For Quick Alerts
  ALLOW NOTIFICATIONS  
  For Daily Alerts

  ಯಾರೇ ಕೂಗಾಡಲಿ ಬಾಕ್ಸ್ ಆಫೀಸ್ ರಿಪೋರ್ಟ್

  By ಉದಯರವಿ
  |

  ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಬಾದ್ ಶಾ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೊಮ್ಮೆ ನಿರೂಪಿಸಿಕೊಂಡಿದ್ದಾರೆ. ಈ ಬಾರಿಯೂ ಅವರು ಬಾಕ್ಸ್ ಆಫೀಸಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅವರ 'ಯಾರೇ ಕೂಗಾಡಲಿ' ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. (ಚಿತ್ರ ವಿಮರ್ಶೆ ಓದಿ)

  ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ರು.16 ಕೋಟಿ ಕಲೆಕ್ಷನ್ ಮಾಡಿದೆ ಎನ್ನುತ್ತವೆ ಮೂಲಗಳು. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ ಎನ್ನಬಹುದು. ಸಾಮಾನ್ಯವಾಗಿ ಚಿತ್ರಗಳು ಶುಕ್ರವಾರ ಬಿಡುಗಡೆಯಾದರೆ 'ಯಾರೇ ಕೂಗಾಡಲಿ' ಚಿತ್ರ ಮಾತ್ರ ಗುರುವಾರವೇ (ಡಿಸೆಂಬರ್ 20) ತೆರೆಗೆ ಅಪ್ಪಳಿಸಿತು.

  ಬಿಡುಗಡೆಯಾದ ಎರಡೇ ದಿನಗಳಲ್ಲಿ ಚಿತ್ರ ರು.9 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಚಿತ್ರ ರೀಮೇಕ್ ಆದರೂ ಅಪ್ಪು ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಸರಿಸುಮಾರು ರು.9.8 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

  ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸಮುದ್ರ ಖಣಿ ಆಕ್ಷನ್ ಕಟ್ ಹೇಳಿದ್ದರು. ಪುನೀತ್ ರಾಜ್ ಕುಮಾರ್, ಭಾವನಾ, ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಮುಂತಾದವರು ತಾರಾಬಳಗದಲ್ಲಿದ್ದಾರೆ. (ಏಜೆನ್ಸೀಸ್)

  English summary
  Power Star Puneet Rajkumar starer Yaare Koogadali film beat Kannada film industry records. The film collects Rs 16 cr in first 4 days. The film is a remake of Samuthirakani's Tamil film, Poraali (2011) starring M. Sasikumar which saw a commercial success.
  Wednesday, December 26, 2012, 13:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X