»   » ಮೊದಲ ದಿನವೇ ರು. 37 ಲಕ್ಷ ಬಾಚಿದ 'ವಿಜಲ್'

ಮೊದಲ ದಿನವೇ ರು. 37 ಲಕ್ಷ ಬಾಚಿದ 'ವಿಜಲ್'

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ 'ವಿಜಲ್' ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಶಿಳ್ಳೆ ಹಾಕಿದೆ. ತಮ್ಮ ಚಿತ್ರದ ಕಲೆಕ್ಷನ್ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ನೀಡಿದ ವಿಶೇಷ ವಿವರಗಳು ಹೀಗಿವೆ.

ಮೊದಲ ದಿನವೇ 'ವಿಜಲ್' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ಮೊದಲ ದಿನವೇ 'ವಿಜಲ್' ಚಿತ್ರ ರಾಜ್ಯದಾದ್ಯಂತ ರು.37 ಲಕ್ಷ ಕಲೆಕ್ಷನ್ ಮಾಡಿದೆ ಎಂದು ಅವರು ವಿವರ ನೀಡಿದರು. (ಚಿತ್ರ ವಿಮರ್ಶೆ ಓದಿ)


ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರಾಸರಿ ಶೇ.70ರಷ್ಟು ಚಿತ್ರಮಂದಿರಗಳು ಭರ್ತಿ ಕಂಡಿವೆ. ಕರಾವಳಿ ಪ್ರದೇಶಗಳಲ್ಲಿ ಮಳೆಯ ಕಾರಣ ಕಲೆಕ್ಷನ್ ಸ್ವಲ್ಪ ಡಲ್ ಆಗಿದ್ದು ಉಳಿದಂತೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ ಪ್ರಶಾಂತ್ ರಾಜ್ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

ಸರಿಸುಮಾರು ರು.3 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಕಲೆಕ್ಷನ್ ಇದೇ ರೀತಿ ಮುಂದುವರಿದರೆ ಒಂದೇ ವಾರದಲ್ಲಿ ಪೈಸಾ ವಸೂಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 'ವಿಜಲ್' ಚಿತ್ರ ತಮಿಳಿನ 'ಪಿಜ್ಜಾ' ರಿಮೇಕ್ ಆದರೂ ತಾಜಾ ಕಥೆ ಹಾಗೂ ನಿರೂಪಣೆಯಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್ ಅವರ ಸಂಗೀತ ಚಿತ್ರದ ಬಿಗಿ ನಿರೂಪಣೆಗೆ ಮತ್ತಷ್ಟು ಮೆರುಗು ನೀಡುತ್ತದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲಿಂಗ್, ಸೆಂಟಿಮೆಂಟ್ ಅಂಶಗಳಿಂದ ಕೂಡಿರುವ 'ವಿಜಲ್' ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುತ್ತಿದೆ.  (ಒನ್ಇಂಡಿಯಾ ಕನ್ನಡ)

English summary
Kannada film Whistle has got fantabulous opening and done a record breaking collection at the Indian Box Office on the first day. The Chiranjeevi Sarja and Pranitha starrer has collected Rs 37 lakhs nett at the domestic Box Office on the first day of its release. Director Prashanth Raj gives an exclusive report to Oneindia Kannada. 
Please Wait while comments are loading...