For Quick Alerts
  ALLOW NOTIFICATIONS  
  For Daily Alerts

  ತಿಥಿ ಸಿನಿಮಾ ಪ್ರದರ್ಶನ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ

  By Suneetha
  |

  ಈ ಬಾರಿಯ 8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಮೊದಲ ಸಿನಿಮಾವಾಗಿ ಕನ್ನಡದ 'ತಿಥಿ' ಚಿತ್ರವನ್ನು ಪ್ರದರ್ಶಿಸುವ ಮೂಲಕ ಸಿನಿಮೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವ ಆರ್. ರೋಷನ್ ಬೇಗ್ ಅವರು ತಿಳಿಸಿದ್ದಾರೆ.

  'ಇದುವರೆಗೂ ವಿದೇಶಿ ಚಿತ್ರಗಳನ್ನು ಮೊದಲ ಸಿನಿಮಾವಾಗಿ ಪ್ರದರ್ಶಿಸಲಾಗುತಿತ್ತು. ಆದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ಆರಂಭಿಕ ಸಿನಿಮಾವಾಗಿ ಪ್ರದರ್ಶಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಚಲನಚಿತ್ರೋತ್ಸವದ ಸಿದ್ದತೆಗಳ ಬಗ್ಗೆ ಮಾಧ್ಯಮದವರಿಗೆ ವಿವರ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾಹಿತಿ ನೀಡಿದರು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

  ಇದೇ ಮೊದಲ ಬಾರಿಗೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಆಯೋಜಿಸುತ್ತಿರುವ ಜೊತೆಗೆ ಒಂದೇ ಸೂರಿನಡಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದ್ದು, ಬೆಂಗಳೂರಿನ ಓರೆಯನ್ ಮಾಲ್‌ನ 11 ಬೆಳ್ಳಿ ಪರದೆ ಹಾಗೂ ಮೈಸೂರು ಮಾಲ್‌ನ ಐನಾಕ್ಸ್ ಚಿತ್ರಮಂದಿರದ 4 ಬೆಳ್ಳಿ ಪರದೆಗಳನ್ನು ಚಿತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.[2016ರ ಸಿನಿಮೋತ್ಸವದಲ್ಲಿ ಕನ್ನಡ ಮತ್ತು ತುಳು ಚಿತ್ರಗಳ ಅಬ್ಬರ]

  ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಅವರು ಮಾತನಾಡಿ ಈ 8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 61 ದೇಶಗಳಿಂದ ಒಟ್ಟು 170 ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, 50 ಕ್ಕೂ ಹೆಚ್ಚು ದೇಶ ವಿದೇಶದ ಚಲನಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

  ಚಿತ್ರೋತ್ಸವದ ಸ್ಪರ್ಧೆಗೆ ಏಷಿಯಾ ವಿಭಾಗದಿಂದ 200 ಸಿನಿಮಾಗಳಲ್ಲಿ 12 ಸಿನಿಮಾ, ಭಾರತೀಯ ವಿಭಾಗದಲ್ಲಿ 65 ಸಿನಿಮಾಗಳಿಂದ 13 ಹಾಗೂ ಕನ್ನಡದಲ್ಲಿ 36 ಸಿನಿಮಾಗಳಿಂದ 15 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

  ಜನವರಿ 28ರಿಂದ ಫೆಬ್ರವರಿ 4ರವರೆಗೆ ನಡೆಯಲಿರುವ 8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಫಾಟನೆಯನ್ನು ಜನವರಿ 28ರಂದು ವಿಧಾನಸೌಧದ ಮುಂಭಾಗದಲ್ಲಿ ಹಾಗೂ ಸಮಾರೋಪವನ್ನು ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

  ಪತ್ರಿಕಾಗೋಷ್ಠಿಯಲ್ಲಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಎಸ್. ಚನ್ನಪ್ಪಗೌಡ, ನಿರ್ದೇಶಕ ಎನ್. ಆರ್. ವಿಶುಕುಮಾರ್, ಖ್ಯಾತ ನಿರ್ದೇಶಕ ಹಾಗೂ ಸಂಘಟನಾ ಸಮಿತಿ ಸದಸ್ಯರಾದ ಡಾ. ಗಿರೀಶ್ ಕಾಸರವಳ್ಳಿ.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]

  ಖ್ಯಾತ ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮಾಲ, ಕಾರ್ಯಕಾರಿ ಕಲಾ ನಿರ್ದೇಶಕ ಹಾಗೂ ಸಿನಿಮಾ ತಜ್ಞ ವಿದ್ಯಾಶಂಕರ್ ಹಾಗೂ ಸಿನಿಮೋತ್ಸವದ ಸಲಹೆಗಾರರಾದ ಶಂಕರ್ ಮೋಹನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಉಪಸ್ಥಿತರಿದ್ದರು.

  English summary
  The eighth Bengaluru International Film Festival (Biffes) will kick-start with the screening of 'Thithi' award winning film. The screening will take place in 11 PVR screens in Orion Mall and 4 Inox screens in Mall of Mysuru during the week-long film festival starting from Jan 28 till Feb 04

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X