading...