For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದಲೇ 'ವಿಜಲ್' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬದಲಾವಣೆ

  By Rajendra
  |

  ಚಿರಂಜೀವಿ ಸರ್ಜಾ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ ವಿಜಲ್ ಚಿತ್ರಕ್ಕೆ ರಾಜ್ಯದಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸಲ್ಲಿ ಎರಡನೇ ದಿನವು ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಒನ್ಇಂಡಿಯಾ ಕನ್ನಡ ಜೊತೆ ಮಾತಾನಾಡಿ ವಿವರಗಳನ್ನು ನೀಡಿದರು.

  ರಾಜ್ಯದ ಹೊರ ಭಾಗಗಳಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪುಣೆ,ಮುಂಬೈ ಹಾಗೂ ಚೆನ್ನೈ ಕೇಂದ್ರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವುದು ಇನ್ನೊಂದು ವಿಶೇಷ. ಎರಡನೆ ದಿನದ ಒಟ್ಟಾರೆ ಕಲೆಕ್ಷನ್ ರು.78 ಲಕ್ಷ ಎಂದು ಪ್ರಶಾಂತ್ ತಿಳಿಸಿದರು.

  ಎರಡು ನಿಮಿಷಗಳ ಕ್ಲೈಮ್ಯಾಕ್ಸ್ ಈಗ ಬದಲಾಗಿದ್ದು, ಭಾನುವಾರದಿಂದಲೇ (ಜು.21) ಇದು ಅನ್ವಯವಾಗಲಿದೆ. ಎರಡು ರೀತಿಯ ಕ್ಲೈಮ್ಯಾಕ್ಸ್ ಗಳನ್ನು ಮುಂಚೆಯೇ ಅಂದುಕೊಂಡಿದ್ದೆವು. ಹಾಗಾಗಿ

  ಈ ಬದಲಾವಣೆ ಎನ್ನುತ್ತಾರೆ ಪ್ರಶಾಂತ್. ವಿಜಲ್ ಚಿತ್ರ ಮೊದಲ ದಿನವೇ ರು.37 ಲಕ್ಷ ಗಳಿಸಿದ್ದು, ಈಗಲೂ ಬಾಕ್ಸ್ ಆಫೀಸಲ್ಲಿ ಮುನ್ನಡೆ ಸಾಧಿಸಿದೆ.

  ಸರಿಸುಮಾರು ರು.3 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಕಲೆಕ್ಷನ್ ಇದೇ ರೀತಿ ಮುಂದುವರಿದರೆ ಒಂದೇ ವಾರದಲ್ಲಿ ಪೈಸಾ ವಸೂಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 'ವಿಜಲ್' ಚಿತ್ರ ತಮಿಳಿನ 'ಪಿಜ್ಜಾ' ರಿಮೇಕ್ ಆದರೂ ತಾಜಾ ಕಥೆ ಹಾಗೂ ನಿರೂಪಣೆಯಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

  ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್ ಅವರ ಸಂಗೀತ ಚಿತ್ರದ ಬಿಗಿ ನಿರೂಪಣೆಗೆ ಮತ್ತಷ್ಟು ಮೆರುಗು ನೀಡುತ್ತದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲಿಂಗ್, ಸೆಂಟಿಮೆಂಟ್ ಅಂಶಗಳಿಂದ ಕೂಡಿರುವ 'ವಿಜಲ್' ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Prashanth Raj directed Kannada film 'Whistle' gets its climax changed. The director has opted a change in the climax. Now the climax has been re-edited. Meanwhile the movie is doing well at box-office especially in Mumbai, Pune & Chennai centres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X